South Western Railway Recruitment 2022: ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಸುವರ್ಣವಕಾಶ
ನೈರುತ್ಯ ರೈಲ್ವೆ- ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 5ರಂದು ನೇರ ಸಂದರ್ಶನ ನಡೆಯಲಿದೆ.
ಬೆಂಗಳೂರು: ನೈರುತ್ಯ ರೈಲ್ವೆ- ಬೆಂಗಳೂರು (SWR Recruitment- Bengaluru) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಾಕ್ಟರ್ಸ್, ಸ್ಟಾಫ್ ನರ್ಸ್ ಹುದ್ದೆಗಳು ಸೇರಿ ಒಟ್ಟು 18 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 5ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ swr.indianrailways.gov.in ಗೆ ಭೇಟಿ ನೀಡಬಹುದು.
ಒಟ್ಟು 18 ಹುದ್ದೆಯ ಮಾಹಿತಿ:
ಡಾಕ್ಟರ್ಸ್(ಪಿಜಿಸಿಯನ್)- 1
ಡಾಕ್ಟರ್ಸ್(GDMO)-6
ಸ್ಟಾಫ್ ನರ್ಸ್-8
ಲ್ಯಾಬ್ ಟೆಕ್ನಿಷಿಯನ್-2
ಫಾರ್ಮಾಸಿಸ್ಟ್-1
ಶೈಕ್ಷಣಿಕ ವಿದ್ಯಾರ್ಹತೆ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.
ಡಾಕ್ಟರ್ಸ್(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್
ಡಾಕ್ಟರ್ಸ್(GDMO)-ಎಂಬಿಬಿಎಸ್
ಸ್ಟಾಫ್ ನರ್ಸ್-ಬಿಎಸ್ಸಿ ನರ್ಸಿಂಗ್
ಲ್ಯಾಬ್ ಟೆಕ್ನಿಷಿಯನ್-ಪಿಯುಸಿ, DMLT
ಫಾರ್ಮಾಸಿಸ್ಟ್-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ
IOCL Recruitment 2022: ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೆಲಸದ ಅನುಭವ:
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್ ಅಸಿಸ್ಟೆಂಟ್/ ಲ್ಯಾಬ್ ಟೆಕ್ನಿಷಿಯನ್ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಜೊತೆಗೆ ಆಯಾಯ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಡಾಕ್ಟರ್ಸ್(ಪಿಜಿಸಿಯನ್)- 50 ವರ್ಷ
ಡಾಕ್ಟರ್ಸ್(GDMO)-50-65 ವರ್ಷ
ಸ್ಟಾಫ್ ನರ್ಸ್-20-40 ವರ್ಷ
ಲ್ಯಾಬ್ ಟೆಕ್ನಿಷಿಯನ್- 19-33 ವರ್ಷ
ಫಾರ್ಮಾಸಿಸ್ಟ್- 20-40 ವರ್ಷ
ವೇತನ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ಸಿಗಲಿದೆ.
ಡಾಕ್ಟರ್ಸ್(ಪಿಜಿಸಿಯನ್)- ಮಾಸಿಕ 95,000 ರೂ
ಡಾಕ್ಟರ್ಸ್(GDMO)- ಮಾಸಿಕ 46,000-75,000 ರೂ
ಸ್ಟಾಫ್ ನರ್ಸ್- ಮಾಸಿಕ 44,900 ರೂ
ಲ್ಯಾಬ್ ಟೆಕ್ನಿಷಿಯನ್-ಮಾಸಿಕ 29,200 ರೂ
ಫಾರ್ಮಾಸಿಸ್ಟ್-ಮಾಸಿಕ 29,200 ರೂ
ಆಯ್ಕೆ ಪ್ರಕ್ರಿಯೆ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ವೈದ್ಯಕೀಯ ಅಧೀಕ್ಷಕರು
ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ
ಓಕಳಿಪುರಂ
ಬೆಂಗಳೂರು - 560021
UCIL Recruitment 2022: CA, ICWA, ಪದವೀಧರರಿಗೆ UCIL ನಲ್ಲಿ ಉದ್ಯೋಗವಕಾಶ
ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ: ಭಾರತೀಯ ಉಕ್ಕು ಪ್ರಾಧಿಕಾರ (Steel Authority of India- SAIL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಸ್ಪೆಷಲಿಸ್ಟ್ ಮತ್ತು ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್, ಎಂಎಸ್, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (Walk-in-Interview)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.
ಸಂದರ್ಶನ ನಡೆಯುವ ಸ್ಥಳ:
ED ಕಚೇರಿ (M&HS)
DSP ಮುಖ್ಯ ಆಸ್ಪತ್ರೆ ದುರ್ಗಾಪುರ- 713205
ಪಶ್ಚಿಮ್ ಬರ್ಧಮಾನ್