Asianet Suvarna News Asianet Suvarna News

Chamarajanagara: ಅರಣ್ಯ ಇಲಾಖೆ ಫರ್ಮಾನು ನೋಡಿ ಕಂಗಾಲಾದ ಕಾಡಂಚಿನ ಜನ: ಜೀವನ ಮಾಡುವುದ್ಹೇಗೆ?

ಮೇಕೆ, ದನಗಳನ್ನು ಅವಶ್ಯಕತೆಗೆ ತಕ್ಕಂತೆ ಇಟ್ಟುಕೊಂಡು, ಉಳಿದವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ
ಅರಣ್ಯ ಇಲಾಖೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಜನರು
ಸಂಕಷ್ಟಕ್ಕೆ ಪಶು ಸಂಗೋಪನೆ ನಂಬಿಕೊಂಡವರ ಜೀವನ 

Forest Department order threatened forest edge people How to live sat
Author
First Published Dec 25, 2022, 6:17 PM IST

ವರದಿ - ಪುಟ್ಟರಾಜು.ಆರ್. ಸಿ. ಏಷ್ಯಾನೆಟ್ ಸುವರ್ಣನ್ಯೂಸ್ 

ಚಾಮರಾಜನಗರ (ಡಿ.25): ಸಾಗುವಳಿಗೆ  ಬೇಕಾಗುವಷ್ಟು ಮಾತ್ರ ದನ, ಮೇಕೆಗಳನ್ನ ಇಟ್ಟುಕೊಳ್ಳಿ ಉಳಿದ ದನ ಮೇಕೆಗಳನ್ನು ಬೇರೆಡೆಗೆ ಸಾಗಿಸಿ... ಹೀಗಂತ  ಅರಣ್ಯ ಇಲಾಖೆ ಕಾಡಂಚಿನ ಗ್ರಾಮಸ್ಥರಿಗೆ ಪರ್ಮಾನು ಹೊರಡಿಸಿದೆ. ಈ ಫರ್ಮಾನಿಂದ ರೈತರು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ನಾವೂ ನೂರಾರು ವರ್ಷಗಳಿಂದ ಕಾಡಿನಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸ್ತಿದ್ದೇವೆ. ಇದೀಗ ಸ್ಥಳಾಂತರ ಮಾಡಿ ಅಂದ್ರೆ ಹೇಗೆ ಅಂತಾ ಆತಂಕಕ್ಕೆ ಒಳಗಾಗಿದ್ದಾರೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಸ್ಥರಿಗೆ ಕಾವೇರಿ ವನ್ಯಧಾಮದ ಗೋಪಿನಾಥಂ ವಲಯ ಅರಣ್ಯಾಧಿಕಾರಿ ಮೇಕೆ,ಹಸುಗಳನ್ನು ಸ್ಥಳಾಂತರಿಸಿ ಎಂದು ಒಂದು ನೋಟೀಸ್ ನೀಡುವ ಮೂಲಕ ರೈತರು,ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅರಣ್ಯ ಇಲಾಖೆಯ ಈ ಸೂಚನೆಗೆ ರೈತರು ಆಕ್ರೋಶಗೊಂಡಿದ್ದಾರೆ. ಒಂದೆಡೆ ಗೋ ರಕ್ಷಣೆ ಮಾಡಬೇಕು ಎನ್ನುವ ಸರ್ಕಾರ ಹೈನುಗಾರಿಕೆಗೂ ಪ್ರೋತ್ಸಾಹ ನೀಡ್ತಾ ಇದೆ. ಆದರೆ ಇಲ್ಲಿ ನೋಡಿದ್ರೆ ಸಾಗುವಳಿಗೆ ಸಾಕಾಗುವಷ್ಟು ಮಾತ್ರ ಜಾನುವಾರುಗಳನ್ನು ಇಟ್ಕೊಳ್ಳಿ, ಉಳಿದವನ್ನು ಬೇರೆಡೆಗೆ ಸಾಗಿಸಿ ಎಂದು ನೋಟೀಸ್ ನೀಡುವ ಮೂಲಕ ದ್ವಂದ್ವ ನೀತಿ ಅನುಸರಿಸ್ತಾ ಇದೆ, ಹಾಗಿದ್ರೆ ಜಾನುವಾರುಗಳನ್ನು ಎಲ್ಲಿಗೆ ಸಾಗಿಸೋಣ ಎಂಬುದು ರೈತರ ಪ್ರಶ್ನೆಯಾಗಿದೆ.

