South Central Railway Recruitment 2022: ಕ್ರೀಡಾ ಕೋಟದಡಿ SSLC, PUC ಪಾಸಾದವರಿಗೆ ಉದ್ಯೋಗವಕಾಶ

ದಕ್ಷಿಣ ಮಧ್ಯ ರೈಲ್ವೆ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರೀಡಾ ಕೋಟದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ. 

South Central Railway Recruitment notification for Apply for Sports Quota gow

ಬೆಂಗಳೂರು(ಜ.12): ದಕ್ಷಿಣ ಮಧ್ಯ ರೈಲ್ವೆ (South Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೀಡಾ​ ಕೋಟಾದ (Sports Quota) ಒಟ್ಟು 21  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ scr.indianrailways.gov.in ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ದಕ್ಷಿಣ ಮಧ್ಯ ರೈಲ್ವೆ ನೇಮಕಾತಿಯ ಕ್ರೀಡಾ​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12 ನೇ ತರಗತಿ, ಐಟಿಐ ಪಾಸಾಗಿರಬೇಕು.

ವಯೋಮಿತಿ: ದಕ್ಷಿಣ ಮಧ್ಯ ರೈಲ್ವೆ ನೇಮಕಾತಿಯ ಕ್ರೀಡಾ​ ಕೋಟಾ (Sports Quota) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1, 2022ಕ್ಕೆ 18-25 ವರ್ಷದೊಳಗಿರಬೇಕು. 

ಅರ್ಜಿ ಶುಲ್ಕ: SC/ST/ಮಹಿಳೆ/ಅಲ್ಪಸಂಖ್ಯಾತ/EBC ಅಭ್ಯರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 50000/- ಕ್ಕಿಂತ ಕಡಿಮೆ ಇದ್ದರೆ 250 ರೂ. ಅರ್ಜಿ ಶುಲ್ಕ. ಎಲ್ಲಾ ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ

ಆಯ್ಕೆ ಪ್ರಕ್ರಿಯೆ: ಕ್ರೀಡಾ​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು  ಕ್ರೀಡಾ ಪ್ರಯೋಗಗಳು, ಕ್ರೀಡಾ ಸಾಧನೆ ಮತ್ತು ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

South Eastern Railway Recruitment 2022: ಸ್ಪೋರ್ಟ್ಸ್​ ಕೋಟಾದಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಆಗ್ನೇಯ ರೈಲ್ವೆ

ಖಾಲಿ ಇರುವ 21 ಹುದ್ದೆಗಳಿಗೆ ಸ್ಪೋರ್ಟ್ಸ್​ ಕೋಟಾದಡಿ  ಅರ್ಜಿ ಆಹ್ವಾನಿಸಿದ ಪಶ್ಚಿಮ ಮಧ್ಯ ರೈಲ್ವೆ: ಪಶ್ಚಿಮ ಮಧ್ಯ ರೈಲ್ವೇ (Western Central Railway)ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 21 ಸ್ಪೋರ್ಟ್ಸ್​ ಪರ್ಸನ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ಪೋರ್ಟ್ಸ್​ ಕೋಟಾ, 10ನೇ ತರಗತಿ ಹಾಗೂ 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಜನವರಿ 22 ಕೊನೆ ದಿನವಾಗಿದೆ.  ಅಭ್ಯರ್ಥಿಗಳು ಪಶ್ಚಿಮ ಮಧ್ಯ ರೈಲ್ವೆಯ ಅಧಿಕೃತ ವೆಬ್​​ ತಾಣ ​ wcr.indianrailways.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

ವಿದ್ಯಾರ್ಹತೆ ಮತ್ತು ವಯೋಮಿತಿ: ಪಶ್ಚಿಮ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಜೊತೆಗೆ ಟೆಕ್ನಿಕಲ್​ ಹುದ್ದೆಗಳಿಗೆ ಐಟಿಐ ಪಾಸಾಗಿರಬೇಕು. ಅಭ್ಯರ್ಥಿಗಳ ವಯಸ್ಸು 18-25 ವರ್ಷದೊಳಗಿರಬೇಕು. PWD ಅಭ್ಯರ್ಥಿಗಳಿಗೆ 10 ವರ್ಷ, ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ ವಿವರ: ಸಾಮಾನ್ಯ, ಒಬಿಸಿ- 500 ರೂ. , ಎಸ್​ಸಿ/ಎಸ್​ಟಿ/ಮಾಜಿ ಸೈನಿಕ- 250 ರೂ. ಅರ್ಜಿ ಶುಲ್ಕವಿದ್ದು, ಆನ್​ಲೈನ್​ ಪೇಮೆಂಟ್​​ ಮೂಲಕ ಅರ್ಜಿ ಶುಲ್ಕ ಪಾವತಿಸಲು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ವೀಕೃತ ಅರ್ಜಿಯ ಆಧಾರದಲ್ಲಿ ಶಾರ್ಟ್​​ಲಿಸ್ಟಿಂಗ್​, ಕ್ರೀಡಾ ಸಾಧನೆ, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ  ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ. ಮತ್ತು ನಿಯಮಾನುಸಾರ ವೇತನ ನೀಡಲಾಗುತ್ತದೆ.

PRASAR BHARATI RECRUITMENT 2022: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.20 ಕೊನೆ ದಿನ

Latest Videos
Follow Us:
Download App:
  • android
  • ios