RITES ನಲ್ಲಿ ೧೪ ಫೀಲ್ಡ್ ಎಂಜಿನಿಯರ್, ಸೈಟ್ ಮೌಲ್ಯಮಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ೧೦ನೇ ತರಗತಿ, ಐಟಿಐ, ಡಿಪ್ಲೊಮಾ ಹಾಗೂ ಸಂಬಂಧಿತ ಎಂಜಿನಿಯರಿಂಗ್ ಡಿಪ್ಲೊಮಾ ಅಗತ್ಯ. ₹೩೦೦ ಅರ್ಜಿ ಶುಲ್ಕ, ₹೨೫,೧೨೦-೨೮,೮೬೯ ವೇತನ. ಆನ್‌ಲೈನ್ ಅರ್ಜಿಗೆ https://rites.com ಗೆ ಭೇಟಿ ನೀಡಿ. ಕೊನೆಯ ದಿನಾಂಕ: ಮೇ ೨೦, ೨೦೨೫.

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES) ಇಲ್ಲಿ ಖಾಲಿ ಇರುವ ಫೀಲ್ಡ್ ಎಂಜಿನಿಯರ್, ಸೈಟ್ ಮೌಲ್ಯಮಾಪಕರು ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹಾಗೂ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಯ ಹೆಸರು: ಫೀಲ್ಡ್ ಎಂಜಿನಿಯರ್, ಸೈಟ್ ಮೌಲ್ಯಮಾಪಕರು
ಒಟ್ಟು ಹುದ್ದೆಗಳು: 14 

ವಿದ್ಯಾರ್ಹತೆ:
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ 10ನೇ ತರಗತಿ, ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಜೊತೆಗೆ ಹುದ್ದೆಗೆ ಅನುಗುಣವಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ / ಮೆಟಲರ್ಜಿ
ಎಂಜಿನಿಯರಿಂಗ್ / ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ
ಅರ್ಜಿಶುಲ್ಕ: ಕ್ಷೇತ್ರ ಎಂಜಿನಿಯರ್, ಸೈಟ್ ಮೌಲ್ಯಮಾಪಕ ಹುದ್ದೆಗಳಿಗೆ, ಎಲ್ಲಾ ಅಭ್ಯರ್ಥಿಗಳಿಗೆ: 300 ರು.
ಪಾವತಿ ವಿಧಾನ: ಆನ್‌ಲೈನ್ ಮೂಲಕ
ವೇತನ ಶ್ರೇಣಿ: ಮಾಸಿಕ 25,120-28,869 ವೇತನವನ್ನು ನಿಗದಿಪಡಿಸಲಾಗಿದೆ. 
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RITES ನೇಮಕಾತಿ ಅಧಿಕೃತ ವೆಬ್‌ಸೈಟ್ https://rites.com ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಏ 30,2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ20, 2025