Asianet Suvarna News Asianet Suvarna News

UPSC success story: ಟೀ ಮಾರಿದ ಯುವಕ ಮಂಗೇಶ್ ಖಿಲಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌; ಹೋರಾಟದ ಹಾದಿ ಹೀಗಿದೆ..

ಕಾಲೇಜು ಮುಗಿಸಿದ ನಂತರ ತಮ್ಮ ತಂದೆಯ ಟೀ ಅಂಗಡಿ ನಡೆಸಲು ಸಹಾಯ ಮಾಡಿದ ಮಂಗೇಶ್ ಖಿಲಾರಿ ಅವರು 2022 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 396 ನೇ ಸ್ಥಾನವನ್ನು ಪಡೆದಿದ್ದಾರೆ. ಇವರು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಸಂಗಮನೇರ್ ತಾಲೂಕಿನ ಸುಕೇವಾಡಿ ಗ್ರಾಮದವರು. 

upsc success story meet mangesh khilari son of chai stall owner who cracked ias exam with 396th rank ash
Author
First Published Jul 27, 2023, 1:04 PM IST

ನವದೆಹಲಿ (ಜುಲೈ 27, 2023): ಅತ್ಯಂತ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆಯು (UPSC)  ಪಾಸಾಗಲು ಬಹುತೇಕರಿಗೆ ಸಾಧ್ಯವಾಗೋದೇ ಇಲ್ಲ. ಏಕೆಂದರೆ ಈ ಪರೀಕ್ಷೆ ಉತ್ತೀರ್ಣರಾಗಲು ಬಯಸಿದರೆ ಆಕಾಂಕ್ಷಿಗಳು ವರ್ಷಗಳ ಪ್ರಯತ್ನ, ತಾಳ್ಮೆ, ಉತ್ಸಾಹ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಇದರ ಯಶಸ್ಸಿಗೆ ಒಂದೇ ಸೂತ್ರವಿಲ್ಲ.ನಾವು ಈ ಲೇಖನದಲ್ಲಿ ಮಂಗೇಶ್ ಖಿಲಾರಿ ಅವರ ಯುಪಿಎಸ್‌ಸಿಯ ಅಸಕ್ತಿದಾಯಕ ಯಶಸ್ಸಿನ ಕಥೆ ಇಲ್ಲಿದೆ. 

ಕಾಲೇಜು ಮುಗಿಸಿದ ನಂತರ ತಮ್ಮ ತಂದೆಯ ಟೀ ಅಂಗಡಿ ನಡೆಸಲು ಸಹಾಯ ಮಾಡಿದ ಮಂಗೇಶ್ ಖಿಲಾರಿ ಅವರು 2022 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 396 ನೇ ಸ್ಥಾನವನ್ನು ಪಡೆದಿದ್ದಾರೆ. ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಸಂಗಮನೇರ್ ತಾಲೂಕಿನ ಸುಕೆವಾಡಿ ಗ್ರಾಮದವರಾದ ಮಂಗೇಶ್ ಖಿಲಾರಿ ಕಳೆದ ನಾಲ್ಕು ವರ್ಷಗಳಿಂದ ಪುಣೆಯಲ್ಲಿ ಓದುತ್ತಿದ್ದಾರೆ. ಈ ಸಾಧನೆಗೆ ತನ್ನ ಹೆತ್ತವರ ಬಲವಾದ ಬೆಂಬಲವಿದೆ ಎಂದು ಹೇಳೋದನ್ನು ಅವರು ಮರೆಯಲಿಲ್ಲ. 

ಇದನ್ನು ಓದಿ: ಹೋಟೆಲ್‌ ಮಾಣಿಯಾಗಿದ್ದೋರು IAS ಅಧಿಕಾರಿಯಾದ್ರು: 7ನೇ ಪ್ರಯತ್ನದಲ್ಲಿ ನನಸಾಯ್ತು UPSC ಕನಸು!

