ಚಾಮರಾಜನಗರ(ಆ.02): ಸೇವೆಯಿಂದ ನಿವೃತ್ತಿಗೊಂಡ ಎರಡೇ ದಿನಕ್ಕೆ ಕೊರೊನಾ ವಾರಿಯರ್ ನಿಧನರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸೇವೆಯಿಂದ ನಿವೃತ್ತಿಗೊಂಡ ಎರಡೇ ದಿನಕ್ಕೆ ಅಧಿಕಾರಿ ಮೃತಪಟ್ಟಿದ್ದಾರೆ.

ಚಾಮರಾಜನಗರ ಆಯುಷ್ ಇಲಾಕೆ ನಿವೃತ್ತ ವೈದ್ಯಾಧಿಕಾರಿ ಕೊರೊನಾಗೆ ಬಲಿಯಾಗಿದ್ದು, 60 ವರ್ಷದ ರಾಚಯ್ಯ ಕೊರೊನಾಗೆ ಬಲಿಯಾದ ನಿವೃತ್ತ ವೈದ್ಯಾಧಿಕಾರಿ. 4 ತಿಂಗಳಿಂದ ಕೊರೊನಾ ಡ್ಯೂಟಿ ಮಾಡಿದ್ದ ಅಧಿಕಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮಾಜಿ ಎಂಲ್ಸಿ ಐವನ್‌ಗೆ ಕೊರೋನಾ, ಸೆಲ್ಫ್ ಕ್ವಾರೆಂಟೈನ್ ಆದ ಶಾಸಕ ಖಾದರ್

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಆ.02ರಂದು ಸಾವನ್ನಪ್ಪಿದ್ದಾರೆ. ಜುಲೈ 31ರಂದು ಸೇವೆಯಿಂದ ನಿವೃತ್ತರಾಗಿದ್ದರು.