Asianet Suvarna News Asianet Suvarna News

NTPC Recruitment 2022: ವೈದ್ಯಕೀಯ ಶಿಕ್ಷಣ ಪಡೆದವರಿಗೆ ಭರ್ಜರಿ ಅವಕಾಶ, ಇಂದೇ ಅರ್ಜಿ ಸಲ್ಲಿಸಿ

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16 ಆಗಿದೆ. 

NTPC  Recruitment 2022 notification for Medical Officer and other post gow
Author
Bengaluru, First Published Mar 2, 2022, 11:25 PM IST

ಬೆಂಗಳೂರು(ಮಾ.2): ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ (National Thermal Power Corporation) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವೈದ್ಯಕೀಯ ತಜ್ಞರು (Medical experts)ಸೇರಿ ವಿವಿಧ ಒಟ್ಟು 97 ಹುದ್ದೆಗಳ ಭರ್ತಿಗೆ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ https://www.ntpc.co.in/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಒಟ್ಟು 97 ಹುದ್ದೆಗಳ ಮಾಹಿತಿ ಇಂತಿದೆ
GDMO – 60 ಹುದ್ದೆಗಳು
ಮಕ್ಕಳ ತಜ್ಞ (Paediatrician) – 9 ಹುದ್ದೆಗಳು
ಮೂಳೆ ತಜ್ಞ (Orthopaedics) – 5 ಹುದ್ದೆಗಳು
ನೇತ್ರ ತಜ್ಞ (Ophthalmologist) – 2 ಹುದ್ದೆಗಳು
ವಿಕಿರಣ ತಜ್ಞ (Radiologist)– 5 ಹುದ್ದೆಗಳು
 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ (Obstetrics and gynecology)– 3 ಹುದ್ದೆಗಳು
ರೋಗಶಾಸ್ತ್ರಜ್ಞ (Pathologist) – 5 ಹುದ್ದೆಗಳು
ENT – 2 ಹುದ್ದೆಗಳು

KENDRIYA VIDYALAYA RECRUITMENT 2022: ಬೆಂಗಳೂರಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಮಾ.7 ಮತ್ತು 8ಕ್ಕೆ ನೇರ ಸಂದರ್ಶನ

ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು

GDMO ಹುದ್ದೆಗೆ MBBS
ಮಕ್ಕಳ ತಜ್ಞ ಹುದ್ದೆಗೆ ಎಂಡಿ/ಡಿಎನ್‌ಬಿ ಪೀಡಿಯಾಟ್ರಿಕ್ಸ್ ಅಥವಾ ಎಂಬಿಬಿಎಸ್ ಜೊತೆಗೆ ಮಕ್ಕಳ ಆರೋಗ್ಯದಲ್ಲಿ ಪಿಜಿ ಡಿಪ್ಲೊಮಾ
ಮೂಳೆ ತಜ್ಞ  ಹುದ್ದೆಗೆ MS/DNB ಅಥವಾ MBBS ಜೊತೆಗೆ ಆರ್ಥೋಪೆಡಿಕ್ಸ್‌ನಲ್ಲಿ PG ಡಿಪ್ಲೊಮಾ
ನೇತ್ರ ತಜ್ಞ  ಹುದ್ದೆಗೆ MS/DNB ಅಥವಾ MBBS ಜೊತೆಗೆ ನೇತ್ರಶಾಸ್ತ್ರದಲ್ಲಿ PG ಡಿಪ್ಲೊಮಾ
ವಿಕಿರಣ ತಜ್ಞ ಹುದ್ದೆಗೆ ಎಮ್‌ಡಿ/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ ರೇಡಿಯಾಲಜಿಯಲ್ಲಿ ಪಿಜಿ ಡಿಪ್ಲೊಮಾ.
 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ  ಹುದ್ದೆಗೆ MD/DNB ಅಥವಾ MBBS ಜೊತೆಗೆ O&G ನಲ್ಲಿ PG ಡಿಪ್ಲೋಮಾ.
ರೋಗಶಾಸ್ತ್ರಜ್ಞ ಹುದ್ದೆಗೆ MD/DNB ಅಥವಾ MBBS ಜೊತೆಗೆ ರೋಗಶಾಸ್ತ್ರದಲ್ಲಿ PG ಡಿಪ್ಲೊಮಾ.
ENT ಹುದ್ದೆಗೆ  MD/MS/DNB ಅಥವಾ MBBS ಜೊತೆಗೆ ENT ನಲ್ಲಿ PG ಡಿಪ್ಲೊಮಾ. 

DRDO Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 14 ಕೊನೆ ದಿನ

ವಯೋಮಿತಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 37 ವರ್ಷದವರಾಗಿರಬೇಕು. ಒಬಿಸಿಗೆ 3 ವರ್ಷ ಮತ್ತು SC / ST ಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  50000 ರೂ. ನಿಂದ 160000 ರೂವರೆಗೆ ವೇತನ ದೊರೆಯಲಿದೆ.
 

Follow Us:
Download App:
  • android
  • ios