Asianet Suvarna News Asianet Suvarna News

NAAC Recruitment 2022: ಉಪ ಸಲಹೆಗಾರರ ​​ಹುದ್ದೆಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಲ್ಲಿ ಖಾಲಿ ಇರುವ  ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 27, 2022 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

NAAC Recruitment 2022 notification for Deputy Adviser Posts gow
Author
First Published Oct 31, 2022, 11:36 PM IST

ಬೆಂಗಳೂರು (ಅ.21): ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಅಧಿಕಾರಿಗಳು ಇತ್ತೀಚೆಗೆ ಆನ್‌ಲೈನ್ ಮೋಡ್ ಮೂಲಕ 1 ಪೋಸ್ಟ್‌ಗಳನ್ನು ಭರ್ತಿ ಮಾಡಲು ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.  ಬೆಂಗಳೂರು - ಕರ್ನಾಟಕ ಸ್ಥಳದಲ್ಲಿ 1 ಉಪ ಸಲಹೆಗಾರರ ​​ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.  ಎಲ್ಲಾ ಅರ್ಹ ಆಕಾಂಕ್ಷಿಗಳು NAAC ವೃತ್ತಿಜೀವನದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು. ಆದರೆ naac.gov.in ನೇಮಕಾತಿ 2022 ನವೆಂಬರ್ 27, 2022 ರಂದು ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಲ್ಲಿ ಖಾಲಿ ಇರುವ ಉಪ ಸಲಹೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಪಿಹೆಚ್‌ಡಿ ಮಾಡಿರಬೇಕು.
 
ವೇತನ ವಿವರ: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಲ್ಲಿ ಖಾಲಿ ಇರುವ ಉಪ ಸಲಹೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1,31,400 ನಿಂದ ರೂ. 2,17,100 ವೇತನ ದೊರೆಯಲಿದೆ.

BANK OF BARODA RECRUITMENT 2022: ಖಾಲಿ ಇರುವ ವಿವಿಧ 60 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ನ4ಕ್ಕೆ ನೇರ ಸಂದರ್ಶನ
ಚಿತ್ರದುರ್ಗ: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನವೆಂಬರ್‌ 4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ಸಂದರ್ಶನದಲ್ಲಿ ಕಲರ್ಸ್‌ ಟೆಕ್ನಾಲಜಿ ಯುಕ್ತ ಕಂಪನಿ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಟೀಚರ್ಸ್‌, ಜಿಲ್ಲಾ ಪ್ರೋಗ್ರಾಮ್‌ ಪ್ಲಾನಿಂಗ್‌ ಆಫೀಸರ್ಸ್‌,ಡಿವಿಜನ್‌ ಪ್ರೋಗ್ರಾಮ್‌ ಪ್ಲಾನಿಂಗ್‌ ಆಫೀಸರ್ಸ್‌,ಟೆಲಿಕಾಲರ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. 60 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ, ಡಿಇಡಿ,ಬಿಇಡಿ, ಎಂಎ, ಎಂ.ಕಾಂ, ಎಂಎಸ್ಸಿ, ಎಂಸಿಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 6,000 ದಿಂದ 16000 ವೇತನ ನಿಗದಿಪಡಿಸಲಾಗಿದೆ. ಜಿಲ್ಲಾ ಪ್ರೋಗ್ರಾಮ್‌ ಪ್ಲಾನಿಂಗ್‌ ಆಫೀಸರ್‌ ಹುದ್ದೆಗೆ ಎಂಎ, ಎಂಕಾಂ, ಎಂಎಸ್ಸಿ, ಎಂಸಿಎ, ಎಂಬಿಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗೆ 1 ಹುದ್ದೆ. ಡಿವಿಜನ್‌ ಪ್ರೋಗ್ರಾಮಿಂಗ್‌ ಪ್ಲಾನಿಂಗ್‌ ಆಫೀಸರ್‌ ಹುದ್ದೆಗೆ ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆ ನಿಗದಿಪಡಿಸಿ 16 ಸಾವಿರದಿಂದ 30ಸಾವಿರ ರುಪಾಯಿಗಳ ವೇತನ ನೀಡಲಾಗುವುದು. ಡಿವಿಜನ್‌ ಪ್ರೋಗ್ರಾಮ್‌ ಪ್ಲಾನಿಂಗ್‌ ಆಫೀಸರ್‌ ಹುದ್ದೆಗೆ ಬಿಎ, ಬಿಕಾಂ. ಬಿಸಿಎ. ಎಂಸಿಎ, ಎಂಬಿಎ, ಎಂಎಸ್ಸಿ, ಎಂಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆ ನಿಗದಿಪಡಿಸಿ 16 ಸಾವಿರದಿಂದ 30 ಸಾವಿರ ರುಪಾಯಿಗಳ ವೇತನ ನೀಡಲಾಗುವುದು.

ಧಾರವಾಡ; 18 ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಅರ್ಜಿ ಆಹ್ವಾನ

ಟೆಲಿಕಾಲರ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ ಹುದ್ದೆಗೆ ಪಿಯುಸಿ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಗೆ 6 ಹುದ್ದೆಗಳನ್ನು ನಿಗದಿಪಡಿಸಿ 6ರಿಂದ 10 ಸಾವಿರ ವೇತನ ನೀಡಲಾಗುವುದು. ಬಯೋಡೇಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಭಾವಚಿತ್ರಗಳನ್ನು ಸಂದರ್ಶನಕ್ಕೆ ತರಬೇಕು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 7022459064, 8310785143, 8105619020ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
 

Follow Us:
Download App:
  • android
  • ios