ಬೆಂಗಳೂರು, (ಜ.04) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ [ಕೆಎಸ್ಆರ್‌ಟಿಸಿ]ದಲ್ಲಿ ಖಾಲಿ ಇರುವ ITS Consultant ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಜನವರಿ 15, 2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿವಿಧ ಹುದ್ದೆಗಳ ನೇಮಕಾತಿಗೆ BMRCL ಅರ್ಜಿ ಆಹ್ವಾನ

ITS Consultant ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಬೇಕು.  ಜೊತೆಗೆ ಮೈಸೂರು ಮತ್ತು ಇತರ ಸ್ಥಳಗಳಿಗೆ ಆಗಾಗ ಭೇಟಿ ನೀಡಬೇಕಾಗುತ್ತದೆ. ಎರಡು ವರ್ಷಗಳ ಗುತ್ತಿಗೆ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ವಿಸ್ತರಣೆಯನ್ನು ಸಹ ಮಾಡಬಹುದಾಗಿದೆ. ಎಂದು ಕೆಎಸ್ಆರ್‌ಟಿಸಿ ಸ್ಪಷ್ಟವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತರೆ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ (ಎಲೆಕ್ಟ್ರಾನಿಕ್ಸ್&ಕಮ್ಯನಿಕೇಷನ್) ವಿತ್ ಪಿಎಂ ಸರ್ಟಿಫೈಡ್ ವ್ಯಾಸಂಗ ಮಾಡಿರಬೇಕು. 

ವೇತನ ಶ್ರೇಣಿ:  1,25,000 ರೂ. ಒಂದು ತಿಂಗಳಿಗೆ 
ಅರ್ಜಿ ಸಲ್ಲಿಸುವುದು ಹೇಗೆ?:  ಆನ್‌ಲೈನ್ ಮೂಲಕ ಸಿಗವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಭ್ಯರ್ಥಿಗಳು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಅಂಚೆ ಲಕೋಟೆ ಮೇಲೆ application for ITS Consultant ಎಂದು ನಮೂದಿಸಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಮ್ಯಾನೇಜಿಂಗ್ ಡೈರೆಕ್ಟರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಟ್ರಾನ್ಸ್‌ಪೋರ್ಟ್ ಹೌಸ್ ಕೆ.ಎಚ್.ರಸ್ತೆ ಶಾಂತಿನಗರ ಬೆಂಗಳೂರು-560027 .

ನೇಮಕಾತಿ ಆದೇಶವನ್ನು ಕಚೇರಿಯ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.