Asianet Suvarna News Asianet Suvarna News

BSF ನೇಮಕಾತಿ: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತದ ಗಡಿ ಭದ್ರತಾ ಪಡೆ(BSF) ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕಾನ್ಸ್‌ಟೆಬಲ್, ಹೆಡ್‌ಕಾನ್ಸ್‌ಟೆಬಲ್ ಮತ್ತು ಎಎಸ್ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

BSF is recruiting constable head constable posts and check details
Author
Bengaluru, First Published Nov 18, 2021, 3:17 PM IST

ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಲು ಬಯಸುವ ಆಕಾಂಕ್ಷಿಗಳಿಗೆ ಇಲ್ಲೊಂದು ಅದ್ಭುತ ಅವಕಾಶವಿದೆ. ಗಡಿ ಭದ್ರತಾ ಪಡೆ (Border Security Force- BSF) ಯು ಗ್ರೂಪ್ 'ಸಿ' ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ಅರ್ಜಿ ಸಲ್ಲಿಸುವ ಇಚ್ಛಿಸುವ ಅಭ್ಯರ್ಥಿಗಳು ಬಾರ್ಡರ್ ಸೆಕ್ಯೂರಿಟಿ ಫೋರ್ಸನ ಅಧಿಕೃತ ವೆಬ್‌ಸೈಟ್ rectt.bsf.gov ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 29 ರವರೆಗೆ ಕಾಲಾವಕಾಶವಿದೆ ಎಂದು ತಿಳಿಸಲಾಗಿದೆ.

ಈ ನೇಮಕಾತಿ ಅಭಿಯಾನದ ಮೂಲಕ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್ Border Security Force-BSFನ ಗ್ರೂಪ್ C ನಲ್ಲಿ ಖಾಲಿ ಇರುವ ಒಟ್ಟು 72 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಕಾನ್ಸ್‌ಟೆಬಲ್ (Constable), ಹೆಡ್ ಕಾನ್‌ಸ್ಟೆಬಲ್‌ (Head Constable), ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (Assistant Sub-Inspector) ಸೇರಿ ಒಟ್ಟು 72 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಅಧಿಸೂಚನೆಯ  ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಕಾನ್ಸ್‌ಟೆಬಲ್ (Constable) 65 ಹುದ್ದೆಗಳು, ಹೆಡ್ ಕಾನ್‌ಸ್ಟೆಬಲ್‌ಗೆ 6 (Head Constable) ಹುದ್ದೆ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಗೆ 1 ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಗೃಹ ವ್ಯವಹಾರಗಳ ಸಚಿವಾಲಯದಡಿ (ಎಂಎಚ್‌ಎ) ಈ ಬಿಎಸ್ಎಫ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

Indian Railways: ಆಗ್ನೇಯ ರೈಲ್ವೆ ವಲಯದಲ್ಲಿ SSLC, ITI ಮಾಡಿದವರಿಗೆ ಉದ್ಯೋಗ

ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಹುದ್ದೆಗೆ ಅಭ್ಯರ್ಥಿಗಳು ಡ್ರಾಫ್ಟ್ಸ್‌ಮನ್‌ಶಿಪ್ (ಸಿವಿಲ್) ನಲ್ಲಿ ಡಿಪ್ಲೊಮಾ (Diploma) ಪದವಿ ಪಡೆದಿರಬೇಕು.  ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್ ಹುದ್ದೆಗೆ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ (SSLC) ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಪ್ರಮಾಣಪತ್ರವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕದೊಳಗೆ ಉದ್ಯೋಗಾಕಾಂಕ್ಷಿಗಳು 18 ವರ್ಷಗಳಿಗಿಂತ ಕಡಿಮೆ ಇರಬಾರದು ಅಥವಾ 25 ವರ್ಷಕ್ಕಿಂತ ಹೆಚ್ಚಿರಬಾರದು. ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. 

 ಅರ್ಹತಾ ಲಿಖಿತ ಪರೀಕ್ಷೆ (Written Test), ದೈಹಿಕ ಗುಣಮಟ್ಟ ಪರೀಕ್ಷೆ (PST), ವೈದ್ಯಕೀಯ ಪರೀಕ್ಷೆ (Medical Examination) ಹಾಗೂ ದಾಖಲಾತಿ ಪರಿಶೀಲನೆ ಬಳಿಕ ಸಮರ್ಥ ಅಭ್ಯರ್ಥಿಗಳನ್ನು ಆಯ್ಮೆ ಮಾಡಿಕೊಳ್ಳಲಾಗುವುದು. ಲಿಖಿತಾ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿವಂತಿಕೆ ಮತ್ತು ತಾರ್ಕಿಕತೆ, ಸಾಮಾನ್ಯ ಅರಿವು ಮತ್ತು ತಾಂತ್ರಿಕ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. 

Central Government Jobs: ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ 

ಸಾಮಾನ್ಯ ವರ್ಗ, ಇಡಬ್ಲ್ಯೂಎಸ್ ಮತ್ತು ಒಬಿಸಿಗೆ ಸೇರಿದ ಅಭ್ಯರ್ಥಿಗಳು ಶೇಕಡಾ 45 ರಷ್ಟು ಅಂಕಗಳನ್ನು ಪಡೆದರೆ, ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದವರು ಶೇಕಡಾ 40 ರಷ್ಟು ಅಂಕಗಳನ್ನು ಪಡೆಯಬೇಕಾಗುತ್ತದೆ.

BSF ಸಹಾಯಕ ಸಬ್-ಇನ್‌ಸ್ಪೆಕ್ಟರ್-ASI (DM Gde-III) ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ₹29,200 ದಿಂದ ₹92,300 ವರೆಗೆ ಸಿಗಲಿದೆ. ಹಾಗೇ ಹೆಚ್ಸಿ ಕಾರ್ಪೆಂಟರ್ ಮತ್ತು ಪ್ಲಂಬರ್ ಗೆ 25,500 ದಿಂದ 81,100 ರೂ.ಸಿಗಲಿದೆ. ಇನ್ನು ಕಾನ್‌ಸ್ಟೆಬಲ್ , ಜನರೇಟರ್ ಆಪರೇಟರ್, ಜನರೇಟರ್ ಮೆಕ್ಯಾನಿಕ್ ಮತ್ತು ಲೈನ್‌ಮೆನ್‌ಗಳು 21700 ರೂ.ನಿಂದ 69,100 ರೂ,ವರೆಗೂ ಮಾಸಿಕ ವೇತನ ದೊರೆಯಲಿದೆ.

ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡಲು ಇದೊಂದು ಸುವರ್ಣಾವಕಾಶ. ಗಡಿಯಲ್ಲಿ ಕಾರ್ಯನಿರ್ವಹಿಸುವ ಇಚ್ಛೆ ಇದ್ದವರು ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಬಿಎಸ್‌ಎಫ್‌ನ ಅಧಿಕೃತ ಜಾಲತಾಣಕ್ಕೆ  ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. 

Job Vacancy: BPCL, OILನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ 

Follow Us:
Download App:
  • android
  • ios