ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2019ನೇ ಸಾಲಿನ ನೇಮಕಾತಿ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್ 10): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 218 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 24 ಜೂನ್ 2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ವಿವಿಧ ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗೆ 18 ರಿಂದ 25 ವರ್ಷ, ಎಸ್ ಸಿ/ ಎಸ್ಟಿ/ ಕೆಟಗೆರಿ 01, 2ಎ, 3ಎ, 3ಬಿ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ (10ನೇ ತರಗತಿ) ಅಥವಾ ತತ್ಸಮಾನ ಉತ್ತೀರ್ಣಗೊಳಿಸಿರಬೇಕು.
ವಿವಿಧ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ; ಸಾಮಾನ್ಯ/ ಒಬಿಸಿ (2ಎ, 2ಬಿ, 3ಎ, 3 ಬಿ): 250 ರು. ಎಸ್ ಸಿ/ ಎಸ್ಟಿ/ ಕೆಟಗೆರಿ-1/ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 100 ರು. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
ನಿಗದಿತ ಶುಲ್ಕವನ್ನು HDFC ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿ ಅಧಿಕೃತ ಶಾಖೆಗಳ ಕಚೇರಿಯಲ್ಲಿ ಚಲನ್‌ನ ಹಣ ಪಾವತಿಸಬೇಕು.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಹಿಷ್ಣು ಪರೀಕ್ಷೆ ಮತ್ತು ಶಾರೀರಿಕ ಮಾನದಂಡ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಸಹಿಷ್ಣುತೆ ಪರೀಕ್ಷೆ: (ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ)
* 2 ಕಿಲೋ ಮೀಟರ್ ಓಟ (10 ನಿಮಿಷದಲ್ಲಿ).
* ಉದ್ದ ಜಿಗಿತ ಅಥವಾ ಎತ್ತರ ಜಿಗಿತ (3.80 ಮೀಟರ್ ಗೆ ಕಡಿಮೆ ಇಲ್ಲದಂತೆ) ಅಥವಾ ಎತ್ತರ ಜಿಗಿತ 1.20 ಮೀಟರ್ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ).
* ಗುಂಡು ಎಸೆತ(7.26 ಕೆ.ಜಿ) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ದೂರ ಎಸೆಯಬೇಕು. (ಮೂರು ಅವಕಾಶಗಳು)
ದೇಹದಾರ್ಢತೆ ಪರೀಕ್ಚೆ: (ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ)
* ಕನಿಷ್ಠ ಎತ್ತರ: 170 ಸೆಂ.ಮೀ. ಕಡಿಮೆ ಇಲ್ಲದಂತೆ (ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ)
*ಎದೆ ಸುತ್ತಳತೆ: 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5.ಸೆಂ.ಮೀ.
ವೇತನ ಶ್ರೇಣಿ: 21400-500-22400-550-24600-600-27000-650-29600-750-32600-850-36000-950-39800-
1100-42000
ಪಿಂಚಣಿ ಸೌಲಭ್ಯ : ಸರ್ಕಾರದ ಆದೇಶ ಸಂಖ್ಯೆ: ಎಫ್‍ಡಿ(ಎಸ್‍ಪಿಎಲ್) 04 ಪಿಇಟಿ 2005, ದಿನಾಂಕ:31.03.2006 ರಂತೆ ನೂತನ
ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.