Asianet Suvarna News Asianet Suvarna News

ಸದ್ಯದಲ್ಲೇ ಟಾಟಾದಿಂದ ಹೊಸ ಝಿಪ್ಟ್ರಾನ್ ಟಿಗೋರ್ ಎಲೆಕ್ಟ್ರಿಕ್ ಕಾರ್

ಟಾಟಾ ಮೋಟಾರ್ಸ್ ತನ್ನ ಹೊಸ ಝಿಪ್ಟ್ರಾನ್ ತಂತ್ರಜ್ಞಾನ ಆಧರಿತ ಟಿಗೋರ್ ಬ್ಯಾಟರಿ ಚಾಲಿತ ವಾಹನವನ್ನು ಅನಾವರಣ ಮಾಡಲಿದೆ. ಈ ಟಿಗೋರ್ ಸಿಂಗಲ್ ಚಾರ್ಜ್‌ಗೆ 250 ಕಿ.ಮೀ.ವರೆಗೂ ಚಲಿಸಲಿದೆ. ಬೆಲೆ ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. 

Ziptron powered Tigor EV will be launched in Indian Market Tata motors confirmed
Author
Bengaluru, First Published Aug 14, 2021, 5:39 PM IST

ಎಲೆಕ್ಟ್ರಿಕ್ ವಾಹನಗಳಿಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿ ಬಲಾಗಲಿದೆ. ಅದಕ್ಕೆ ತಕ್ಕಂತೆ ಸರ್ಕಾರದ ನೀತಿಗಳು ಕೂಡ ಅನುಷ್ಠಾನವಾಗುತ್ತಿವೆ. ಜತೆಗೆ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಈ ಬ್ಯಾಟರಿಚಾಲಿತ ವಾಹನಗಳ ಬಳಕೆಯು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರುವಾಗಿದೆ. 

ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ದೇಶೀ ವಾಹನ ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ ಈಗಾಗಲೇ ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿಗಳ ಮೂಲಕ ಮಾರುಕಟ್ಟೆಯಲ್ಲಿ ಅಗ್ರಗಣ್ಯವಾಗುವತ್ತ ಹೆಜ್ಜೆ ಹಾಕುತ್ತಿದೆ. ಇದೀಗ ಮತ್ತೊಂದು ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಸಜ್ಜಾಗಿದೆ.

ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

ಆಗಸ್ಟ್ 17ರಂದು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಟಿಗೋರ್ ಇವಿ ಅನಾವರಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಟಿಗೋರ್ ಇವಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಈಗ ಬಿಡುಗಡೆಯಾಗಲಿರುವ ಟಿಗೋರ್ ಇವಿ ಝಿಪ್ಟ್ರಾನ್‌ ತಂತ್ರಜ್ಞಾನ ಹೊಂದಿದೆ. ಹೊಸ ಝಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ರಸ್ತೆಗಿಳಿಯಲಿರುವ ಟಿಗೋರ್ ಇವಿ ಈ ಮೊದಲಿನಕ್ಕಿಂತಲೂ ಹೆಚ್ಚು ಪವರ್‌ಫುಲ್ ಆಗಿರಲಿದೆ.  

ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಟಿಗೋರ್ ಇವಿ ಬಿಡುಗಡೆಯನ್ನು ಖಚಿತಪಡಿಸುವ ಟೀಸರ್ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ಈ ಟೀಸರ್‌ನಲ್ಲಿ ಫಾರ್ಮೂಲಾ ಒನ್ ಡ್ರೈವರ್ ನಾರಾಣಯ ಕಾರ್ತಿಕೇಯನ್ ಇರುವುದನ್ನು ಕಾಣಬಹುದು.

