Asianet Suvarna News Asianet Suvarna News

ಲಸಿಕೀಕರಣ: ಆರೋಗ್ಯ ಸಚಿವರ ಜಿಲ್ಲೆ ಚಿಕ್ಕಬಳ್ಳಾಪುರ ಮತ್ತೆ ಪ್ರಥಮ

  •  ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸತತ ಪರಿಶ್ರಮದ ಕಾರಣಕ್ಕೆ ಕೋವಿಡ್‌ ಲಸಿಕಾ ಮೇಳದಲ್ಲಿ ನಿಗದಿತ ಗುರಿ ಸಾಧನೆ
  •  ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೊಮ್ಮೆ ರಾಜ್ಯದಲ್ಲೇ ಪ್ರಥಮ ಸ್ಥಾನ 
Covid Vaccine  Chikkaballapur District Is   First Place In karnataka
Author
Bengaluru, First Published Oct 24, 2021, 10:41 AM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ (ಅ.24):  ಜಿಲ್ಲೆಯ ಆರೋಗ್ಯ ಇಲಾಖೆ (Health Department) ಅಧಿಕಾರಿ, ಸಿಬ್ಬಂದಿ ಸತತ ಪರಿಶ್ರಮದ ಕಾರಣಕ್ಕೆ ಕೋವಿಡ್‌ (Covid) ಲಸಿಕಾ ಮೇಳದಲ್ಲಿ ನಿಗದಿತ ಗುರಿ ಸಾಧನೆಯಲ್ಲಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಮತ್ತೊಮ್ಮೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.

ಹೌದು, ಕಳೆದ ಅ.22ರಂದು ನಡೆದ ಸಾಮೂಹಿಕ ಲಸಿಕಾ ಮೇಳದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 30,000 ಲಸಿಕಾಕರಣ (vaccination) ಗುರಿ ನೀಡಲಾಗಿತ್ತು. ಆದರೆ 23921 ಲಸಿಕಾಕರಣ ಮೂಲಕ ಶೇ.80ರಷ್ಟುಗುರಿ ಸಾಧನೆ ಮಾಡಿರುವ ಚಿಕ್ಕಬಳ್ಳಾಪುರ, ರಾಜ್ಯದಲ್ಲಿ ಇತರೇ ಜಿಲ್ಲೆಗಳಿಂತ ಹೆಚ್ಚು ಗುರಿ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ.

ಅಭಿನಂದನೆಗಳು ಭಾರತ: 100 ಕೋಟಿ ಲಸಿಕೆ ದಾಖಲೆ, RML ಆಸ್ಪತ್ರೆಗೆ ಪಿಎಂ ಮೋದಿ ಭೇಟಿ!

ಉಳಿದಂತೆ ಯಾದಗಿರಿ ಶೇ.58ರಷ್ಟುಗುರಿ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗ (Chitradurga) ಶೇ.50, ವಿಜಯಪುರ (Vijayapura) ಶೇ.49, ಕೋಲಾರ, ರಾಮನಗರ (Ramanagara) ತಲಾ ಶೇ. 44, ಮೈಸೂರು (Mysuru), ಗದಗ ಶೇ.42, ತುಮಕೂರು (Tuamkuru) ಶೇ.41, ಬಳ್ಳಾರಿ ಶೇ.39, ಮಂಡ್ಯ (Mandya, ದಾವಣಗೆರೆ ಶೇ.37, ಬೆಂಗಳೂರು ನಗರ (Bengaluru ) ಶೇ.36, ಕೊಪ್ಪಳ, ಚಿಕ್ಕಮಗಳೂರು, ಹಾಸನ ತಲಾ ಶೇ34ರಷ್ಟುಗುರಿ ಸಾಧಿಸಿದೆ.

ಇನ್ನೂ ರಾಜ್ಯದಲ್ಲಿ ನಡೆದ ಲಸಿಕಾ ಮೇಳದಲ್ಲಿ 15 ಜಿಲ್ಲೆಗಳು ತೀರ ಹಿನ್ನಡೆ ಸಾಧಿಸಿವೆ. ಇದರಲ್ಲಿ ಬೆಳಗಾವಿ(ಶೇ.12), ದಕ್ಷಿಣ ಕನ್ನಡ(ಶೇ.16), ಬಿಬಿಎಂಪಿ(ಶೇ.16), ಬೆಂಗಳೂರು ಗ್ರಾಮಾಂತರ(ಶೇ.17), ಚಾಮರಾಜನಗರ(ಶೇ.19), ಕಲಬುರ್ಗಿ(ಶೇ.20), ಕೊಡಗು(ಶೇ.21), ಉಡುಪಿ(ಶೇ.22), ಶಿವಮೊಗ್ಗ(ಶೇ.24), ಉತ್ತರ ಕನ್ನಡ(ಶೇ.25), ರಾಯಚೂರು(ಶೇ.26), ಬೀದರ್‌ (ಶೇ.27), ಬಾಗಲಕೋಟೆ(ಶೇ.28), ಹಾವೇರಿ(ಶೇ.30), ಧಾರವಾಡ(ಶೇ.32) ಜಿಲ್ಲೆಗಳು ಒಳಗೊಂಡಿವೆ.

ಜಿಲ್ಲೆಯಲ್ಲಿ 12,81,198 ಮಂದಿಗೆ ಲಸಿಕೆ

ಆರೋಗ್ಯ ಇಲಾಖೆ ಶನಿವಾರ ಪ್ರಕಟಿಸಿರುವ ಹೆಲ್ತ್‌ ಬುಲಿಟಿನ್‌ (Health Bulletin)  ಪ್ರಕಾರ ಜಿಲ್ಲೆಯಲ್ಲಿ ಒಟ್ಟು ಇದುವರೆಗೂ 12,81,198 ಕೋವಿಡ್‌ ಲಸಿಕೆ ಪಡೆದಿದ್ದಾರೆ. 18 ವರ್ಷ ಮೇಲ್ಪಟ್ಟವರಲ್ಲಿ 4,38,011 ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್‌ ಒಟ್ಟು 1,69.476 ಮಂದಿ ಪಡೆದಿದ್ದಾರೆ. 49-59 ವಯಸ್ಸಿನವರು ಮೊದಲ ಡೋಸ್‌ 2,19,372, ಎರಡನೇ ಡೋಸ್‌ ಒಟ್ಟು 1,49,972, 60 ವರ್ಷ ಮೇಲ್ಪಟ್ಟವರು ಮೊದಲ ಡೋಸ್‌ 1,48,746, ಎರಡನೇ ಡೋಸ್‌ 1,15,234 ಮಂದಿ ಪಡೆದುಕೊಂಡಿದ್ದಾರೆ.

Follow Us:
Download App:
  • android
  • ios