ಭಾರತ ಗಡಿ ಭದ್ರತಾ ಪಡೆ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಸಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಇದಕ್ಕೆ ಬೇಕಾದ ಅರ್ಹತೆಗಳು ಈ ಕೆಳಗಿನಂತಿದೆ. 

ನವದೆಹಲಿ, (ಡಿ. 21): ಭಾರತ ಗಡಿ ಭದ್ರತಾ ಪಡೆ (ಬಿಎಸ್ಎಫ್) 2018-19ನೇ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟು 63 ಕಾನ್ಸ್ ಟೇಬಲ್ ಹುದ್ದೆಗಳಿಗೆ ಬಿಎಸ್ಎಫ್ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 17ರಿಂದ 30 ದಿನಗಳ ಕಾಲ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

KPSC ನೇಮಕಾತಿ: ಗ್ರೂಪ್ ಎ, ಬಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಹುದ್ದೆ : 63 
ಹುದ್ದೆ ಹೆಸರು: ಕಾನ್ಸ್ ಟೇಬಲ್ ಉದ್ಯೋಗ 
ಸ್ಥಳ: ಭಾರತದೆಲ್ಲೆಡೆ 
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ತೇರ್ಗಡೆಯಾಗಿರಬೇಕು.

ಸಂಬಳ: 21,7000 ಪ್ರತಿ ತಿಂಗಳು 
ನೇಮಕಾತಿ ಪ್ರಕ್ರಿಯೆ: ದೈಹಿಕ ಪರೀಕ್ಷೆ, ಟ್ರಯಲ್ ಟೆಸ್ಟ್, ವೈದ್ಯಕೀಯ ಪರೀಕ್ಷೆ ಪ್ರಮುಖ 
ಅರ್ಜಿ ಸಲ್ಲಿಸುವ ದಿನಾಂಕ: ಡಿಸೆಂಬರ್ 17ರಿಂದ 30 ದಿನಗಳ ಕಾಲ.

ಅರ್ಜಿ ಸಲ್ಲಿಸುವ ವಿಳಾಸ: The Commandant, 95 Bn BSF, Bhondsi, Post Office- Bhondsi, District- Gurugram, Haryana - 122102.

ಇನ್ನಷ್ಟು ಮಾಹಿತಿಗಾಗಿ ಅಧಿಕೃತ ಕಚೇರಿ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