Chamarajanagar: ಶಾಲೆಗೆ ಹೋಗಬೇಕು ಬಸ್ ಬಿಡಿಸಿ ಸಿಎಂ ಅಂಕಲ್ : ಬುಡಕಟ್ಟು ಮಕ್ಕಳ ಮನವಿ
ರಾಜ್ಯದ ಗಡಿಜಿಲ್ಲೆ ಚಾಮರಾಜನಗರದ ಸೋಲಿಗ ಬುಡಕಟ್ಟಿಗೆ ಸೇರಿದ ಮಕ್ಕಳು ನಾವು ಶಾಲೆಗೆ ಹೋಗಬೇಕು, ನಮಗೆ ಬಸ್ ಬಿಡಿಸಿ ಸಿಎಂ ಅಂಕಲ್ ಎಂದು ಮನವಿ ಮಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಚಾಮರಾಜಗರ (ಡಿ.11): ರಾಜ್ಯದ ಎಲ್ಲ ಗಡಿ ಪ್ರದೇಶಗಳು ಹಾಗೂ ಅರಣ್ಯದಂಚಿನ ಪ್ರದೇಶಗಳು ಸ್ವಾತಂತ್ರ್ಯ ಸಿಕ್ಕು 75 ವಸಂತಗಳನ್ನು ಕಳೆದರೂ ಸಂಪೂರ್ಣವಾಗಿ ಮೂಲ ಸೌಕರ್ಯಗಳನ್ನು ಪಡೆದಿಲ್ಲ. ಇದಕ್ಕೆ ಸಾಕ್ಷಿಯಾಗುವಂತೆ ರಾಜ್ಯದ ಗಡಿಜಿಲ್ಲೆ ಚಾಮರಾಜನಗರದ ಸೋಲಿಗ ಬುಡಕಟ್ಟಿಗೆ ಸೇರಿದ ಮಕ್ಕಳು ನಾವು ಶಾಲೆಗೆ ಹೋಗಬೇಕು, ನಮಗೆ ಬಸ್ ಬಿಡಿಸಿ ಸಿಎಂ ಅಂಕಲ್ ಎಂದು ಮನವಿ ಮಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಗಡಿ ಜಿಲ್ಲೆಗೆ ಯಾವುದೇ ಅಧಿಕಾರಾರೂಢ ಮುಖ್ಯಮಂತ್ರಿಗಳು ಭೇಟಿ ನೀಡಿದರೆ ತಮ್ಮ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇತ್ತು. ಈಗಾಗಲೇ ಈ ನಂಬಿಕೆಯನ್ನು ಸಿದ್ಧರಾಮಯ್ಯ ಅವರು ದೂರ ಮಾಡಿದ್ದರು. ಇನ್ನು ಈಗ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಚಾಮರಾಜನಗರದಲ್ಲಿ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ, ಗುಜರಾತ್ ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ಇರುವ ಹಿನ್ನೆಲೆಯಲ್ಲಿ ಅಲ್ಲಿಗೆ ಹೊರಟ್ಟಿದ್ದು, ಸಿಎಂ ಪ್ರವಾಸವನ್ನು ಮುಂದೂಡಲಾಗಿದೆ. ಆದರೆ, ಈಗ ಜಿಲ್ಲೆಯ ಬುಡಕಟ್ಟು ಮಕ್ಕಳು ಮುಖ್ಯಮಂತ್ರಿ ಗಮನ ಸೆಳೆಯುವ ಉದ್ದೇಶದಿಂದ ತಮಗೆ ಶಾಲೆಗೆ ಹೋಗಲು ಬಸ್ ಬಿಡುವಂತೆ ಮನವಿ ಮಾಡಿದ್ದಾರೆ.
Chamarajanagar: ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪ್ಲಾಸ್ಟಿಕ್ ಚೀಲದಲ್ಲಿ ಪತ್ನಿಯ ದೇಹ ಸಾಗಿಸಿದ ಪತಿ
ಹನೂರಿಗೆ ಬಂದಾಗ ಬಸ್ ಬಿಡಿಸಿ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಅರೆಕಡುವಿನದೊಡ್ಡಿ ಗ್ರಾಮದ ಸೋಲಿಗ ಬುಡಕಟ್ಟು ವರ್ಗಕ್ಕೆ ಸೇರಿದ ಮಕ್ಕಳು ಶಾಲೆಗೆ 6 ಕಿ.ಮೀ. ನಡೆದುಕೊಂದು ಹೋಗಬೇಕಿದೆ. ಹೀಗಾಗಿ, ತಮಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡುವ ಮೂಲಕ ನಾಳೆ ಹನೂರಿಗೆ ಬರಲಿರುವ ಸಿಎಂ ಗಮನ ಸೆಳೆಯಲು ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಅರೆಕಡುವಿನದೊಡ್ಡಿ, ಕಂಬಿದೊಡ್ಡಿಯಲ್ಲಿ 40ಕ್ಕೂ ಅಧಿಕ ಮಕ್ಕಳು ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಬೈಲೂರು ವರೆಗೆ ನಡೆದುಕೊಂಡು ಹೋಗಬೇಕು. ಇದಕ್ಕೆ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ.
