ಶಿವಮೊಗ್ಗ, (ಜೂ.16) : ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಗ್ರೂಪ್ 'ವೈ' ಹುದ್ದೆಗಳ ನೇಮಕಾತಿ ಶಿವಮೊಗ್ಗದಲ್ಲಿ ನಡೆಯಲಿದೆ. 

ಜುಲೈ 17 ರಿಂದ 22ರ ತನಕ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನೇಮಕಾತಿ ನಡೆಯಲಿದೆ ಎಂದು  ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ತಿಳಿಸಿದ್ದಾರೆ.

ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರೂಪ್ 'ವೈ' ಹುದ್ದೆಗಳ (ಮೆಡ್ ಅಸಿಸ್ಟೆಂಟ್, ಐಎಎಫ್/ಪಿ ಮತ್ತು ಆಟೋ ಟೆಕ್ ಟ್ರೇಡ್ಸ್) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಯಲಿದೆ. 

ಜುಲೈ 17 ಮತ್ತು 18ರಂದು ನಡೆಯುವ ನೇಮಾಕಾತಿಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಆಯಚೂರು, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ದಯಾನಂದ್ ಹೇಳಿದ್ದಾರೆ.

ವಿದ್ಯಾರ್ಹತೆ
ಪಿಯುಸಿ ಅಥವಾ 12ನೇ ತರಗತಿಗೆ ಸಮನಾಂತರವಾದ ಶಿಕ್ಷಣದಲ್ಲಿ ಶೇಕಡ 50% ಅಂಕಗಳೊಂದಿಗೆ ತೇರ್ಗಡೆಯಾಗೊರಬೇಕು. ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳನ್ನು ಪಡೆದುಕೊಂಡಿರಬೇಕು.

ನೇಮಾಕಾತಿಗೆ ಬೇಕಾದ ದಾಖಲಾತಿಗಳು
ನೇಮಕಾತಿಯ ದಿನ ತಮ್ಮ ಪ್ರಮಾಣ ಪತ್ರದ 4 ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ 30 ಪಾಸ್‍ಪೋರ್ಟ್ ಸೈಜಿನ ಪೋಟೋಗಳನ್ನು ಹಾಗೂ ಹೆಚ್.ಬಿ ಪೆನ್ಸಿಲ್, ಪೆನ್, ಅಳಿಸುವ ರಬ್ಬರು, ಆಧಾರ್ ಕಾರ್ಡ್ (ಇದ್ದಲ್ಲಿ) ನೊಂದಿಗೆ ಎರಡು ಸ್ವವಿಳಾಸವಿರುವ 24x10 ಸೆ.ಮೀ ಅಳತೆಯ ಕವರ್ ಗಳನ್ನು ತೆಗೆದುಕೊಂಡು ಬರಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣೆ ಸಂಖ್ಯೆ 080-25592199 ಗೆ ಸಂಪರ್ಕಿಸಬಹುದು. ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಇವರನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.