ಇಂಡಿಯನ್ ಆರ್ಮಿ ಫಿರಂಗಿದಳದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಒಟ್ಟು 107 ಹುದ್ದೆಗಳಿಗೆ ಅಧಿಸೂಚನೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 22 ಕೊನೆ ದಿನ
ಬೆಂಗಳೂರು(ಡಿ.30): ಭಾರತೀಯ ಸೇನೆಯು (Indian Army) ನಾಸಿಕ್ ನಲ್ಲಿನ ಇಂಡಿಯನ್ ಆರ್ಮಿ ಫಿರಂಗಿದಳದಲ್ಲಿ (Indian Army Artillery ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಎಲ್ ಡಿಸಿ, ಕುಕ್, ಫೈರ್ ಮ್ಯಾನ್ ಸೇರಿದಂತೆ ಒಟ್ಟು 107 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಜನವರಿ 22, 2022ರ ಮೊದಲು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಅವರು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ 10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳನ್ನು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ indianarmy.nic.in. ಗೆ ಭೇಟಿ ನೀಡಿ.
ಈ ಹಿಂದೆ ನೀಡಿದ ಜಾಹೀರಾತು ಆಧರಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಈಗ ಪುರಸ್ಕರಿಸಲಾಗುವುದಿಲ್ಲ. ಆಸಕ್ತರು ಹೊಸದಾಗಿ ನೀಡಿರುವ ಜಾಹೀರಾತುಗಳ ಆಧಾರದ ಮೇಲೆ, ಹೊಸದಾಗಿಯೇ ಅರ್ಜಿ ಸಲ್ಲಿಸಬೇಕು ಎಂದು ಭಾರತೀಯ ಸೇನೆ ಫಿರಂಗಿ ದಳದ ಕೇಂದ್ರ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.
ವರ್ಗಾವಾರು ಹುದ್ದೆಗಳ ಮೀಸಲು: ಕಾಯ್ದಿರಿಸಿದ ವರ್ಗ (Unreserved category-UR).-52, ಪರಿಶಿಷ್ಟ ಜಾತಿ (SC)-8, ಪರಿಶಿಷ್ಟ ಪಂಗಡ-7. ಇತರ ಹಿಂದುಳಿದ ವರ್ಗ (OBC)-24, ಆರ್ಥಿಕವಾಗಿ ದುರ್ಬಲ ವಿಭಾಗ(EWS)-16, ಪ್ರತಿಭಾನ್ವಿತ ಕ್ರೀಡಾ ವ್ಯಕ್ತಿ (MSP) -3, ಮಾಜಿ ಸೇವಾಧಿಕಾರಿ ವರ್ಗ (ಅಂದರೆ ಈಗಾಗಲೇ ಸೇವೆ ಸಲ್ಲಿಸಿ ನಿವೃತ್ತರಾದವರ ಮಕ್ಕಳಿಗೆ-ESM-18 ಮತ್ತು ಪಿಎಚ್ಪಿ ವರ್ಗಕ್ಕೆ 6 ಹುದ್ದೆ ಮೀಸಲಿಡಲಾಗಿದೆ.
