ಏರ್‌ಪೋರ್ಟ್ ಅಥಾರಿಟಿಯ 224 ಹುದ್ದೆಗೆ ನೇಮಕಾತಿ, ತಿಂಗಳಿಗೆ 1.10 ಲಕ್ಷ ರೂ ಸಂಬಳ
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ. 224 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1.10 ಲಕ್ಷ ರೂಪಾಯಿ ವೇತನ ಸಿಗಲಿದೆ. ವಯಸ್ಸು,ವಿದ್ಯಾರ್ಹತೆ ಎಷ್ಟಿರಬೇಕು?

ನವದೆಹಲಿ(ಫೆ.06) ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ? ವಿಮಾನ ನಿಲ್ದಾಣ ಪ್ರಾಧಿಕಾರ (AAI) ಉತ್ತರ ವಲಯದಲ್ಲಿ 224 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಕೈತುಂಬ ಸಂಬಳದ ಕೆಲಸ. ಕೆಲಸ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹುದ್ದೆಗೆ ಅರ್ಜಿ ಸಲ್ಲಿಸಲು ತಡ ಮಾಡಬೇಡಿ. ಕಾರಣ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ಆನ್‌ಲೈನ್ ಅರ್ಜಿಗಳು ಫೆಬ್ರವರಿ 4 ರಿಂದ ಮಾರ್ಚ್ 5, 2025 ರವರೆಗೆ ತೆರೆದಿರುತ್ತವೆ. AAI ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಯಾವ ಹುದ್ದೆಗಳಿಗೆ ನೇಮಕಾತಿ?
ಕಿರಿಯ ಮತ್ತು ಹಿರಿಯ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ-
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) – 152 ಹುದ್ದೆಗಳು
ಹಿರಿಯ ಸಹಾಯಕ (ಅಧಿಕೃತ ಭಾಷೆ) – 4 ಹುದ್ದೆಗಳು
ಹಿರಿಯ ಸಹಾಯಕ (ಲೆಕ್ಕಪತ್ರ) – 21 ಹುದ್ದೆಗಳು
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) – 47 ಹುದ್ದೆಗಳು
ಸೆಂಟ್ರಲ್ ಬ್ಯಾಂಕ್‌ನಲ್ಲಿ 1000 ಕ್ರೆಡಿಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಹತೆಗಳು
ಹಿರಿಯ ಸಹಾಯಕ (ಅಧಿಕೃತ ಭಾಷೆ)– ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಪದವಿಯಲ್ಲಿ ಇಂಗ್ಲಿಷ್ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪದವಿಯಲ್ಲಿ ಹಿಂದಿ. ಇತರೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರು ಹಿಂದಿ-ಇಂಗ್ಲಿಷ್‌ನಲ್ಲಿ ಡಿಪ್ಲೊಮಾ/ಅನುಭವ ಹೊಂದಿರಬೇಕು.
ಹಿರಿಯ ಸಹಾಯಕ (ಲೆಕ್ಕಪತ್ರ)– ಬಿ.ಕಾಂ (ಆದ್ಯತೆ) ಮತ್ತು ಕಂಪ್ಯೂಟರ್ ಜ್ಞಾನ (MS Office).
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್)– ಎಲೆಕ್ಟ್ರಾನಿಕ್ಸ್/ದೂರಸಂಪರ್ಕ/ರೇಡಿಯೋ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ)– SSLC + 3 ವರ್ಷಗಳ ಡಿಪ್ಲೊಮಾ (ಮೆಕ್ಯಾನಿಕಲ್/ಆಟೋಮೊಬೈಲ್/ಅಗ್ನಿಶಾಮಕ) ಅಥವಾ PUC.
ವಯೋಮಿತಿ
ಕನಿಷ್ಠ ವಯಸ್ಸು– 18 ವರ್ಷಗಳು
ಗರಿಷ್ಠ ವಯಸ್ಸು– 30 ವರ್ಷಗಳು
ಮೀಸಲಾತಿ ವಿಭಾಗದ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ.
SC/ST– 5 ವರ್ಷಗಳು
OBC (ನಾನ್-ಕ್ರೀಮಿ ಲೇಯರ್)– 3 ವರ್ಷಗಳು
ಮಾಜಿ ಸೈನಿಕರು– 3 ವರ್ಷಗಳು (ಸೇವಾ ಅವಧಿ ಕಡಿತಗೊಳಿಸಿ)
AAI ನಲ್ಲಿ ಕೆಲಸ ಮಾಡುತ್ತಿರುವವರು– 10 ವರ್ಷಗಳು
ವಿಧವೆ/ವಿಚ್ಛೇದಿತ/ನ್ಯಾಯಾಲಯದಿಂದ ಬೇರ್ಪಟ್ಟ ಮಹಿಳೆಯರು– ಸಾಮಾನ್ಯ: 35 ವರ್ಷಗಳು, OBC: 38 ವರ್ಷಗಳು, SC/ST: 40 ವರ್ಷಗಳು
ಅರ್ಜಿ ಶುಲ್ಕ
ಸಾಮಾನ್ಯ/OBC/EWS – ₹1000/-
SC/ST ಮತ್ತು ಮಹಿಳಾ ಅಭ್ಯರ್ಥಿಗಳು – ಶುಲ್ಕವಿಲ್ಲ
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇ-ಚಲನ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ (CBT)– 2 ಗಂಟೆಗಳ ಪರೀಕ್ಷೆ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (MS Office– ಹಿಂದಿಯಲ್ಲಿ)– ಅರ್ಹತಾ ಸ್ವರೂಪದ್ದಾಗಿದೆ
ದಾಖಲೆ ಪರಿಶೀಲನೆ– CBT ಯಲ್ಲಿ ಉತ್ತೀರ್ಣರಾದವರನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ
ಪಠ್ಯಕ್ರಮ
50% ಪ್ರಶ್ನೆಗಳು: ವಿಷಯಕ್ಕೆ ಸಂಬಂಧಿಸಿದಂತೆ
50% ಪ್ರಶ್ನೆಗಳು: ಸಾಮಾನ್ಯ ಜ್ಞಾನ, ತಾರ್ಕಿಕ, ಗಣಿತ, ಇಂಗ್ಲಿಷ್
ಉತ್ತೀರ್ಣ ಅಂಕಗಳು
ಸಾಮಾನ್ಯ/EWS/OBC– 50%
SC/ST/PWD– 40%
ಸಂಬಳ
ಹಿರಿಯ ಸಹಾಯಕ (NE-6 ಹಂತ) – ₹36,000 – ₹1,10,000/-
ಕಿರಿಯ ಸಹಾಯಕ (NE-4 ಹಂತ) – ₹31,000 – ₹92,000/-
ಅರ್ಜಿ ಸಲ್ಲಿಸುವುದು ಹೇಗೆ?
AAI ಅಧಿಕೃತ ವೆಬ್‌ಸೈಟ್ https://www.aai.aero/ ಗೆ ಭೇಟಿ ನೀಡಿ.
AAI ನೇಮಕಾತಿ 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೋಂದಣಿ ಮಾಡಿ ಮತ್ತು ಅರ್ಜಿ ನಮೂನೆ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಶುಲ್ಕ ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ.
ನೌಕರಿಗೆ ಅರ್ಜಿ ಸಲ್ಲಿಸುವಾಗ ಈ 5 ತಪ್ಪುಗಳನ್ನು ಮಾಡಬೇಡಿ!