CNP Recruitment 2022: ನೋಟು ಮುದ್ರಣಾಲಯದಲ್ಲಿ 1 ಲಕ್ಷದವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ನೋಟು ಮುದ್ರಣಾಲಯ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಬೆಂಗಳೂರು(ಜ.5): ನೋಟು ಮುದ್ರಣಾಲಯ (Currency Note Press) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವೆಲ್ಫೇರ್ ಆಫೀಸರ್ (Welfare Officer), ಸೂಪರ್ವೈಸರ್ (Supervisor) ಸೇರಿ ಒಟ್ಟು 149 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 4 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ cnpnashik.spmcil.comಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.
ಒಟ್ಟು 149 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ:
ಕಲ್ಯಾಣ ಅಧಿಕಾರಿ- 1
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -10
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -5
ಮೇಲ್ವಿಚಾರಕ (ಅಧಿಕೃತ ಭಾಷೆ)- 1
ಕಾರ್ಯದರ್ಶಿ ಸಹಾಯಕ -1
ಕಿರಿಯ ಕಛೇರಿ ಸಹಾಯಕ -6
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -104
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 21
ಅರ್ಜಿ ಶುಲ್ಕ: ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC/ST/PWD ಅಭ್ಯರ್ಥಿಗಳು 200 ರೂ. ಮತ್ತು ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.
KALYANA KARNATAKA RECRUITMENT PROCESS: 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ ಎಂದ ಬೊಮ್ಮಾಯಿ
ಶೈಕ್ಷಣಿಕ ವಿದ್ಯಾರ್ಹತೆ:
ಕಲ್ಯಾಣ ಅಧಿಕಾರಿ- ಪದವಿ, ಡಿಪ್ಲೊಮಾ, ಎಂಎ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಬಿಇ, ಬಿ.ಟೆಕ್, ಬಿಎಸ್ಸಿ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಬಿಇ, ಬಿ.ಟೆಕ್, ಬಿಎಸ್ಸಿ
ಮೇಲ್ವಿಚಾರಕ (ಅಧಿಕೃತ ಭಾಷೆ)- ಸ್ನಾತಕೋತ್ತರ ಪದವಿ
ಕಾರ್ಯದರ್ಶಿ ಸಹಾಯಕ - ಪದವಿ
ಕಿರಿಯ ಕಛೇರಿ ಸಹಾಯಕ -ಪದವಿ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಐಟಿಐ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಐಟಿಐ
NIMHANS Recruitment 2022: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್
ವಯೋಮಿತಿ ವಿವರ:
ಕಲ್ಯಾಣ ಅಧಿಕಾರಿ- 18-30 ವರ್ಷ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -18-30 ವರ್ಷ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -18-30 ವರ್ಷ
ಮೇಲ್ವಿಚಾರಕ (ಅಧಿಕೃತ ಭಾಷೆ)- 18-30 ವರ್ಷ
ಕಾರ್ಯದರ್ಶಿ ಸಹಾಯಕ -18-28 ವರ್ಷ
ಕಿರಿಯ ಕಛೇರಿ ಸಹಾಯಕ -18-28 ವರ್ಷ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -18-25 ವರ್ಷ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 18-25 ವರ್ಷ
ವೇತನ:
ಕಲ್ಯಾಣ ಅಧಿಕಾರಿ- ಮಾಸಿಕ 29740-103000 ರೂ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಮಾಸಿಕ 27600-95910 ರೂ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಮಾಸಿಕ 27600-95910 ರೂ
ಮೇಲ್ವಿಚಾರಕ (ಅಧಿಕೃತ ಭಾಷೆ)- ಮಾಸಿಕ 27600-95910 ರೂ
ಕಾರ್ಯದರ್ಶಿ ಸಹಾಯಕ -ಮಾಸಿಕ 23910-85570 ರೂ
ಕಿರಿಯ ಕಛೇರಿ ಸಹಾಯಕ -ಮಾಸಿಕ 21540-77160 ರೂ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಮಾಸಿಕ 18780-67390 ರೂ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಮಾಸಿಕ 18780-67390 ರೂ
ಆಯ್ಕೆ ಪ್ರಕ್ರಿಯೆ: ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ಸ್ಟೆನೋಗ್ರಫಿ ಮತ್ತು ಟೈಪಿಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ನಾಸಿಕ್ ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ನೋಟು ಮುದ್ರಣಾಲಯದ ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