Asianet Suvarna News Asianet Suvarna News

ನೈಋತ್ಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ

ನೈರುತ್ಯ ರೈಲ್ವೆ ಇಲಾಖೆ ಅಪ್ರೆಂಟಿಸ್ 1961ರ ಅನ್ವಯ ನೇಮಕಾತಿ ಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

South Western Railway Recruitment 2020-21: Apply Online for SWR 1004 Apprentice Posts rbj
Author
Bengaluru, First Published Dec 12, 2020, 2:28 PM IST
  • Facebook
  • Twitter
  • Whatsapp

ಬೆಂಗಳೂರು, (ಡಿ.12): ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1004 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

11-12-2020ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 09-01-2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ: 09-01-2021ಕ್ಕೆ ಅನ್ವಯವಾಗುವಂತೆ  24 ವರ್ಷ ಮೀರಿರಾರದು.

ವಿದ್ಯಾರ್ಹತೆ : ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆ ಅಥವಾ ಅದರ ತತ್ಸಮಾನ (10+2 ಪರೀಕ್ಷಾ ಪದ್ಧತಿಅಡಿಯಲ್ಲಿ) ಕನಿಷ್ಠ 50% ಅಂಕಗಳೊಂದಿಗೆ, ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು ಮತ್ತು ಎನ್ ಸಿವಿಟಿ/ಎಸ್ ಸಿವಿಟಿ ಯಿಂದ ಹೊರಡಿಸಲಾದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.

ಅರ್ಜಿ ಶುಲ್ಕ : 100 ರೂ. ಆನ್ ಲೈನ್ ಅರ್ಜಿಗಳನ್ನು ಪ್ರಕ್ರಿಯೆಯ ಭಾಗವಾಗಿ ಪೇಮೆಂಟ್ ಗೇಟ್ ವೇ ಮೂಲಕ ಆನ್ ಲೈನ್ ಮೂಲಕ ಪಾವತಿ ಮಾಡಬೇಕು.

 ಹುದ್ದೆಯ ವಿವರಗಳು
1 ಹುಬ್ಬಳ್ಳಿ    287
2 ಬೋಗಿ ದುರಸ್ತಿ ಕಾರ್ಯಾಗಾರ, ಹುಬ್ಬಳ್ಳಿ- 217
3 ಬೆಂಗಳೂರು 280
4 ಮೈಸೂರು 177
5 ಕೇಂದ್ರ ಕಾರ್ಯಾಗಾರ, ಮೈಸೂರು  43

Follow Us:
Download App:
  • android
  • ios