NIMHANS Recruitment 2022: ಕಿರಿಯ ಸಂಶೋಧಕ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ಬೆಂಗಳೂರು. ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 28 ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

nimhans recruitment 2022 notification for junior Research Fellow and other posts gow

ಬೆಂಗಳೂರು(ಫೆ.14): ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಜೂನಿಯರ್ ರಿಸರ್ಚ್​​ ಫೆಲೋ (Junior Research Fellow) ಮತ್ತು ಪ್ರಾಜೆಕ್ಟ್​ ಅಸೋಸಿಯೇಟ್ (Project Associate) ಸೇರಿ ಒಟ್ಟು 7  ಹುದ್ದೆ ಖಾಲಿ ಇದ್ದು, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಫೆಬ್ರವರಿ 28 ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು nimhans.ac.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು 7 ಹುದ್ದೆಗಳ ಮಾಹಿತಿ ಇಂತಿದೆ:
ಜೂನಿಯರ್ ರಿಸರ್ಚ್​ ಫೆಲೋ-2
ಪ್ರಾಜೆಕ್ಟ್​ ಅಸೋಸಿಯೇಟ್-2
ಮೀಡಿಯಾ ಆಫೀಸರ್-1
ರಿಸರ್ಚ್​ ಅಸಿಸ್ಟೆಂಟ್-2

ಶೈಕ್ಷಣಿಕ ವಿದ್ಯಾರ್ಹತೆ: ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಆಯಾಯ  ಹುದ್ದೆಗೆ ಸಂಬಂಧಿಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 
ಜೂನಿಯರ್ ರಿಸರ್ಚ್​ ಫೆಲೋ-ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್​​ನಲ್ಲಿ ಎಂ.ಫಿಲ್
ಪ್ರಾಜೆಕ್ಟ್​ ಅಸೋಸಿಯೇಟ್- ಬಯೋಟೆಕ್ನಾಲಜಿ/ಜೆನೆಟಿಕ್ಸ್​/ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್​/ಟೆಕ್ನಾಲಜಿಯಲ್ಲಿ ಎಂ.ಟೆಕ್, ಕಾಗ್ನಿಟಿವ್​ ಸೈನ್ಸ್​​ನಲ್ಲಿ ಮಾಸ್ಟರ್ ಆಫ್​ ಸೈನ್ಸ್​
ಮೀಡಿಯಾ ಆಫೀಸರ್-ಮಾಸ್​ ಕಮ್ಯುನಿಕೇಷನ್ಸ್​/ಮಾಸ್​​ ಮೀಡಿಯಾ/ ಜರ್ನಲಿಸಂ/ಸೋಶಿಯಲ್ ವರ್ಕ್​ನಲ್ಲಿ ಸ್ನಾತಕೋತ್ತರ ಪದವಿ
ರಿಸರ್ಚ್​ ಅಸಿಸ್ಟೆಂಟ್-ಎಲ್​​ಎಲ್​ಬಿ, ಸೋಶಿಯಲ್ ವರ್ಕ್​​/ಪಬ್ಲಿಕ್ ಹೆಲ್ತ್​/ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ

INDIAN AIR FORCE RECRUITMENT 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಭಾರತೀಯ ವಾಯುಪಡೆ ಅರ್ಜಿ ಆಹ್ವಾನ

ವಯೋಮಿತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:  ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ಸ್ಕಿಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಜೂನಿಯರ್ ರಿಸರ್ಚ್​ ಫೆಲೋ-ಫೆಬ್ರವರಿ 27, 2022
ಪ್ರಾಜೆಕ್ಟ್​ ಅಸೋಸಿಯೇಟ್-ಫೆಬ್ರವರಿ 27, 2022
ಮೀಡಿಯಾ ಆಫೀಸರ್-ಫೆಬ್ರವರಿ 28, 2022
ರಿಸರ್ಚ್​ ಅಸಿಸ್ಟೆಂಟ್-ಫೆಬ್ರವರಿ 28, 2022

Oil India Limited Recruitment 2022: ಗ್ರೇಡ್ III, V ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ಮಾಸಿಕ ವೇತನ ದೊರೆಯಲಿದೆ.
ಜೂನಿಯರ್ ರಿಸರ್ಚ್​ ಫೆಲೋ : 31,000 ರೂ
ಪ್ರಾಜೆಕ್ಟ್​ ಅಸೋಸಿಯೇಟ್ 25,000 ರಿಂದ 31,000 ರೂ
ಮೀಡಿಯಾ ಆಫೀಸರ್ : 65,000 ರೂ
ರಿಸರ್ಚ್​ ಅಸಿಸ್ಟೆಂಟ್ : 35,000 ರೂ

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ- pradaud@gmail.com ಗೆ ಜನವರಿ 2, 2022ರೊಳಗೆ ಕಳುಹಿಸಲು ಕೋರಲಾಗಿದೆ.

TCIL Recruitment 2022: ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ

Latest Videos
Follow Us:
Download App:
  • android
  • ios