ಕೋಲಾರದಲ್ಲಿ ಅಗ್ನಿ ಪತ್ ತರಬೇತಿ ಆರಂಭ, ಸೇನಾಕಾಂಕ್ಷಿಗಳಿಂದ ಉತ್ತಮ ಪ್ರತಿಕ್ರಿಯೆ
* ಕೋಲಾರದಲ್ಲಿ ಅಗ್ನಿ ಪತ್ ತರಬೇತಿ ಆರಂಭ.
* 182 ಯುವಕರಿಗೆ ನಡೆಯುತ್ತಿರುವ ಉಚಿತ ತರಬೇತಿ.
* ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿ ಪತ್ ಯೋಜನೆ.
* ಕೋಲಾರದಲ್ಲಿ ಸೇನಾಕಾಂಕ್ಷಿಗಳಿಂದ ಭರ್ಜರಿ ಪ್ರತಿಕ್ರಿಯೆ
ಕೋಲಾರ, (ಜುಲೈ.08) : ಅದು ದೇಶ ಕಾಯಲು ಯೋಧರನ್ನು ರೂಪಿಸುತ್ತಿರುವ ಸಂಸ್ಥೆ. ವಿವಾದಕ್ಕೆ ಕಾರಣವಾಗಿದ್ದ ಅಗ್ನಿ ಪತ್ ಯೋಜನೆಗೆ ಬೇಕಾದ ನೂರಾರು ಅಗ್ನಿ ವೀರರು ಅಲ್ಲಿ ಸಿದ್ಧಗೊಳ್ತಿದ್ದಾರೆ.ಉಚಿತವಾಗಿ ತರಭೇತಿ ಪಡೆಯುತ್ತಿರುವ ಯುವಕ ಯುವತಿಯರು ದೇಶ ಸೇವೆಗಾಗಿ ಶ್ರಮ ಹಾಕ್ತಿದ್ದು,ಸೈನ್ಯಕ್ಕೆ ಸೇರಲು ಉತ್ಸುಕರಾಗಿದ್ದಾರೆ.ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಹೌದು,ಸೈನ್ಯಕ್ಕೆ ಸೇರಬೇಕು, ದೇಶ ಸೇವೆ ಮಾಡ್ಬೇಕು ಅಂತ ಕೆಲವರು ಮಾತಾಡ್ತಾರೆ ಬಿಟ್ರೆ, ಮಾಡಿ ತೋರಿಸೋರು ಕಡಿಮೆ.ಆದ್ರೆ ಇಲ್ಲಿನ ಯುವಕ ಯುವತಿಯರು ಸೈನ್ಯಕ್ಕೆ ಸೇರಿಕೊಳಲ್ಲೂ ಈಗಿನಿಂದಲೇ ತಯಾರಿ ತೆಗೆದುಕೊಳ್ತಿದ್ದು,ದೇಶ ಸೇವೆಗೆ ಸೇರಿಕೊಳಲ್ಲೂ ಅಗ್ನಿ ಪತ್ ಯೋಜನೆಯ ಮೂಲಕ ಭರ್ಜರಿ ತಯಾರಿ ತೆಗೆದುಕೊಳ್ತಿದ್ದಾರೆ.ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿ ಪತ್ ಯೋಜನೆ ದೇಶಾದ್ಯಂತ ಅದೆಷ್ಟೇ ವಿವಾದ ಸೃಷ್ಟಿಸಿದ್ರು ಸೇನಾಕಾಂಕ್ಷಿಗಳ ರೆಸ್ಪಾನ್ಸ್ ಮಾತ್ರ ಭರ್ಜರಿಯಾಗಿದೆ.ಆಗಾಗಿ ಸೇನೆಗೆ ಸೇರ ಬಯಸುವ ಅಗ್ನಿ ವೀರರನ್ನ ಚಿನ್ನದ ನಾಡು ಕೋಲಾರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆ ಉಚಿತವಾಗಿ ಟ್ರೈನಿಂಗ್ ನೀಡಿ ತಯಾರು ಮಾಡ್ತಿದೆ.
