Oil India recruitment 2022: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ 55 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 15, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಬೆಂಗಳೂರು(ಮಾ.7): ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಆಯಿಲ್ ಲಿಮಿಟೆಡ್‌ನಲ್ಲಿ (Oil India Limited) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಸ್ಸಾಂ ನಲ್ಲರುವ ಕಂಪೆನಿಗೆ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 55 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾರ್ಚ್ 15, 2022ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಸಕ್ತರು https://www.oil-india.com/ ಗೆ ಭೇಟಿ ನೀಡಲು ಕೋರಲಾಗಿದೆ. ಗ್ರೇಡ್ ಬಿ ವಿಭಾಗಕ್ಕೆ 50 ಹುದ್ದೆಗಳು ಮತ್ತು ಗ್ರೇಡ್ ಸಿ ವಿಭಾಗಕ್ಕೆ 5 ಹುದ್ದೆಗಳನ್ನು ವಿಂಗಡಣೆ ಮಾಡಲಾಗಿದೆ.
ಒಟ್ಟು 55 ಹುದ್ದೆಗಳು ಮಾಹಿತಿ ಇಂತಿದೆ.
ಮ್ಯಾನೇಜರ್ (ERP-HR): 1 ಹುದ್ದೆ
ಸೂಪರಿಂಟೆಂಡಿಂಗ್ ಎಂಜಿನಿಯರ್ (ಪರಿಸರ): 2 ಹುದ್ದೆಗಳು
ಹಿರಿಯ ಅಧಿಕಾರಿ (ಇನ್ಸ್ಟ್ರುಮೆಂಟೇಶನ್): 6 ಹುದ್ದೆಗಳು
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ರೇಡಿಯಾಲಜಿ): 1 ಹುದ್ದೆ
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ಪೀಡಿಯಾಟ್ರಿಕ್ಸ್): 1 ಹುದ್ದೆ
ಹಿರಿಯ ವೈದ್ಯಕೀಯ ಅಧಿಕಾರಿ: 1 ಹುದ್ದೆ
ಹಿರಿಯ ಭದ್ರತಾ ಅಧಿಕಾರಿ: 1 ಹುದ್ದೆ
ಹಿರಿಯ ಅಧಿಕಾರಿ (ಸಿವಿಲ್): 2 ಹುದ್ದೆಗಳು
ಹಿರಿಯ ಅಧಿಕಾರಿ (ಎಲೆಕ್ಟ್ರಿಕಲ್): 8 ಹುದ್ದೆಗಳು
ಹಿರಿಯ ಅಧಿಕಾರಿ (ಮೆಕ್ಯಾನಿಕಲ್): 20 ಹುದ್ದೆಗಳು
ಹಿರಿಯ ಅಧಿಕಾರಿ (ಸಾರ್ವಜನಿಕ ವ್ಯವಹಾರಗಳು): 4 ಹುದ್ದೆಗಳು
ಸೀನಿಯರ್ ಅಕೌಂಟ್ಸ್ ಆಫೀಸರ್ / ಸೀನಿಯರ್ ಇಂಟರ್ನಲ್ ಆಡಿಟರ್: 5 ಹುದ್ದೆಗಳು
ಹಿರಿಯ ಅಧಿಕಾರಿ (HR): 3 ಹುದ್ದೆಗಳು
IRCON Recruitment 2022: ಇಂಜಿನಿಯರ್ ಸೇರಿ ವಿವಿಧ ಹುದ್ದೆಗಳಿಗೆ ಭಾರತೀಯ ರೈಲ್ವೆ
ಶೈಕ್ಷಣಿಕ ವಿದ್ಯಾರ್ಹತೆ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಮ್ಯಾನೇಜರ್ ಹುದ್ದೆಗೆ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ ಮಾಡಿರಬೇಕು. ಜೊತೆಗೆ 65%ರಷ್ಟು ಅಂಕಗಳನ್ನು ಪಡೆದಿರಬೇಕು.
ಸೂಪರಿಂಟೆಂಡಿಂಗ್ ಎಂಜಿನಿಯರ್ (ಪರಿಸರ) ಹುದ್ದೆಗೆ ಪರಿಸರ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ ಅಥವಾ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ ಜೊತೆಗೆ ಪರಿಸರ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಜೊತೆಗೆ 60%ರಷ್ಟು ಅಂಕಗಳನ್ನು ಪಡೆದಿರಬೇಕು.
