ಸೇನೆಗೆ ಸೇರ್ಪಡೆ ಸಂಬಂಧ ಈ ವರ್ಷದ ಕೊನೆಯ ಮತ್ತು ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರಾರ‍ಯಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ. ಬೆಳಗಾವಿ, ಬೀದರ್‌, ಕಲಬುರಗಿ, ಕೊಪ್ಪಳ , ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 70,137 ಮಂದಿ ರಾರ‍ಯಲಿಗೆ ಹೆಸರು ನೋಂದಾಯಿಸಿಕೊಂಡಿದ್ದು, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಬೆಂಗಳೂರು (ಡಿ.5) : ಸೇನೆಗೆ ಸೇರ್ಪಡೆ ಸಂಬಂಧ ಈ ವರ್ಷದ ಕೊನೆಯ ಮತ್ತು ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರಾರ‍ಯಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ.

ಬೆಳಗಾವಿ, ಬೀದರ್‌, ಕಲಬುರಗಿ, ಕೊಪ್ಪಳ , ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 70,137 ಮಂದಿ ರಾರ‍ಯಲಿಗೆ ಹೆಸರು ನೋಂದಾಯಿಸಿಕೊಂಡಿದ್ದು, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಅಭ್ಯರ್ಥಿಗಳು ದಾಖಲೆಗಳ ಮೂಲ ಪ್ರತಿಯೊಂದಿಗೆ ಎರಡು ಪ್ರಮಾಣಿಕರಿಸಿದ ಪೋಟೋ ಕಾಪಿಗಳನ್ನು ರಾರ‍ಯಲಿ ನಡೆಯುವಲ್ಲಿಗೆ ತರಬೇಕು. ತಾತ್ಕಾಲಿಕ ಅಂಕಪಟ್ಟಿಯನ್ನು ಸಲ್ಲಿಸುವುದಾದರೆ ಸಂಸ್ಥೆ ಅಥವಾ ಮಂಡಳಿ, ವಿಶ್ವವಿದ್ಯಾಲಯದದ ಮುಖ್ಯಸ್ಥರ ಸಹಿ ಹೊಂದಿರಬೇಕು. ಆಧಾರ್‌ ಕಾರ್ಡ್‌ ತರಬೇಕು ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳು ಒಂದು ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದರೆ ಅವರನ್ನು ಅನರ್ಹಗೊಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ನಿಗದಿತ ದಿನಾಂಕದಲ್ಲಿ ನಸುಕಿನ 3.30ರೊಳಗೆ ಆಯ್ಕೆ ರಾರ‍ಯಲಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.

ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ ಇರುವಂತೆಯೇ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ ಮತ್ತು ತಾಯಿಯ ಹೆಸರು, ಹುಟ್ಟಿದ ದಿನಾಂಕ ನಮೂದಿಸಿರಬೇಕು ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಗ್ನಿವೀರರಾಗಲೂ ಹಿಂದಿ, ಇಂಗ್ಲಿಷ್‌ನಲ್ಲೇ ಪರೀಕ್ಷೆ: ಕನ್ನಡಕ್ಕಿಲ್ಲ ಅವಕಾಶ..!