ಭಾರತೀಯ ಅಂಚೆ ಇಲಾಖೆ ದೇಶದೆಲ್ಲೆಡೆ ಒಟ್ಟು  98083 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ನವೆಂಬರ್ ನಿಂದ ಡಿಸೆಂಬರ್ 2022ರವರೆಗೂ ಕಾಲಾವಕಾಶವಿದೆ.

ಬೆಂಗಳೂರು (ನ.5): ಅಂಚೆ ಇಲಾಖೆ ವೃತ್ತಿ-ಕೇಂದ್ರಿತ ಉದ್ಯೋಗ ಶೋಧಕರಿಗೆ ಬಹುನಿರೀಕ್ಷಿತ ಪ್ರಸ್ತುತ ಭಾರತೀಯ ಅಂಚೆ ಇಲಾಖೆ ನೇಮಕಾತಿ 2022 ಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಭಾರತದಾದ್ಯಂತ ಗಣನೀಯ ಸಂಖ್ಯೆಯ MTS ಮತ್ತು ಮೇಲ್ ಗಾರ್ಡ್ ನೇಮಕಾತಿಗಳನ್ನು ಭರ್ತಿ ಮಾಡಲು ದೇಶದೆಲ್ಲೆಡೆ ಒಟ್ಟು 98083 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅಂಚೆ ವಲಯಗಳಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ತಾಣ www.indiapost.gov.in ಗೆ ಭೇಟಿ ನೀಡಲು ಕೋರಲಾಗಿದೆ. ನವೆಂಬರ್‌ ನಲ್ಲಿ ನೇಮಕಾತಿ ಆರಂಭವಾಗಿದ್ದು, ಡಿಸೆಂಬರ್ 2022ಕ್ಕೆ ನೇಮಕಾತಿ ಅಂತ್ಯವಾಗಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಎಲ್ಲಾ ಬಗೆಗಿನ ವಿವರ ಪಡೆದುಕೊಳ್ಳಬಹುದು. ಒಟ್ಟು 98083 ಹುದ್ದೆಗಳಲ್ಲಿ ಇಂಡಿಯಾ ಪೋಸ್ಟ್ ಪೋಸ್ಟ್‌ಮ್ಯಾನ್ 59,099 ಹುದ್ದೆಗಳನ್ನು, ಇಂಡಿಯಾ ಪೋಸ್ಟ್ ಮೇಲ್ ಗಾರ್ಡ್ ಗೆ 1445 ಹುದ್ದೆಗಳನ್ನು ಮತ್ತು ಪೋಸ್ಟ್ ಆಫೀಸ್ MTS ಗೆ 37,539 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಕ್ರಮವಾಗಿ 3887 ಹುದ್ದೆಗಳನ್ನು, 90 ಹುದ್ದೆಗಳನ್ನು, 1754 ಹುದ್ದೆಗಳನ್ನು ಮೀಸಲಿಡಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು 10 ನೇ, 12 ನೇ ತರಗತಿ ಪಾಸಾಗಿರಬೇಕು. 
ಮೇಲ್ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು 10 ನೇ, 12 ನೇ ತರಗತಿ ಪಾಸ್ ಜೊತೆಗೆ ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು.
ಮಲ್ಟಿ ಟಾಸ್ಕಿಂಗ್ ( MTS) ಹುದ್ದೆಗೆ ಐಟಿಐ ಅಥವಾ ಮೆಟ್ರಿಕ್ಯುಲೇಷನ್ ಮಾಡಿರಬೇಕು. ಬೇಸಿಕ್ ಕಂಪ್ಯೂಟರ್ ಕೌಶಲ್ಯಗಳು ತಿಳಿದಿರಬೇಕು.

ವಯೋಮಿತಿ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 32 ವರ್ಷದ ಒಳಗಿರಬೇಕು.

NAAC Recruitment 2022: ಉಪ ಸಲಹೆಗಾರರ ​​ಹುದ್ದೆಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

SAIL Recruitment 2022: ವಿವಿಧ 245 ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ

ವೇತನ ವಿವರ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 33718 ರೂ ನಿಂದ 35370 ರೂ ವೇತನ ದೊರೆಯಲಿದೆ.