ಬೆಂಗಳೂರು, (ಜ.02): ಭಾರತೀಯ ರೈಲ್ವೇ ನೇಮಕಾತಿ ಮಂಡಳಿ 14033 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಜ್ಯೂನಿಯರ್ ಇಂಜಿನಿಯರ್ 13034, ಜ್ಯೂನಿಯರ್ ಇಂಜಿನಿಯರ್ (information technology) 49, Depot material superintendent 456, Chemical and metallurgical assistant 494 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾರಿಗೆ ಇಲಾಖೆ ಖಾಲಿ ಹುದ್ದೆಗಳ ಭರ್ತಿ ಶೀಘ್ರ, ಪರೀಕ್ಷೆ ಹೇಗಿರುತ್ತದೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 2 ರಿಂದ ಜ.31ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ರೈಲ್ವೇ ನೇಮಕಾತಿ ಮಂಡಳಿ ಪಾರದರ್ಶಕವಾಗಿ ಕಂಪ್ಯೂಟರ್ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಯಾವುದೇ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ವಿದ್ಯಾರ್ಹತೆ [ಜೂನಿಯರ್ ಇಂಜಿನಿಯರ್]: ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಪ್ಲೊಮಾ / ಸಂಬಂಧಿತ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ, ರಾಸಾಯನಿಕ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ವಿಜ್ಞಾನದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ, ವಿದ್ಯಾರ್ಹತೆ ಹೊಂದಿರಬೇಕು.

BSF ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

 [ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆ] ಡಿಪ್ಲೊಮಾ / ಯಾವುದೇ ವಿಭಾಗದಿಂದ ಎಂಜಿನಿಯರಿಂಗ್ ಪದವಿ. ಮತ್ತು ಜೂನಿಯರ್ ಇಂಜಿನಿಯರ್ (ಇನ್ಫರ್ಮೇಷನ್ ಟೆಕ್ನಾಲಜಿ) ಹುದ್ದೆಗಳಿಗೆ ಪಿಜಿಡಿಸಿಎ / ಬಿಎಸ್ಸಿ (ಕಂಪ್ಯೂಟರ್ ಸೈನ್ಸ್), ಬಿ.ಸಿ.ಎ, ಬಿ.ಟೆಕ್ ವಿದ್ಯಾರ್ಹತೆ ಪಡೆದಿರಬೇಕು.

ವೇತನ ಶ್ರೇಣಿ : 35,400 (ಲೆವಲ್ 6 ಆಫ್ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್). ಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ 500 ರೂ., ಎಸ್‌ಸಿ/ಎಸ್‌ಟಿ/ಓಬಿಸಿ/ಅಂಗವಿಕಲ/ಮಾಜಿ ಸೈನಿಕರಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/1/2019ಕ್ಕೆ ಅನ್ವಯವಾಗುವಂತೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.