DRDO Recruitment 2022: CVRDE ವಿಭಾಗದಲ್ಲಿ ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಅರ್ಜಿ ಆಹ್ವಾನಿಸಿದ DRDO
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಜನವರಿ 27ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ಚೆನ್ನೈ(ಜ.5): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation-DRDO) - ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (Combat Vehicles Research & Development Establishment-CVRDE) ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳ ಒಳಗೆ (ಜನವರಿ 27, 2022) ಒಳಗೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ನಿಗದಿತ ನಮೂನೆಯ ಮೂಲಕ ಕಳುಹಿಸಬಹುದು. ಹೆಚ್ಚಿನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rac.gov.in ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾರ್ಹತೆ: ಡಿಆರ್‌ಡಿಒ ಜೂನಿಯರ್ ರಿಸರ್ಚ್ ಫೆಲೋ ( Junior Research Fellow ) ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು. ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಮೊದಲ ವಿಭಾಗದಲ್ಲಿ ಎಂಇ/ಎಂಟೆಕ್ ಅಥವಾ ಗೇಟ್ ಸ್ಕೋರ್ ಪೂರ್ಣಗೊಳಿಸಿರಬೇಕು.
ವಯೋಮಿತಿ: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಕೆಟಗರಿಯ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳ ವಯಸ್ಸು ಗರಿಷ್ಠ 31 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳ ವಯಸ್ಸು ಗರಿಷ್ಠ 33 ವರ್ಷ ಮೀರಿರಬಾರದು. ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಪರೀಕ್ಷೆ ಮತ್ತು CBT/ಲಿಖಿತ ಪರೀಕ್ಷೆಯ ಒಟ್ಟು ಅಂಕಗಳ ಶಿಸ್ತುವಾರು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಫಲಿತಾಂಶವನ್ನು RAC ವೆಬ್‌ಸೈಟ್ rac.gov.in ನಲ್ಲಿ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 31,000 ಮಾಸಿಕ ವೇತನ ಸಿಗಲಿದೆ. ಮತ್ತು ಚೆನ್ನೈನಲ್ಲಿ ಉದ್ಯೋಗ ಮಾಡಬೇಕಾಗುತ್ತದೆ.
CNP RECRUITMENT 2022: ನೋಟು ಮುದ್ರಣಾಲಯದಲ್ಲಿ 1 ಲಕ್ಷದವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಐದು ಭಾರತೀಯ ಕಂಪನಿಗಳಿಗೆ ಮಿಲಿಟರಿ ದರ್ಜೆಯ ಬಟ್ಟೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹಸ್ತಾಂತರಿಸಿದೆ. ಇದು ಹಿಮಾಲಯದ ಶಿಖರಗಳಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ನಡೆಸಲು ವಿದೇಶಿಗಳಿಂದ ತೀವ್ರವಾದ ಶೀತ ಹವಾಮಾನದ ಉಡುಪುಗಳನ್ನು (Extreme Cold Weather Clothing System) ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲಿದೆ. ಈ ತಂತ್ರಜ್ಞಾನವನ್ನು ದೇಶೀಯ ಕಂಪನಿಗಳಿಗೆ ವರ್ಗಾಯಿಸಲಾಗಿದ್ದೂ ಇದರಿಂದ ಅವರು ಮಿಲಿಟರಿ ದರ್ಜೆಯ (Military Standard) ಬಟ್ಟೆಗಳನ್ನು ಭಾರತೀಯ ಸೇನೆಗೆ ನೀಡುವುದಲ್ಲದೇ ಇತರ ದೇಶಗಳಿಗೆ ರಫ್ತು ಕೂಡ ಮಾಡಬಹುದಾಗಿದೆ.
Kalyana Karnataka Recruitment Process: 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ
50 ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಉಡುಪು!: ಡಿಆರ್‌ಡಿಓದ ದೆಹಲಿ ಮೂಲದ ಲ್ಯಾಬ್ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್ (DIPAS) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ತೀವ್ರವಾದ ಶೀತ ಹವಾಮಾನದ ಉಡುಪು ಮೂರು-ಪದರದ ವ್ಯವಸ್ಥೆಯಾಗಿದ್ದು, ಇದು +15 ಡಿಗ್ರಿ ಸೆಲ್ಸಿಯಸ್‌ನಿಂದ -50 ಡಿಗ್ರಿ ಸೆಲ್ಸಿಯಸ್ ನಡುವೆ ಉಷ್ಣ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ವಿವಿಧ ಹಂತದ ದೈಹಿಕ ಚಟುವಟಿಕೆಯ ಸಮಯದಲ್ಲಿ ಹಿಮಾಲಯ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ ತೀವ್ರವಾದ ಶೀತ ಹವಾಮಾನದ ಉಡುಪುಗಳನ್ನು ಐದು ವಿವಧ ದೈಹಿಕ ಚಟುವಟಿಕೆಗಳಿಗೆ ವಿನ್ಯಾಸಗೊಳಿಸಲಾಗಿದೆ.