ಧಾರವಾಡ; 18 ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ 18 ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

nhm-karnataka-recruitment-2022- Dharwad-community-health-officers-post gow

ಧಾರವಾಡ (ಅ.31): ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ 18 ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಓ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಗುತ್ತಿಗೆ ಆಧಾರದ ಹುದ್ದೆಗಳಿಗೆ ಬಿಎಸ್‌ಸಿ ನರ್ಸಿಂಗ್‌ ಮತ್ತು ಪೋಸ್ಟ್‌ ಬಿಎಸ್‌ಸಿ ನರ್ಸಿಂಗ್‌ ವಿದ್ಯಾರ್ಹತೆ ಹೊಂದಿರುವ ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ .22 ಸಾವಿರ ನೀಡಲಾಗುವುದು. ಇದರೊಂದಿಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ 8 ಸಾವಿರ ವರೆಗೆ ನೀಡಲಾಗುವುದು. ಅರ್ಜಿಯನ್ನು ಕೇವಲ ಆನ್‌ಲೈನ್‌ ಮುಖಾಂತರ ಸಂಬಂಧಪಟ್ಟದಾಖಲಾತಿಗಳೊಂದಿಗೆ ಸಲ್ಲಿಸಬೇಕು ಹಾಗೂ ಪರೀಕ್ಷೆಯನ್ನು ಆನ್‌ಲೈನ್‌ ಮುಖಾಂತರ ನೆಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ https://karunadu.karnataka.gov.in/Pages/karunadu.aspx ಸಂಪರ್ಕಿಸಬಹುದು. ಆಸಕ್ತರು ನವೆಂಬರ್‌ 8ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

Central Silk Board Recruitment 2022: ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡದ ಕೆಲಗೇರಿ ಕೆರೆಗೆ ಕಾಯಕಲ್ಪ: ಧಾರವಾಡ - ಸರ್‌.ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾದ ಇಲ್ಲಿಯ ಕೆಲಗೇರಿ ಕೆರೆಯ ಕಾಯಕಲ್ಪಕ್ಕೆ ಶ್ರಮಿಸಲಾಗುವುದು ಎಂದು ಮೇಯರ್‌ ಈರೇಶ ಅಂಚಟಗೇರಿ ಭರವಸೆ ನೀಡಿದರು. ಕೆಲಗೇರಿ ನಾಗರಿಕರು ಹಾಗೂ ಸ್ಥಳೀಯ ಪಾಲಿಕೆಯ ಸದಸ್ಯರ ಕೋರಿಕೆಯ ಮೇರೆಗೆ ಭಾನುವಾರ ಮುಂಜಾನೆ ಕೆರೆಗೆ ಭೇಟಿ ನೀಡಿದ ಅವರು, ಕೆರೆಯ ಸ್ವಚ್ಛತೆ ಹಾಗೂ ಅಭಿವೃದ್ಧಿ ಕುರಿತು ಪಾಲಿಕೆಯ ಅಧಿಕಾರಿಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲು ಸೂಚಿಸಿದರು.

ಬಳ್ಳಾರಿ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಮಾತನಾಡಿ ಬರುವ ವಾರದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗುವುದು. ಶೀಘ್ರದಲ್ಲಿ ಉದ್ಯಾನವನದಲ್ಲಿರುವ ಸರ್‌ ಎಂ. ವಿಶ್ವೇಶ್ವರಯ್ಯ ಮೂರ್ತಿ ಉದ್ಘಾಟನೆ ಮಾಡಿ ಮಾದರಿ ಪ್ರವಾಸ ತಾಣವನ್ನಾಗಿ ಮಾಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಚಂದ್ರಕಲಾ ಕೋಟಬಾಗಿ, ಮಂಜುನಾಥ ಭಟ್ಟೆಣ್ಣವರ, ಸಿ.ಎಸ್‌. ಪಾಟೀಲ, ಬಸವರಾಜ ಗರಗ, ಶಂಕರ ಕೊಟ್ಯಾನ, ಫಕ್ಕಿರಪ್ಪಾ ಇಂಗಳಗಿ ಹಾಗೂ ಸ್ಥಳೀಯರು ಇದ್ದರು. 

ಬಳ್ಳಾರಿ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಓ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಲ್‌. ಜನಾರ್ಧನ ತಿಳಿಸಿದ್ದಾರೆ. ಬಿ.ಎಸ್‌ಸಿ ಮತ್ತು ಪೋಸ್ಟ್‌ ಬಿಎಸ್‌ಸಿ ವಿದ್ಯಾರ್ಹತೆ ಹೊಂದಿರುವ ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಸಂಭಾವನೆ .24,200/- ಹೆಚ್ಚಿನ ಆದ್ಯತೆವುಳ್ಳ ಜಿಲ್ಲೆಗಳು ಹಾಗೂ .22ಸಾವಿರ ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುವುದು.ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪೋ›ತ್ಸಾಹ ಧನ .8ಸಾವಿರವರೆಗೆ ನೀಡಲಾಗುವುದು.

Latest Videos
Follow Us:
Download App:
  • android
  • ios