ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಂಜಿನಿಯರ್ ಹುದ್ದೆ, ಏಪ್ರಿಲ್ 18 ಅರ್ಜಿ ಸಲ್ಲಿಸಲು ಕೊನೆ ದಿನ
ಸ್ಟಾಫ್ ಸೆಲೆಕ್ಷನ್ ಕಮಿಷನ್ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವಿಭಾಗದ 968 ಜೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನವಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವಿಭಾಗದ 968 ಜೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನವಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ –ಬಿ ವಿಭಾಗದ ೯೬೮ ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ: ಜೂನಿಯರ್ ಇಂಜಿನಿಯರ್ (ಗ್ರೂಪ್ –ಬಿ): 968 ಹುದ್ದೆ
ಸುಖ ನಿದ್ರೆಗೆ ಅಕ್ಕ ಪೆಗ್ ಜಾಸ್ತಿ ಹಾಕಬೇಕು, ಹೆಬ್ಬಾಳ್ಕರ್ ಬಗ್ಗೆ ಕೀ ...
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2024
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕ (ಪೇಪರ್-1): 04-06-2024 ರಿಂದ 06-06-2024
ಅರ್ಜಿ ಶುಲ್ಕ
ಅರ್ಜಿ ಶುಲ್ಕ: ರು. 100
ಎಸ್ ಸಿ/ ಎಸ್ ಟಿ/ ಮಹಿಳೆಯರಿಗೆ ಮತ್ತು ಮಾಜಿ ಸೈನಿಕರಿಗೆ: ಶುಲ್ಕ ಇಲ್ಲ
ವಯಸ್ಸಿನ ಮಿತಿ (01-08-2024 ರಂತೆ) : ಗರಿಷ್ಟ ವಯಸ್ಸಿನ ಮಿತಿ: 30 ವರ್ಷಗಳು
ಗುಜರಾತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ 50 ಲಕ್ಷ ಸಂಗ ...
ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ / ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪದವಿಯನ್ನು ಪಡೆದಿರಬೇಕು.
ವೇತನ ಶ್ರೇಣಿ
ರು.35400-112400
ಪರೀಕ್ಷಾ ಕೇಂದ್ರಗಳು
ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ , ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಪರೀಕ್ಷಾ ಮಾಹಿತಿ: ಇಲ್ಲಿ ಪೇಪರ್ -1 ಮತ್ತು ಪೇಪರ್-2 ಎಂಬ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪೇಪರ್-1: ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು ಸಾಮಾನ್ಯ ಜ್ಞಾನ, ತಾರ್ಕಿಕತೆ ಬುದ್ದಿಮತ್ತೆ, ಸಾಮಾನ್ಯ ಇಂಜಿನಿಯರಿಂಗ್ (ಸಿವಿಲ್/ಎಲೆಕ್ಟ್ರಿಕಲ್/ ಮೆಕ್ಯಾನಿಕಲ್) ವಿಷಯಗಳಿಗೆ ಸಂಬಂಧಿಸಿದಂತೆ 200 ಅಂಕಗಳಿಗೆ 2 ಗಂಟೆಯ ಅವಧಿಯಲ್ಲಿ ಪರೀಕ್ಷೆಯನ್ನು ನಡೆಲಾಗುತ್ತದೆ.
ಪೇಪರ್-2: ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ಈ ಸುತ್ತಿನಲ್ಲಿ ಸಿವಿಲ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಕ್ಕೆ ಸಂಬಂಧಸಿದ 300 ಅಂಕಗಳಿಗೆ 2 ಗಂಟೆಯ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಆಯ್ಕೆ ವಿಧಾನ: ಪೇಪರ್-1 ಮತ್ತು ಪೇಪರ್ -2 ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದವರಿಗೆ ಶೇಕಡಾ 30 ಅಂಕ, ಓಬಿಸಿ ವರ್ಗದವರಿಗೆ ಶೇಕಡಾ 25 ಅಂಕ, ಇನ್ನಿತರ ವರ್ಗದವರಿಗೆ ಶೇಕಡಾ 20 ಅಂಕಗಳು ಕಡ್ಡಾಯವಾಗಿದ್ದು, ಮೆರಿಟ್ ಆಧಾರದ ಮೇಲೆ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ : https://ssc.gov.in