ಮನವಿ ವೀಡಿಯೋದಲ್ಲೇನಿದೆ?: ಸಿಎಂ ಅಂಕಲ್.. ನಾವು ಶಾಲೆಗೆ ಹೋಗಬೇಕು ಬಸ್ ಬಿಸಿಡಿ ಪ್ಲೀಸ್. ಬಸ್ ಬಿಡಿಸಲಿಲ್ಲ ಅಂದರೆ ನಾವು ಸ್ಕೂಲಿಗೆ ಹೋಗಲ್ಲ. ನೀವು ನಾಳೆ ಹನೂರಿಗೆ ಬಂದಾಗ ನಮಗೆ ಬಸ್ ಸೌಲಭ್ಯದ ಘೋಷಣೆ ಮಾಡಿ. ಇಲ್ಲಾ ಅಂದ್ರೆ ನಾವ್ ಸ್ಕೂಲಿಗೇ ಹೋಗಲ್ಲ. ದಿನಾ ಮೂರರಿಂದ ಆರು ಕಿಲೋಮೀಟರ್ ಮೀಟರ್ ನಡೀಬೇಕು. ಬ್ಯಾಗ್ ಹೊತ್ತೊಕೊಂಡು ಹೋಗುತ್ತಾ 3 ಕಿಲೋ ಮೀಟರ್, ಬರ್ತಾ 3 ಕಿಲೋ ಮೀಟರ್ ನಡೀಬೇಕು. ಸುತ್ತ ಕಾಡಿರೋದ್ರಿಂದ ಕಾಡು ಪ್ರಾಣಿಗಳ ಭಯ ಇದೆ. ಮಳೆ ಬಂದರೆ ಬ್ಯಾಗು, ಬಟ್ಟೆ ಎಲ್ಲ ನೆನದೋಯ್ತದೆ. ಇಲ್ಲಿ ರಸ್ತೆ ಚನ್ನಾಗಿದೆ. ಆದರೆ ಬಸ್ಸೆ ಬರೋದಿಲ್ಲ.. ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
Chamarajanagar: ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಹಿನ್ನೆಲೆ ಪೂರ್ವ ಸಿದ್ದತಾ ಸಭೆ
ಹೆಣ್ಣು ಮಕ್ಕಳ ಓದಿಗೆ ಪ್ರೋತ್ಸಾಹಿಸಿ: ಸಿಎಂ ಅಂಕಲ್ ನೀವು ಹೆಣ್ಣು ಮಕ್ಕಳು ಓದಬೇಕು ಎಂದು ಭಾಷಣದಲ್ಲಿ ಹೇಳುತ್ತೀರಿ. ಆದರೆ, ನಾವು ಊರಿನಿಂದ ಶಾಲೆಗೆ ಹೋಗಬೇಕು ಎಂದರೆ ಪ್ರತಿನಿತ್ಯ 6 ಕಿ.ಮೀ ನಡೆಯಬೇಕು. ದಾರಿಯಲ್ಲಿ ಆನೆ ಸೇರಿ ಇತರೆ ಕಾಡು ಪ್ರಾಣಿಗಳು ದಿನಾಲೂ ಕಾಣಿಸುತ್ತವೆ. ಮಳೆ ಬಂದರೆ ತೀವ್ರ ಸಮಸ್ಯೆ ಆಗುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಸುರಕ್ಷತೆಯ ಭಯವೂ ಇದ್ದು, ನೀವು ನಮಗೆ ಬಸ್ ಸೌಲಭ್ಯ ಕಲ್ಪಿಸಿಕೊಟ್ಟರೆ ಅನುಕೂಲ ಆಗುತ್ತದೆ ಎಂದು ಪಲ್ಲವಿ ಎನ್ನುವ ಪ್ರೌಢಶಾಲಾ ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.