ಮಟ್ಕಾ, ಜೂಜು ರೇಸ್ ಆಡ್ತಿದ್ದವ್ರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದಾರೆ: ಸಿಟಿ ರವಿ
ಮಟ್ಕಾ, ಜೂಜು ರೇಸ್ ಆಡ್ತಿದ್ದವ್ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ(ನ.15): ಮಟ್ಕಾ, ಜೂಜು ರೇಸ್ ಆಡ್ತಿದ್ದವ್ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಸಿಟಿ ರವಿ, ರಾಜ್ಯಕ್ಕಿದ್ದ ಗ್ರಹಣ ಬಿಟ್ಟಿದೆ. 14 ತಿಂಗಳ ರಾಹು ಕೇತು ತೊಲಗಿದೆ. ಚಿಕ್ಕಬಳ್ಳಾಪುರದಲ್ಲಿ ಶುಕ್ರದೆಸೆ ಜೊತೆಗೆ ಗುರುಬಲ ಕೂಡಿಬಂದಿದೆ ಎಂದಿದ್ದಾರೆ.
ಕೆ. ಆರ್. ಪೇಟೆ: ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!
ಚುನಾವಣೆ ಯುದ್ಧವಿದ್ಧಂತೆ. ಕಾಂಗ್ರೆಸ್‌ನಿಂದ ನೈತಿಕ ಪಾಠ ಕಲಿಯಬೇಕಿಲ್ಲ, ಕೃಷ್ಣಭೈರೇಗೌಡ, ಜಮೀರ್ ಅಹಮದ್, ಚೆಲುವರಾಯಸ್ವಾಮಿ ಎಲ್ಲಿದ್ದರು, ಕಾಂಗ್ರೆಸ್ ಮಾಡೋದು ನೈತಿಕತೆನಾ..? ಮಟ್ಕಾ, ಜೂಜು ರೇಸ್ ಆಡುತ್ತಿದ್ದವರನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದಾರೆ. ಇದು ಯಾವ ನೈತಿಕತೆ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಜನರಿಗೆ ಅಭಿವೃದ್ಧಿ ಬೇಕಾ? ಇಲ್ಲವೇ ಗೂಂಡಾಗಿರಿ ಬೇಕಾ..? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ. ಸಮಾಜವಾದಿಗಳಿಗೆಲ್ಲ ಬ್ರಾಂಡೆಡ್ ಬೇಕು. ಅವರಿಗೆ ಕುಡಿಯೋದಕ್ಕೆ ಸ್ಕಾಚ್ ಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!