ಮಂಗೇಶ್ ಖಿಲಾರಿ ತನ್ನ 10 ನೇ ತರಗತಿಯನ್ನು ಗ್ರಾಮದಲ್ಲಿ ಮುಗಿಸಿದ ನಂತರ ಸಂಗಮ್ನೇರ್ ತಾಲೂಕಿಗೆ ಸ್ಥಳಾಂತರಗೊಂಡರು. ನಂತರ, ಪುಣೆಯಲ್ಲಿ ರಾಜಕೀಯ ವಿಜ್ಞಾನ ಪದವಿ ಪಡೆದಿದ್ದಾರೆ. ಇನ್ನು, ಯುಪಿಎಸ್‌ಸಿ ಪರೀಕ್ಷೆ ಅಧ್ಯಯನ ಮಾಡಿದ್ದು ಹೇಗೆ ಅನ್ನೋದನ್ನೂ ಅವರು ವಿವರಿಸಿದ್ದಾರೆ. “ಎರಡು ಬಾರಿ ಸಂದರ್ಶನದ ಹಂತವನ್ನು ತಲುಪಿದ ನಂತರ ಮೂರನೇ ಪ್ರಯತ್ನದಲ್ಲಿ ನಾನು ಯಶಸ್ವಿಯಾಗಿದ್ದೇನೆ. ಕಳೆದ ಬಾರಿ ಕೇವಲ ಮೂರು ಅಂಕಗಳಿಂದ ರ‍್ಯಾಂಕ್‌ ಕಳೆದುಕೊಂಡಿದ್ದೆ. ನಾನು ಪ್ರತಿದಿನ 15-16 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ ಮತ್ತು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಲ್ಲಿಸಿದ್ದೆ ಎಂದು ಮಂಗೇಶ್ ಖಿಲಾರಿ ಹೇಳಿದ್ದಾರೆ.

ಇದೇ ರೀತಿ, ಮತ್ತೊಬ್ಬ ಆಕಾಂಕ್ಷಿ ಸಾಗರ್ ಖಾರಡೆ, "ನಾನು ಐದನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ ಮತ್ತು 445 ನೇ ರ‍್ಯಾಂಕ್‌ ಗಳಿಸಿದ್ದೇನೆ" ಎಂದು ಹೇಳಿದ್ದಾರೆ. ಕೃಷಿ ನಡೆಸುತ್ತಿದ್ದ ತಂದೆ-ತಾಯಿ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಸಾಗರ್‌ಗೆ ಕೆಲಸ ಸಿಗಬೇಕಿತ್ತು. ಕೆಲಸದ ಕಾರಣದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಪರೀಕ್ಷೆಗಳಿಗೆ ಅಧ್ಯಯನ ಮಾಡಲು, ಅವರು ಅಂತಿಮವಾಗಿ 2018 ರಲ್ಲಿ ತಮ್ಮ ಉತ್ತಮ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದೂ  ತಿಳಿದುಬಂದಿದೆ. "ನಾನು ಎರಡು ಬಾರಿ ಸಂದರ್ಶನದ ಹಂತವನ್ನು ತಲುಪಿದ್ದೇನೆ" ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್‌ ಜೈಸ್ವಾಲ್‌: ಹೋರಾಟದ ಹಾದಿ ಹೀಗಿದೆ..

ನಾಗರಿಕ ಸೇವಾ ಪರೀಕ್ಷೆ 2022 ರ ಅಂತಿಮ ಫಲಿತಾಂಶಗಳನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಮೇ 23 ರಂದು ಪ್ರಕಟಿಸಿದೆ.

ಇದನ್ನೂ ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್‌: ದೇಶಕ್ಕೆ 55ನೇ ರ‍್ಯಾಂಕ್‌ ಪಡೆದ ಭಾವನಾ ರಾಜ್ಯಕ್ಕೆ ನಂ. 1

Follow Us:
Download App:
  • android
  • ios