CISF RECRUITMENT 2022: 647 ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
107 ಹುದ್ದೆಗಳ ವಿವರ ಹೀಗಿದೆ: ಮೊಡೆಲ್ ಮೇಕರ್-1, ಕಾರ್ಪೆಂಟರ್-2, ಕುಕ್-2, ರೇಂಜ್ ಲಾಸ್ಕರ್-8, ಫೈಯರ್‌ಮೆನ್-1, ಫಿರಂಗಿ ಲಾಸ್ಕರ್-7, ಬಾರ್ಬರ್-2
ವಾಶರ್‌ಮೆನ್-3, ಎಂಟಿಎಸ್ (ಗಾರ್ಡೆನರ್ ಮತ್ತು ಹೆಡ್ ಗಾರ್ಡೆನರ್)-2, ಎಂಟಿಎಸ್ (ವಾಚ್‌ಮನ್)-10, ಎಂಟಿಎಸ್ (ಮೆಸೇಂಜರ್ )-9, ಎಂಟಿಎಸ್ (ಸಫಾಯಿವಾಲಾ)-5, Syce-1, ಎಂಟಿಎಸ್ ಲಾಸ್ಕರ್-6, ಎಕ್ವಿಪ್ಮೆಂಟ್ ರಿಪೇರಿ ಮಾಡುವವರು-1, ಮಲ್ಟಿ ಟಾಸ್ಕಿಂಗ್ ಸ್ಟಾಫ್-20
ವಿದ್ಯಾರ್ಹತೆ ಮತ್ತು ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. ಖಾಲಿ ಇರುವ ಹುದ್ದೆಗಳಲ್ಲಿ ಯಾವುದೇ ವಿಭಾಗಕ್ಕೆ ಅರ್ಜಿ ಸಲ್ಲಿವವರಿಗೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 30 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 28 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅರ್ಜಿ ಸಲ್ಲಿಸಿದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿ ಮೊದಲಿಗೆ ಪರೀಕ್ಷೆ ನಡೆಸಲಾಗುತ್ತದೆ. ಆ ಪರೀಕ್ಷೆಯಲ್ಲಿ ನಿಗದಿತ ಅಂಕ ಗಳಿಸಿದವರಿಗೆ ಮುಂದಿನ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನಂತರ ಲಿಖಿತ ಪರೀಕ್ಷೆ ಮತ್ತು ಸ್ಕಿಲ್ ಟೆಸ್ಟ್ ನಡೆಸಿ ಆಯ್ಕೆ ಮಾಡುತ್ತದೆ. ಆಯ್ಕೆಯಾಗಿ ಕೆಲಸ ಗಿಟ್ಟಿಸಿಕೊಂಡವರಿಗೆ ಲೆವೆಲ್-1, ಲೆವೆಲ್-2 ಪೇ ಮೆಟ್ರಿಕ್ಸ್ ಆಧಾರದಲ್ಲಿ ರೂ.19,000 - 63,000 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
KSP Recruitment 2022: ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ
ಎಲ್‌ಡಿಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿ
ಪರೀಕ್ಷೆ ಅವಧಿ - 2 ಗಂಟೆ.
ಪರೀಕ್ಷೆ ಪ್ರಶ್ನೆಗಳನ್ನು ಕೇಳುವ ವಿಭಾಗ : ಜೆನೆರಲ್ ಇಂಟೆಲಿಜೆನ್ಸ್, ಇಂಗ್ಲಿಷ್ ಭಾಷೆ, ನ್ಯುಮೆರಿಕಲ್ ಆಪ್ಟಿಟ್ಯೂಡ್, ಜೆನೆರಲ್ ಅವಾರ್ನೆಸ್, ಸ್ಕಿಲ್ ಟೆಸ್ಟ್.
ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಇತರೆ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿ
ಪರೀಕ್ಷೆ ಅವಧಿ - 2 ಗಂಟೆ.
ಪರೀಕ್ಷೆ ಪ್ರಶ್ನೆಗಳನ್ನು ಕೇಳುವ ವಿಭಾಗ : ಜೆನೆರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ನ್ಯುಮೆರಿಕಲ್ ಆಪ್ಟಿಟ್ಯೂಡ್, ಜೆನೆರಲ್ ಇಂಗ್ಲಿಷ್, ಸಾಮಾನ್ಯ ಜ್ಞಾನ.
ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು indianarmy.nic.in.ಗೆ ಭೇಟಿ ನೀಡಿ ನೋಟಿಫಿಕೇಶನ್‌ನಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಅರ್ಜಿ ಯಾವ ಹುದ್ದೆಗೆ ಎಂದು ಇಂಗ್ಲಿಷ್‌ನಲ್ಲಿ ಲಕೋಟೆ ಮೇಲೆ ಬರೆದಿರಬೇಕು.
'The Commandant,
Headquarters
Artillery Centre
Nasik Road Camp PIN-422102
