Indian Military Academy Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ
- ಭಾರತೀಯ ಸೇನೆಯ ತಾಂತ್ರಿಕ ಪದವಿ ಕೋರ್ಸ್‌ನ ವಿವಿಧ ಹುದ್ದೆಗಳಿಗೆ ಅಧಿಸೂಚನೆ
- 135 ನೇ ತಾಂತ್ರಿಕ ಪದವಿ ಕೋರ್ಸ್ 2022 ಜುಲೈ ನಿಂದ ಆರಂಭ
- ಜನವರಿ 4 ಅರ್ಜಿ ಸಲ್ಲಿಸಲು ಕೊನೆಯ ದಿನ
ಬೆಂಗಳೂರು(ಡಿ.27): ಭಾರತೀಯ ಸೇನೆಯು (Indian army) ತನ್ನ ತಾಂತ್ರಿಕ ಪದವಿ ಕೋರ್ಸ್‌ನ (Technical Graduate Course -TGC-135)ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಇಂಜಿನಿಯರಿಂಗ್ ಪದವೀಧರರಾಗಿರುವ ಅವಿವಾಹಿತ ಪುರುಷ ಅರ್ಜಿ ಸಲ್ಲಿಸಹುದಾಗಿದೆ. ಅಧಿಸೂಚನೆಯ ಪ್ರಕಾರ, 135 ನೇ ತಾಂತ್ರಿಕ ಪದವಿ ಕೋರ್ಸ್ ಜುಲೈ 2022 ರಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (Indian Military Academy-IMA) ಆರಂಭವಾಗಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ www.joinindianarmy.nic.in ಗೆ ಭೇಟಿ ನೀಡಲು ಕೋರಲಾಗಿದೆ.
ಹುದ್ದೆಯ ವಿವರ ಇಂತಿದೆ:
ಸಿವಿಲ್/ಕಟ್ಟಡ ನಿರ್ಮಾಣ ತಂತ್ರಜ್ಞಾನ: 09
ವಾಸ್ತುಶಿಲ್ಪ (Architecture): 01
ಮೆಕ್ಯಾನಿಕಲ್: 05
ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್: 03
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಕಂಪ್ಯೂಟರ್ ಟೆಕ್ನಾಲಜಿ/ MSc ಕಂಪ್ಯೂಟರ್ ಸೈನ್ಸ್ : 08
ಮಾಹಿತಿ ತಂತ್ರಜ್ಞಾನ (Information Technology): 03
ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ: 01
ದೂರಸಂಪರ್ಕ (Telecommunication): 01
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (Communication): 02
ಏರೋನಾಟಿಕಲ್/ ಏರೋಸ್ಪೇಸ್/ ಏವಿಯಾನಿಕ್ಸ್: 01
ಎಲೆಕ್ಟ್ರಾನಿಕ್ಸ್: 01
ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್: 01
ಉತ್ಪಾದನೆ (Production): 01
ಕೈಗಾರಿಕಾ/ಕೈಗಾರಿಕಾ/ಉತ್ಪಾದನೆ/ಇಂಡಸ್ಟ್ರಿಯಲ್ ಇಂಜಿನ್ & ಎಂಜಿಟಿ: 01
ಆಪ್ಟೊ ಎಲೆಕ್ಟ್ರಾನಿಕ್ಸ್(Opto Electronics): 01
ಆಟೋಮೊಬೈಲ್ ಇಂಜಿನಿಯರಿಂಗ್ (Automobile Engg): 01
IIIT Bangalore Recruitment 2022: ಬೆಂಗಳೂರಿನ ಐಐಐಟಿಯಲ್ಲಿ Research Associate ಹುದ್ದೆಗೆ ಅರ್ಜಿ
ವಿದ್ಯಾರ್ಹತೆ ವಿವರ: ಅಭ್ಯರ್ಥಿಗಳು ಸಂಬಂಧಿಸಿದ ಎಂಜಿನಿಯರಿಂಗ್ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಎಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿರಬೇಕು. ಪದವಿ ಇಂಜಿನಿಯರಿಂಗ್ ನ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಜುಲೈ 1 2022 ರೊಳಗೆ ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳ ಅಂಕಪಟ್ಟಿಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಗಳನ್ನು ಸಲ್ಲಿಸಬೇಕು. ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿಯಲ್ಲಿ ಪ್ರಾರಂಭವಾದ ದಿನದಿಂದ 12 ವಾರಗಳ ಒಳಗೆ ಎಲ್ಲಾ ಅಂಕಪಟ್ಟಿಗಳನ್ನು ಸಲ್ಲಿಸಬೇಕು.
Hatti Gold Mines Recruitment 2022: ಹಟ್ಟಿ ಚಿನ್ನದ ಗಣಿಯಲ್ಲಿ 1 ಲಕ್ಷಕ್ಕೂ ಅಧಿಕ ವೇತನದ ಉಧ್ಯೋಗ
ವಯೋಮಿತಿ: ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಜುಲೈ 2, 1995 ರಿಂದ ಜುಲೈ 1, 2002 ರ ನಡುವೆ ಜನಿಸಿದವರಾಗಿರಬೇಕು. ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 4 , 2022 (ಮದ್ಯಾಹ್ನ 3 ಗಂಟೆಯೊಳಗೆ).
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ www.joinindianarmy.nic.in ಗೆ ಭೇಟಿ ನೀಡಿ.
UPSC Recruitment 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ
ಭಾರತೀಯ ಸೇನೆಯ 135ನೇ ತಾಂತ್ರಿಕ ಪದವೀಧರರ ಕೋರ್ಸ್ (TGC) ಇದಾಗಿದ್ದು, ಜುಲೈ 2022 ರಲ್ಲಿ ಪ್ರಾರಂಭವಾಗಲಿದೆ. ಒಟ್ಟು 40 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಇಂಡಿಯನ್ ಆರ್ಮಿಯ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳನ್ನು ಪಿಇಟಿ, ಎಸ್‌ಎಸ್‌ಬಿ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ವೈದ್ಯಕೀಯ ಪರೀಕ್ಷೆಗೂ ಅಭ್ಯರ್ಥಿಗಳು ಒಳಪಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 56,100 – 1,77,500/- ರೂ. ಲಭ್ಯವಾಗಲಿದೆ.