ಹಿರಿಯ ಅಧಿಕಾರಿ (ಇನ್‌ಸ್ಟ್ರುಮೆಂಟೇಶನ್) ಹುದ್ದೆಗೆ ಕನಿಷ್ಠ 65% ಅಂಕಗಳೊಂದಿಗೆ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ ಮಾಡಿರಬೇಕು.
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ರೇಡಿಯಾಲಜಿ) ಹುದ್ದೆಗೆ ಕಂಪ್ಯೂಟರ್ ಟೊಮೊಗ್ರಫಿ ಮತ್ತು/ಅಥವಾ MRIಯ ಕೆಲಸದ ಜ್ಞಾನವನ್ನು ಹೊಂದಿರುವ ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು/ವಿಶ್ವವಿದ್ಯಾಲಯದಿಂದ MD (ರೇಡಿಯೊ ರೋಗನಿರ್ಣಯ) ಮತ್ತು ಕಂಪ್ಯೂಟರ್‌ಗಳ ಬಳಕೆಯೊಂದಿಗೆ ಪರಿಚಿತರಾಗಿರಬೇಕು.
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ಪೀಡಿಯಾಟ್ರಿಕ್ಸ್) ಹುದ್ದೆಗೆ ಪೀಡಿಯಾಟ್ರಿಕ್ಸ್ ನಲ್ಲಿ MD/DNB ಮಾಡಿರಬೇಕು.
ಹಿರಿಯ ವೈದ್ಯಾಧಿಕಾರಿ- ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು / ವಿಶ್ವವಿದ್ಯಾಲಯದಿಂದ MBBS ಮಾಡಿರುವ ಜೊತೆಗ 2 ವರ್ಷಗಳ ಅನುಭವ ಇರಬೇಕು
ಹಿರಿಯ ಭದ್ರತಾ ಅಧಿಕಾರಿ - ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ 3 ವರ್ಷಗಳ ಅವಧಿಯ ಪದವೀಧರರು.
ಹಿರಿಯ ಅಧಿಕಾರಿ (ಸಿವಿಲ್) - ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ಮಾಡಿರಬೇಕು.
ಹಿರಿಯ ಅಧಿಕಾರಿ (ಎಲೆಕ್ಟ್ರಿಕಲ್) - ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ಮಾಡಿರಬೇಕು.
ಹಿರಿಯ ಅಧಿಕಾರಿ (ಮೆಕ್ಯಾನಿಕಲ್) - ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ಮಾಡಿರಬೇಕು.
ಹಿರಿಯ ಅಧಿಕಾರಿ ( Public Affairs) - ಸಮೂಹ ಸಂವಹನ / PR / Social Work(ಸಮಾಜಕಾರ್ಯ) / ಗ್ರಾಮೀಣ ನಿರ್ವಹಣೆ ವಿಷಯದಲ್ಲಿ
ಕನಿಷ್ಠ 60% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮಾಡಿರಬೇಕು.
ಹಿರಿಯ ಲೆಕ್ಕಪತ್ರ ಅಧಿಕಾರಿ / ಹಿರಿಯ ಆಂತರಿಕ ಲೆಕ್ಕ ಪರಿಶೋಧಕರು ಹುದ್ದೆಗೆ ICAI/ICMAI ನ ಸಹಾಯಕ ಸದಸ್ಯನಾಗಿರಬೇಕು.
ಹಿರಿಯ ಅಧಿಕಾರಿ (HR) - ಕನಿಷ್ಠ ಸಿಬ್ಬಂದಿ ನಿರ್ವಹಣೆ /HR/HRD/HRM ನಲ್ಲಿ MBA ಮಾಡಿಬೇಕು. ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
INCOME TAX RECRUITMENT 2022: ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
ವಯೋಮಿತಿ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 31 ರಿಂದ 36 ವರ್ಷದ ಒಳಗಿನ ವಯೋಮಾನದವರಾಗಿರಬೇಕು. SC,ST,OBC ಅಭ್ಯರ್ಥಿಗಳಿಗೆ ಅರಕಾರದ ನಿಯಮದನ್ವಯ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಕಂಪ್ಯೂಟರ್ ಆಧಾರಿತ (Computer Based Test-CBT) ಆನ್‌ಲೈನ್ ಪರೀಕ್ಷೆ ಗುಂಪು ಮಾತುಕತೆ(Group Discussion) ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ : ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ/ಪರಿಶಿಷ್ಟ ಪಂಗಡ/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಕೆ ವಿಧಾನ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.oil-india.com/default.aspx ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಮಾ15, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.