ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಉಪ್ಪಿನ ಗೊಂಬೆಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. ಸಿದ್ದುನ ವ್ಯಂಗ್ಯ ಮಾಡಿದ್ದೇಕೆ, ಏನು ಹೇಳಿದ್ರು ಎಂದು ತಿಳಿಯೋಕೆ ಈ ಸುದ್ದಿ ಓದಿ.

ಚಾಮರಾಜನಗರ(ಅ.19): ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಸಿದ್ದರಾಮಯ್ಯ ಅವರನ್ನು ಉಪ್ಪಿನ ಗೊಂಬೆಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್‌ನವರು ತಮಗೆ ಬೇಕಾದಂತೆ ಇತಿಹಾಸ ತಿರುಚುತ್ತಾರೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಅವರಿಗೆ ವೀರಸಾರ್ವಕರ್‌ ಬಗ್ಗೆ ಗೊತ್ತಿಲ್ಲ. ಉಪ್ಪಿನ ಗೊಂಬೆ ಸಮುದ್ರದ ಆಳ ನೋಡಿದಂತೆ ಸಿದ್ದರಾಮಯ್ಯಅವರು ವೀರ ಸಾರ್ವಕರ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ವ್ಯಂಗ್ಯ ಮಾಡಿದ್ದಾರೆ.

ಆಪರೇಷನ್ ಟೈಗರ್ ಬೆನ್ನಲ್ಲೇ ಮತ್ತೊಮ್ಮೆ ಆತಂಕ, ಹುಂಡೀಪುರ ಬಳಿ ಚಿರತೆ ಹೆಜ್ಜೆ ಪತ್ತೆ..!

ಸಿದ್ದರಾಮಯ್ಯ ಅಂಡಮಾನ್‌ನಲ್ಲಿರುವ ಸೆರೆಮನೆ ನೋಡಿದ್ದರೆ ವೀರಸಾರ್ವಕರ್‌ ಇತಿಹಾಸ ತಿಳಿಯುತ್ತಿತ್ತು. ಆದರೆ, ಸಿದ್ದರಾಮಯ್ಯ ಇದನ್ನು ನೋಡಲು ಹೋಗದೆ ಮೋಜು ಮಾಡಲು ಹೋಗಿರಬೇಕು ಅಷ್ಟೇ ಎಂದು ಶುಕ್ರವಾರ ರಾತ್ರಿ ವೀರಸಾರ್ವರ್ಕರ್‌ ಅವರ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಗಾಂಧೀಜಿ ಅವರಿಗೂ ವೀರಸಾರ್ವಕರ್‌ಗೂ ಕೆಲವು ಭಿನ್ನಾಭಿಪ್ರಾಯ ಇದ್ದುದ್ದು ನಿಜ. ಆದರೆ, ಅವರನ್ನು ಕೊಲ್ಲುವಷ್ಟರ ಮಟ್ಟಿಗೆ ಇರಲಿಲ್ಲ. ಸಿದ್ದರಾಮಯ್ಯ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದು ಕ್ಷುಲ್ಲಕವಾಗಿ ಮಾತನಾಡಬಾರದಿತ್ತು ಎಂದು ಕಿಡಿಕಾರಿದ್ದಾರೆ.

ಚುನಾವಣೆಗೆ ಅಗ್ರೆಸಿವ್ ಪ್ರಚಾರ ಮಾಡಿ ಎಂದ ಸಿದ್ದು