Asianet Suvarna News Asianet Suvarna News

IOCL recruitment 2022: ಖಾಲಿ ಇರುವ ಬರೋಬ್ಬರಿ 1535 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ

ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಖಾಲಿ ಇರುವ  ಒಟ್ಟು 1,535 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್‌ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

IOCL recruitment 2022 notification for 1535 Apprentice posts gow
Author
First Published Sep 29, 2022, 4:04 PM IST

 ನವದೆಹಲಿ (ಸೆ.29): ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿರುವ ಇಂಧನ ಸಂಸ್ಥೆಯಾದ ಇಂಡಿಯನ್‌ ಆಯಿಲ್‌ ಲಿಮಿಟೆಡ್‌ (ಐಒಎಲ್‌)ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈಗಾಗಲೇ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್‌ ಆಯಿಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಕೂಡಲೆ ಅರ್ಜಿ ಸಲ್ಲಿಸುವಂತೆ ಸಂಸ್ಥೆಯು ತಿಳಿಸಿದ್ದು, ನೇಮಕಾತಿ ಮಾಹಿತಿಗಳಾದ ಆಯ್ಕೆ ಪ್ರಕ್ರಿಯೆ, ಬೇಕಾದ ದಾಖಲೆಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಹೇಗೆ, ವಿದ್ಯಾರ್ಹತೆ ಹಾಗೂ ವಯೋಮಿತಿ ಮಾಹಿತಿಗಳನ್ನು ಮುಂದೆ ವಿವರಿಸಲಾಗಿದೆ. ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಬಾರಿ ದೊಡ್ಡ ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 1,535 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹುದ್ದೆಗಳು ಟ್ರೇಡ್‌ ಹಾಗೂ ಟೆಕ್ನೀಷಿಯನ್‌ ವಿಭಾಗಗಳಿಗೆ ಸಂಬಂಧಿಸಿದೆ. ಟ್ರೇಡ್‌ (ಅಟೆಂಡೆಂಟ್‌ ಆಪರೇಟರ್‌) 396 ಹುದ್ದೆ, ಟ್ರೇಡ್‌ (ಫಿಟ್ಟರ್‌) 161 ಹುದ್ದೆಗಳು, ಟ್ರೇಡ್‌ (ಬಾಯ್ಲರ್‌) 54 ಹುದ್ದೆ, ತಂತ್ರಜ್ಞ (ರಾಸಾಯನಿಕ) 332 ಹುದ್ದೆ, ತಂತ್ರಜ್ಞ (ಮೆಕ್ಯಾನಿಕಲ್‌) 163 ಹುದ್ದೆಗಳು, ತಂತ್ರಜ್ಞ (ಎಲೆಕ್ಟ್ರಿಕಲ್‌) 198 ಹುದ್ದೆ, ತಂತ್ರಜ್ಞ (ಇನ್‌ಸ್ಟು್ರಮೆಂಟೇಶನ್‌) 74 ಹುದ್ದೆ, ಟ್ರೇಡ್‌ (ಕಾರ್ಯದರ್ಶಿ ಸಹಾಯಕ) 39 ಹುದ್ದೆ, ಟ್ರೇಡ್‌ (ಲೆಕ್ಕಾಧಿಕಾರಿ) 45 ಹುದ್ದೆ, ಟ್ರೇಡ್‌ (ಡಾಟಾ ಎಂಟ್ರಿ) 41 ಹುದ್ದೆ ಸಹಿತ ವಿವಿಧ ಹುದ್ದೆಗೆ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://iocl.com/ ಗೆ ಭೇಟಿ ನೀಡಬಹುದು.