IAF Agniveer Recruitment 2022; ಅಗ್ನಿಪಥಕ್ಕೆ 2 ಲಕ್ಷ ಅರ್ಜಿ, ಜು.5ರಂದು ಪ್ರಕ್ರಿಯೆ ಅಂತ್ಯ
ಹೌದು ಕೋಲಾರದ ಸ್ಪೋರ್ಟ್ಸ್ ಕ್ಲಬ್ ಮೂಲಕ ಅಗ್ನಿ ವಿರರಾಗಿ ತಯಾರಾಗಲು ಬಯಸುವ ಯುವಕ,ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿ ನೀಡ್ತಿದೆ.ಮಾಜಿ ಸೈನಿಕರಾದ ಕೃಷ್ಣಮೂರ್ತಿ,ಬ್ಲಾಕ್ ಕಮಾಂಡೋ ಟ್ರೈನಿಂಗ್ ಪಡೆದಿರುವ ಸುರೇಶ್ ಅವರ ಮಾರ್ಗದರ್ಶನದಲ್ಲಿ 182 ಅಭ್ಯರ್ಥಿಗಳು ತರಬೇತಿ ಪಡೆದುಕೊಳ್ತಿದ್ದಾರೆ.ಅತ್ಯಂತ ಜೋಶ್ ನಿಂದ ತರಬೇತಿ ಪಡೆಯುತ್ತಿರುವ ಅಗ್ನಿ ವೀರರು ಮುಂದಿನ ತಿಂಗಳು ಹಾಸನದಲ್ಲಿ ನಡೆಯುವ ಆರ್ಮಿ ಸೆಲೆಕ್ಷನ್ ನಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಕೋಲಾರ ಸ್ಪೋರ್ಟ್ಸ್ ಕ್ಲಬ್ ಕಳೆದ 25 ವರ್ಷಗಳಿಂದಲೂ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಇಂತಹ ಕ್ರೀಡಾ ಚಟುವಟಿಕೆ ನಡೆಸಿಕೊಂಡು ಬಂದಿದೆ.ಕೋವಿಡ್ ನಿಂದ ತರಬೇತಿ ನಿಲ್ಲಿಸಲಾಗಿತ್ತು,ಇದೀಗ ಅಗ್ನಿ ಪತ್ ಮೂಲಕ ಮತ್ತೆ ತರಬೇತಿ ಶುರುವಾಗಿದೆ.
ಇನ್ನು ರಾಜ್ಯದ ಹಲವು ಜಿಲ್ಲೆಗಳಿಂದ ಅಗ್ನಿ ವೀರರಾಗಲು ಆಸೆ ಪಡ್ತಿದ್ದಾರೆ.ಆದ್ರೆ ಸೌಲಭ್ಯಗಳ ಕೊರತೆಯಿಂದ ಕೋಲಾರ ಜಿಲ್ಲೆಯವರಿಗೆ ಮಾತ್ರ ತರಬೇತಿ ನೀಡ್ತಿದ್ದಾರೆ.ಸೈನ್ಯಕ್ಕೆ ಬೇಕಾಗುವ ದೈಹಿಕ ತರಬೇತಿ ಹಾಗೂ ಪಠ್ಯ ತರಬೇತಿ ಸಹ ಉಚಿತವಾಗಿ ನೀಡಲಾಗ್ತಿದೆ.ಇದರ ಜೊತೆ ತರಬೇತಿ ಪಡೆಯುತ್ತಿರುವ ಯುವಕ ಯುವತಿಯರಿಗೆ ಉಚಿತವಾಗಿ ಮೊಟ್ಟೆ, ಹಾಲು,ಬಾಳೆಹಣ್ಣು ಹಾಗೂ ಮೊಳಕೆಕಾಳು ಸಹ ನೀಡ್ತಿರೋದು ವಿಶೇಷ.
ಒಟ್ಟಾರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಗ್ನಿ ಪತ್ ಯೋಜನೆ ಹಲವೂ ವಿವಾದಗಳ ನಡುವೆಯೂ ಸದ್ದಿಲ್ಲದೆ ಉತ್ತಮ ಸ್ಪಂದನೆ ಗಳಿಸುತ್ತಿದೆ.ಸೈನ್ಯಕ್ಕೆ ಸೇರಲು ಕೋಲಾರ ಜಿಲ್ಲೆಯ ನೂರಾರು ಜನರು ಉತ್ಸುಕರಾಗಿದ್ದು,ಅಗ್ನಿ ವೀರರಾಗಲು ತರಬೇತಿ ಪಡೆದು ಸಿದ್ದರಾಗ್ತಿದ್ದಾರೆ ಅನ್ನೋದು ವಿಶೇಷ.