Asianet Suvarna News Asianet Suvarna News

HPCL Recruitment 2022: ಒಟ್ಟು 25 ಮ್ಯಾನೇಜರ್ ಹುದ್ದೆಗಳಿಗೆ ಹೆಚ್‌ಪಿಸಿಎಲ್‌ ನೇಮಕಾತಿ

ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 25 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನವಾಗಿದೆ.

HPCL Recruitment 2022 notification For Various Manager Posts gow
Author
Bengaluru, First Published Mar 11, 2022, 10:32 PM IST

ಬೆಂಗಳೂರು(ಮಾ.11): ದೇಶದ ಪ್ರಮುಖ ಕಂಪನಿಯಾಗಿರುವ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (Hindustan petroleum Corporation Limited- HPCL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಮುಖ್ಯ ವ್ಯವಸ್ಥಾಪಕರು , ಸಹಾಯಕ ವ್ಯವಸ್ಥಾಪಕ, ಹಿರಿಯ ಅಧಿಕಾರಿ ಸೇರಿ ಒಟ್ಟು 25 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಎಪ್ರಿಲ್ 18 ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ  hindustanpetroleum.com ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 25 ಹುದ್ದೆಗಳ ಮಾಹಿತಿ ಇಂತಿದೆ
ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು (Chief Manager / Deputy General Manager)-ಎಂಜಿನ್:  1 ಹುದ್ದೆ
ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು (Chief Manager / Deputy General Manager)- ತುಕ್ಕು ಸಂಶೋಧನೆ:  1 ಹುದ್ದೆ
ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು (Chief Manager / Deputy General Manager)-ಕಚ್ಚಾ ಮತ್ತು ಇಂಧನ ಸಂಶೋಧನೆ:  1 ಹುದ್ದೆ
ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು (Chief Manager / Deputy General Manager)-ವಿಶ್ಲೇಷಣಾತ್ಮಕ: 2 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ (Assistant Manager/ Manager ) -ಪೆಟ್ರೋಕೆಮಿಕಲ್ಸ್ ಮತ್ತು ಪಾಲಿಮರ್ಸ್:  3 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ (Assistant Manager/ Manager ) - ಇಂಜಿನ್:  1 ಹುದ್ದೆ
ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ (Assistant Manager/ Manager ) – ಕಾದಂಬರಿ ಪ್ರತ್ಯೇಕತೆಗಳು:  2 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ (Assistant Manager/ Manager ) -ಕ್ಯಾಟಲಿಸ್ಟ್ ಸ್ಕೇಲ್-ಅಪ್:  2 ಹುದ್ದೆಗಳು
ಹಿರಿಯ ಅಧಿಕಾರಿ (Senior Officer) – ಪೆಟ್ರೋಕೆಮಿಕಲ್ಸ್ ಮತ್ತು ಪಾಲಿಮರ್‌ಗಳು: 3 ಹುದ್ದೆಗಳು
ಹಿರಿಯ ಅಧಿಕಾರಿ ಇಂಜಿನ್ (Senior Officer Engine):3 ಹುದ್ದೆಗಳು
ಹಿರಿಯ ಅಧಿಕಾರಿ-ಬ್ಯಾಟರಿ ಸಂಶೋಧನೆ: 1 ಹುದ್ದೆ
ಹಿರಿಯ ಅಧಿಕಾರಿ – ಕಾದಂಬರಿ ಪ್ರತ್ಯೇಕತೆ: 2 ಹುದ್ದೆಗಳು
ಹಿರಿಯ ಅಧಿಕಾರಿ – ರೆಜಿಡಿ ಉನ್ನತೀಕರಣ: 1 ಹುದ್ದೆ
ಹಿರಿಯ ಅಧಿಕಾರಿ –ಕಚ್ಚಾ ಮತ್ತು ಇಂಧನ ಸಂಶೋಧನೆ: 1 ಹುದ್ದೆ
ಹಿರಿಯ ಅಧಿಕಾರಿ – ವಿಶ್ಲೇಷಕ: 1 ಹುದ್ದೆ

ಅತ್ಯಾಚಾರ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ರಾಜ್ಯ ಹೈಕೋರ್ಟ್ ಅನುಮತಿ!

ಶೈಕ್ಷಣಿಕ ವಿದ್ಯಾಭ್ಯಾಸ: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಮುಖ್ಯ ವ್ಯವಸ್ಥಾಪಕರು / ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ರಸಾಯನಶಾಸ್ತ್ರದಲ್ಲಿ ಪಿಹೆಚ್‌ಡಿ/ಕೆಮಿಕಲ್ ಇಂಜಿನಿಯರಿಂಗ್ /ಲೋಹಶಾಸ್ತ್ರದಲ್ಲಿ ತುಕ್ಕು ವಿಶೇಷ ಅಧ್ಯಯನ.

ಸಹಾಯಕ ವ್ಯವಸ್ಥಾಪಕ/ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪಿಹೆಚ್‌ಡಿ  ಅಥವಾ ರಾಸಾಯನಿಕ ವಿಜ್ಞಾನದ ಇತರ ಸಂಬಂಧಿತ ಕ್ಷೇತ್ರದಲ್ಲಿ  ME ಅಥವಾ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ M.Tech ಮಾಡಿರಬೇಕು. 

ಇತರ ಹುದ್ದೆಗಳಿಗೆ ಎಂಇ, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ M.Tech ಮಾಡಿರಬೇಕು. 

ಅರ್ಜಿ ಶುಲ್ಕ: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ UR/OBC/EWS ಅಭ್ಯರ್ಥಿಗಳು ₹1180 ಅರ್ಜಿ ಶುಲ್ಕ ಪಾವತಿಸಬೇಕು. SC/ ST/ PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

KPSC Recruitment 2022: ಔಷಧ ವಿಶ್ಲೇಷಕರು ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ

ವಯೋಮಿತಿ: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ 27  ರಿಂದ 50 ವರ್ಷದ ಒಳಗಿರಬೇಕು.

ವೇತನ: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ₹60,000 ರಿಂದ ₹2,80,000 ವೇತನ ದೊರೆಯಲಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಾರ್ಚ್  14 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 18

Follow Us:
Download App:
  • android
  • ios