ಹುಲಿ ಸಂರಕ್ಷಿತಾರಣ್ಯದಲ್ಲಿ ದನ ಮೇಯಿಸಲು ಆಕ್ಷೇಪ: ಇನ್ನು ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಲ್ಲಿ ಇರುವ ಬಹುತೇಕ ಕುಟುಂಬಗಳು ಜೀವನೋಪಯಕ್ಕೆ ಹೈನುಗಾರಿಕೆಯನ್ನೆ ಅವಲಂಬಿಸಿವೆ. ಹಾಗಾಗಿ ಪ್ರತಿಯೊಂದು ಕುಟುಂಬದಲ್ಲೂ ಹಸು, ಮೇಕೆ ಸಾಕುವುದು ಸರ್ವೆ ಸಾಮಾನ್ಯ ವ್ಯವಸಾಯಕ್ಕೆ ದನ ಕರುಗಳ ಅವಶ್ಯಕತೆ ಇದ್ದೆ ಇರುತ್ತದೆ ಕಾಡಿನ ಒಳಗೆ ಇರುವ ಗ್ರಾಮಗಳಾಗಿರುವುದರಿಂದ ಅಲ್ಲಿ ಟ್ರ್ಯಾಕ್ಟರ್ ಅಥವಾ ಇನ್ಯಾವುದೊ ವ್ಯವಸಾಯ ಮಾಡುವ ಉಪಕರಣಗಳು ಇರುವುದಿಲ್ಲ. ಈ ಕಾರಣದಿಂದ ಕಾಡಂಚಿನ ಗ್ರಾಮಗಳಲ್ಲಿ ನಾಟಿ ತಳಿಯ ದನಕರುಗಳ ಸಂಖ್ಯೆ ಹೆಚ್ಚಿದೆ. ಗ್ರಾಮಸ್ಥರು ದನಕರುಗಳನ್ನು ಮೇಯಲು ಕಾಡಿಗೆ ಬಿಡ್ತಾರೆ. ಕಳೆದ ವಾರ ಇಲ್ಲಿಗೆ ಬಂದಿದ್ದ ಕೇಂದ್ರ ಟಿ.ಆರ್. ತಂಡ ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜಾನುವಾರುಗಳ ಕಂಡು ಕೇಂದ್ರ ಆಕ್ಷೇಪಣೆ  ವ್ಯಕ್ತಪಡಿಸಿದೆ.

ಶಿವನೇ ನನಗೆ ಹುಡುಗಿ ಕರುಣಿಸು, ಶ್ರೀ ಚಾಮರಾಜೇಶ್ವರನಿಗೆ ಪತ್ರ ಬರೆದು ಹುಂಡಿಗೆ ಹಾಕಿದ ಭೂಪ!

ಅರಣ್ಯ ಇಲಾಖೆ ನೋಟಿಸ್‌ಗೆ ವಿರೋಧ: ಹಾಗಾಗಿ ಹೆಚ್ಚುವರಿ ಜಾನುವಾರು ಗಳನ್ನು ಬೇರೆಡೆಗೆ ಸಾಗಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸೂಚನೆ ಪಾಲಿಸದಿದ್ದರೆ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇಷ್ಟು ದಿವಸ ಆಗದ ತೊಂದರೆ ಈಗ ಏನಾಗಿದೆ. ಈ ಕ್ರಮವನ್ನು ವಿರೋಧಿಸಿರುವ ರೈತರು ಅರಣ್ಯ ಇಲಾಖೆಯ ಎಡವಟ್ಟಿನ ಆದೇಶ ವಿರೋಧಿಸಿ ಚಾಮರಾಜನಗರದಲ್ಲಿ ರೈತ ಸಂಘ ಸಾಂಕೇತಿಕ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡಿದೆ. ಅರಣ್ಯ ಇಲಾಖೆ ತನ್ನ ನೋಟೀಸ್ ಹಿಂಪಡೀಬೇಕು. ಇಲ್ಲದಿದ್ದರೆ ಜನಪ್ರತಿಗಳನ್ನು ಹಾಗೂ ಅಧಿಕಾರಿಗಳನ್ನು ಮಹದೇಶ್ವರ ಬೆಟ್ಟ ಪ್ರವೇಶ ಮಾಡದಂತೆ ತಡೆಯಬೇಕಾಗುತ್ತದೆ ಎಂದು ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ.

ಮೈಸೂರು ಮೃಗಾಲಯದಲ್ಲಿ 3 ಹುಲಿ ಮರಿಗಳ ದರ್ಶನಕ್ಕೆ ಚಾಲನೆ

ಹೈನುಗಾರಿಕೆ ಮಾಡುತ್ತಿದ್ದವರಿಗೆ ಆತಂಕ: ಒಟ್ಟಾರೆ ಹುಟ್ಟಿದಾಗಿನಿಂದಲೂ ಕಾಡಲ್ಲಿ ಹೈನುಗಾರಿಕೆ ನಂಬಿ ಜೀವನ ನಡೆಸ್ತಿರೋ ಕಾಡಿನ ಮಕ್ಕಳನ್ನು ಹೊರ ಹಾಕಲೂ ಅರಣ್ಯ ಇಲಾಖೆ ಮುಂದಾಗಿದ್ಯಾ ಅನುಮಾನ ಕಾಡುತ್ತೆ. ಇದು ವನ್ಯಧಾಮ ಕಾಡಿನ ಒಳಗೆ ದನಕರುಗಳಿಗೆ ಅವಕಾಶವಿಲ್ಲ ಅಂತಾ ಅರಣ್ಯಾಧಿಕಾರಿಗಳು ಉತ್ತರಿಸ್ತಿದ್ದಾರೆ. ಆದ್ರೆ ಸ್ಥಳೀಯರು ನಾವೂ ಯಾವುದೇ ಕಾರಣಕ್ಕೂ ಸ್ಥಳಾಂತರಿಸಿಲ್ಲ ಅಂತಿದ್ದೂ ಮುಂದೆ ಸ್ಥಳೀಯರು, ಅರಣ್ಯ ಇಲಾಖೆ ನಡುವೆ ಈ ವಿಚಾರವಾಗಿ ಫೈಟ್ ಮುಂದುವರಿಯುವ ಸಾಧ್ಯತೆಯಿದೆ..

Follow Us:
Download App:
  • android
  • ios