Asianet Suvarna News Asianet Suvarna News

Indian Army: ಭಾರತೀಯ ಸೇನೆಯ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ!

  • ಭಾರತೀಯ ಸೇನೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ
  • ಭೂ ಸೇನಾ ವಿಭಾಗದಲ್ಲಿ 97,177 ಜವಾನ್​​ ಹುದ್ದೆಗಳು, 7476 ರ‍್ಯಾಂಕ್​​ ಅಧಿಕಾರಿಗಳ ಪೋಸ್ಟ್​ ಖಾಲಿ
  • ವಾಯು ಸೇನೆಯಲ್ಲಿ 5,471 ಹುದ್ದೆಗಳು, ನೌಕಾಪಡೆಯಲ್ಲಿ 12,431 ಹುದ್ದೆಗಳು ಖಾಲಿ
More than 1 lakh posts are lying vacant in the Indian army gow
Author
Bengaluru, First Published Dec 7, 2021, 2:21 PM IST

ನವದೆಹಲಿ (ಡಿ7): ಭಾರತೀಯ ಸೇನೆಯ ಭೂ ಸೇನೆ (armed forces), ವಾಯುಸೇನೆ (Air Force) ಹಾಗೂ ನೌಕಾಪಡೆ(Navy)ಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ ಎಂದು ಕೇಂದ್ರದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ (Ajay Bhatt)​​ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರಾಖೇಶ್​​ ಸಿನ್ಹಾ ಕೇಳಿರುವ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಸಿಕ್ಕಿದೆ. ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಸಚಿವ ಅಜಯ್ ಭಟ್ ಸೇನೆಯಲ್ಲಿ ಒಟ್ಟು 1,04,653 ಹುದ್ದೆಗಳು ಖಾಲಿ ಇದ್ದು, ಭೂ ಸೇನಾ ವಿಭಾಗದಲ್ಲಿ 97,177 ಜವಾನ್​​ ಹುದ್ದೆಗಳು,7476 ರ್ಯಾಂಕ್​​ ಅಧಿಕಾರಿಗಳ ಪೋಸ್ಟ್​ ಖಾಲಿ ಇವೆ ಎಂದಿದ್ದಾರೆ. ಇದರ ಜೊತೆಗೆ ವಾಯು ಸೇನೆಯಲ್ಲಿ 5,471 ಹುದ್ದೆಗಳು ಖಾಲಿ ಇದ್ದು, 4,850 ರ್ಯಾಂಕ್​​​ ಏರ್​​ಮೆನ್​​ ಹಾಗೂ 621 ರ್ಯಾಂಕ್​​ ಆಫೀಸರ್​​ ಹುದ್ದೆಗಳಾಗಿವೆ ಎಂದಿದ್ದಾರೆ.

ನೌಕಾಪಡೆಯಲ್ಲಿ 12,431 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 11,166 ರ್ಯಾಂಕ್​ ಯೋಧರು ಹಾಗೂ 1265 ರ್ಯಾಂಕ್​​​ ಆಫೀಸರ್​​​ ಹುದ್ದೆಗಳಾಗಿವೆ. ಭಾರತೀಯ ಸೇನೆಯ ಮೂರು ವಿಭಾಗಗಳಲ್ಲೂ ಸಿಬ್ಬಂದಿ ಕೊರತೆ ಇದೆ, ಈ ಕೊರತೆಯನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಯುವಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಸದನದಲ್ಲಿ ತಿಳಿಸಿದ್ದಾರೆ. 

BSF Recruitment: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ.29 ಕೊನೆ ದಿನ: 
 ಗಡಿ ಭದ್ರತಾ ಪಡೆ (Border Security Force - BSF) ಖಾಲಿ ಇರುವ ವಿವಿಧ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತಿ ಹೊಂದಿರುವವರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಭಾರತೀಯ ನಾಗರಿಕರ ನೇಮಕಾತಿಗಾಗಿ ಬಿಎಸ್ಎಫ್ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ. BSF ಗ್ರೂಪ್-'ಸಿ' ಕಾಂಬಟೈಸ್ಡ್ (ನಾನ್ ಗೆಜೆಟೆಡ್-ನಾನ್ ಮಿನಿಸ್ಟ್ರಿಯಲ್)ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 

Land Surveyor Recruitment: 3 ಸಾವಿರ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗಡಿ ಭದ್ರತಾ ಪಡೆ ಎಂಜಿನಿಯರಿಂಗ್ ಸೆಟಪ್‌ನಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್- rectt.bsf.gov.in ನಲ್ಲಿ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಅರ್ಜಿ ಸಲ್ಲಿಸಲು  ಡಿಸೆಂಬರ್ 29ರವರೆಗೆ ಕಾಲಾವಕಾಶವಿದೆ. ಒಟ್ಟು 72 ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಹೆಚ್ಚಿನ ನವೀಕರಣಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು. ಎಎಸ್ಐ (ASI) - 01 ಹುದ್ದೆ, HC (Carpenter, Sewerman) - 06 ಹುದ್ದೆಗಳು, ಕಾನ್ಸ್ಟೇಬಲ್ (Generator Operator, Generator Mechanic, Linemen) - 65 ಹುದ್ದೆಗಳು ಸೇರಿ ಒಟ್ಟು 72 ಹುದ್ದೆಗಳನ್ನ ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು. 

IIT BOMBAY ALUMNI: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಸಾಧಕರು

ಬಿಎಸ್ಎಫ್‌ನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 29, 2021ಕ್ಕೆ ಅನ್ವಯವಾಗುವಂತೆ 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು. ಇನ್ನುಎಸ್ಎಸ್ಐ (ASI) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೈಗಾರಿಕಾ ತರಬೇತಿ ಸಂಸ್ಥೆಯಿಂದ (ITI) ಡ್ರಾಫ್ಟ್ಸ್‌ಮನ್‌ಶಿಪ್ (ಸಿವಿಲ್) ನಲ್ಲಿ ಡಿಪ್ಲೊಮಾ ಪದವಿ ಜೊತೆಗೆ ಮೆಟ್ರಿಕ್ಯುಲೇಷನ್ ಪಡೆದಿರಬೇಕು. ಎಚ್‌ಸಿ ಮತ್ತು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 29ರ ಕೊನೆಯ ದಿನವಾಗಿದೆ. ಹಾಗಾಗಿ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. BSF ಅಧಿಕೃತ ವೆಬ್‌ಸೈಟ್ https://rectt.bsf.gov.in ನಲ್ಲಿ ಅರ್ಜಿ ಸಲ್ಲಿಸಬೇಕು.  ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸುವ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. 

Follow Us:
Download App:
  • android
  • ios