ಬೆಂಗಳುರು, [ಜ.09]: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 102 ಹುದ್ದೆಗಳ ನೇಮಕಾತಿಗಾಗಿ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯನಿರ್ವಾಹಕ ಶಾಖೆಯಲ್ಲಿ ನೌಕಾ ಶಸ್ತ್ರಾಸ್ತ್ರ ಪರೀಕ್ಷಾಧಿಕಾರಿ (NAIC) ಮತ್ತು ಸಣ್ಣ ಸೇವಾ ಆಯೋಗದ (SSU) ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ನೌಕಾಪಡೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

KSRTCಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

12 ನೇ ಜನವರಿ 2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 1 ನೇ ಫೆಬ್ರವರಿ 2019ರ ವರೆಗೆ ಅರ್ಜಿ ಸಲ್ಲಿಸಲು ದಿನಾಂಕವಾಗಿರುತ್ತದೆ.

ನೌಕಾ ಶಸ್ತ್ರಾಸ್ತ್ರ ಪರೀಕ್ಷಾಧಿಕಾರಿ (NAIC) ಮತ್ತು ಸಣ್ಣ ಸೇವಾ ಆಯೋಗದ (SSU) ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಲ್ಲಿ  ಇಂಜಿನಿಯರಿಂಗ್ ಪದವಿ ಅಥವಾ ಎಐಸಿಟಿಇ ಮಾನ್ಯತೆ ಶೈಕ್ಷಣಿಕ ಸಂಬಂಧಿತ ನೀಡಲಾದ ಪ್ರಮಾಣ ಪತ್ರ ಹೊಂದಿರಬೇಕು.

ವಿವಿಧ ಹುದ್ದೆಗಳ ನೇಮಕಾತಿಗೆ BMRCL ಅರ್ಜಿ ಆಹ್ವಾನ

 ಜನವರಿ 2ಕ್ಕೆ ಅನ್ವಯವಾಗುವಂತೆ 1995 ಮತ್ತು 01 ಜುಲೈ 2000 ರ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ಇನ್ನು ಅರ್ಜಿದಾರರಿಗೆ ಯಾವುದೇ ರೀತಿಯ ಶುಲ್ಕ ಇಲ್ಲ. ಆಯ್ಕೆ ಪ್ರಕ್ರಿಯೆ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಬಗ್ಗೆ ಇನ್ನಷ್ಟು ಅಧಿಕೃತ ಕಚೇರಿಯಲ್ಲಿ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.