ವಿದ್ಯಾರ್ಹತೆ, ವಯೋಮಿತಿ ಏನು?: ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭೌತಶಾಸ್ತ್ರ/ಗಣಿತಶಾಸ್ತ್ರ/ರಸಾಯನಶಾಸ್ತ್ರ/ಇಂಡಸ್ಟ್ರೀಯಲ ಕೆಮಿಸ್ಟ್ರಿ/ ಐಟಿಐ/ಕೆಮಿಕಲ್‌-ಪೆಟ್ರೋಕೆಮಿಕಲ್‌ ರಿಫೈನರಿ ಇಂಜಿನಿಯರಿಂಗ್‌/ಡಿಪ್ಲೊಮಾ ಇನ್‌ ಇನ್‌ಸ್ಟು್ರಮೆಂಟೇಶನ್‌/ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌/ಬಿ.ಕಾಂ/ಬಿಎಸ್ಸಿ/12ನೇ ತರಗತಿ ವಿದ್ಯಾರ್ಹತೆ ಪಡೆದಿರಬೇಕಿದೆ. ಜೊತೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕಿದ್ದು, ಗರಿಷ್ಠ ಎಂದರೆ 24 ವರ್ಷದೊಳಗಿರಬೇಕಿದೆ. ಒಬಿಸಿ ಅಭ್ಯರ್ಥಿಗೆ 3 ವರ್ಷಗಳು, ಎಸ್ಸಿ/ಎಸ್ಟಿಗಳಿಗೆ 5 ವರ್ಷಗಳು, ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗೆ 13 ವರ್ಷ, ಪಿಡಬ್ಲ್ಯುಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋ ಸಡಿಲಿಕೆ ಅನ್ವಯವಾಗುತ್ತದೆ.

ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆ: ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ದಾಖಲೆಗಳನ್ನು ಲಗತ್ತಿಸಬೇಕಿದೆ. ಆಧಾರ್‌ಕಾರ್ಡ್‌, ಸದರಿ ಹುದ್ದೆಗಳಿಗೆ ಸಂಬಂಧಿಸಿದ ಅಂಕಪಟ್ಟಿಗಳು, ಮೀಸಲಾತಿ/ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಯಾವುದೇ ಪ್ರಮುಖ ದಾಖಲೆಗಳಿದ್ದಲ್ಲಿ ಅವುಗಳ ನಕಲು ಪ್ರತಿಗಳನ್ನು ಸ್ವ ಭಾವಚಿತ್ರ ಸಹಿತವಾಗಿ ಅರ್ಜಿ ಜೊತೆಗೆ ಲಗತ್ತಿಸಬೇಕು. ಮೊದಲು ಅಭ್ಯರ್ಥಿಗಳು ನಿರ್ದಿಷ್ಠ ವೆಬ್‌ಸೈಟ್‌ಗೆ ಲಾಗಿನ್‌ ಮಾಡಬೇಕಿದ್ದು, ಇಲ್ಲಿ ದೊರೆಯುವ ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕು. ಬಳಿಕ ದಾಖಲೆಗಳ ಸಹಿತ ಕಳುಹಿಸಬೇಕಿದೆ. ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ವಿಪ್ರೋ ಉದ್ಯೋಗಿಗಳಿಗೆ ಸಿಹಿ ಸುದ್ದಿ; ಶೇ.96ರಷ್ಟು ಮಂದಿಗೆ ವಾರ್ಷಿಕ ವೇತನ ಹೆಚ್ಚಳ

ವೇತನ ಮಾಹಿತಿ ಹಾಗೂ ಆಯ್ಕೆ ಪ್ರಕ್ರಿಯೆ: ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ ಉತ್ತಮ ವೇತನವನ್ನೇ ನಿಗದಿ ಮಾಡಿದೆ. ಆದರೆ ಅದರ ಮಾಹಿತಿ ಮಾತ್ರ ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿದ ಬಳಿಕ ಅಭ್ಯರ್ಥಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನ ಕೂಡ ನಡೆಯಲಿದೆ. ಈ ಪ್ರಕ್ರಿಯೆಗಳ ಮೇಲೆ ಅಭ್ಯರ್ಥಿಯ ಆಯ್ಕೆ ನಿರ್ಧಾರವಾಗುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಮನೆಯಿಂದ ಕೆಲಸ ಮಾಡ್ತಿರುವವರು ಸೋಮಾರಿಗಳಾ?: MICROSOFT ಸಿಇಒ ಏನ್ ಹೇಳಿದ್ರು ನೋಡಿ

* ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 23ರಂದು ಅಂತಿಮ ದಿನ

*ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ ನವೆಂಬರ್‌ 06

*ಫಲಿತಾಂಶದ ಸಂಭಾವ್ಯ ದಿನಾಂಕ ನವೆಂಬರ್‌ 21

*ದಾಖಲೆ ತಪಾಣೆಯ ಸಂಭಾವ್ಯ ದಿನಾಂಕ 28 ನವೆಂಬರ್‌-07 ಡಿಸೆಂಬರ್‌

* ಹೆಚ್ಚಿನ ಮಾಹಿತಿಗಾಗಿ https://iocl.com/

Follow Us:
Download App:
  • android
  • ios