 

 

ಪವರ್‌ಫುಲ್ ಟಿಗೋರ್ ಇವಿ
ಟಾಟಾ ಮೋಟಾರ್ಸ್ ಈವರೆಗೆ ಬಿಡುಗಡೆ ಮಾಡಿರುವ ಇವಿಗಳಲ್ಲಿ ಈ ಝಿಪ್ರ್ಟಾನ್ ಟಿಗೋರ್ ಇವಿ ಹೆಚ್ಚು ಪವರ್‌ಫುಲ್ ಆಗಿರಲಿದೆ. ಈ ಹೊಸ ಟಿಗೋರ್ ಇವಿ ಅಧಿಕ ವೋಲ್ಟೇಜ್ 300+ ವೋಲ್ಟ್ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಟಿಗೋರ್ ಇವಿಯಲ್ಲಿ 72ವೋಲ್ಟ್ ಎಸಿ ಇಂಡಕ್ಷನ್ ಟೈಪ್ ಮೋಟಾರ್ ಬಳಸಲಾಗಿದೆ. ಇದಕ್ಕಿಂತಲೂ ಜಿಪ್ರ್ಟಾನ್ ಇವಿ ಹೆಚ್ಚು ಪವರ್ ಫುಲ್ ಆಗಿರಲಿದೆ. ಹೊಸ ಟಿಗೋರ್ ಸಿಂಗಲ್‌ ಚಾರ್ಜ್‌ಗೆ 250 ಕಿ.ಮೀ. ವ್ಯಾಪ್ತಿವರೆಗೂ ಚಲಿಸಲಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ಟೀಸರ್ ವಿಡಿಯೋದಲ್ಲಿ ಜಿಪ್ಟ್ರಾನ್ ತಂತ್ರಜ್ಞಾನ ಆಧರಿತವಾಗಿರುವ ಟಿಗೋರ್ ಇವಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಸೂಚ್ಯವಾಗಿ ಹೇಳಲಾಗಿದೆ. ವಿಶೇಷ ಎಂದರೆ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಝಿಪ್ಟ್ರಾನ್ ತಂತ್ರಜ್ಞಾನ ಮೊದಲಿಗೆ ಬಳಕೆಯಾಗಿದ್ದು ನೆಕ್ಸಾನ್ ಎಲೆಕ್ಟ್ರಿಕ್ ವಾಹನದಲ್ಲಿ. ಝಿಪ್ಟ್ರಾನ್ ತಂತ್ರಜ್ಞಾನ ನೆಕ್ಸಾನ್ ಇವಿ  ಭಾರತೀಯ ಮಾರುಕಟ್ಟೆಯಲ್ಲಿ ಈವರೆಗೆ ಅತಿ ಸಕ್ಸೆಸ್ ಆದ ಎಲೆಕ್ಟ್ರಿಕ್ ವಾಹನವಾಗಿದೆ. ಬೆಲೆಯ ಬಗ್ಗ ಹೇಳುವುದಾದರೆ ಟಾಟಾ ನೆಕ್ಸಾನ್ ಇವಿಗಿಂತಲೂ ಇದು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಾಗುತ್ತಿದೆ. ಟಿಗೋರ್ ಇವಿ ಲಾಂಚ್ ಹೊತ್ತಿನದಲ್ಲಿ ಅದರ ನಿಖರ ಬೆಲೆ ಎಷ್ಟು ಎಂಬುದು ತಿಳಿದು ಬರಲಿದೆ.

#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!

ಟಾಟಾ ಮೋಟಾರ್ಸ್ ಕಂಪನಿಯು 2019ರಲ್ಲಿ ಮೊದಲ ಬಾರಿಗೆ ಟಿಗೋರ್ ಇವಿಯನ್ನು ಪರಿಚಯಿಸಿತು. ಈ ಇವಿಯನ್ನು ಸರ್ಕಾರಿ ಅಧಿಕಾರಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದರಲ್ಲಿರುವ ಸೀಮಿತ ವ್ಯಾಪ್ತಿ ಮತ್ತು ಪ್ರದರ್ಶನದಿಂದಾಗಿ ಇವಿ ಬಳಕೆದಾರರಲ್ಲಿ ವಿಶ್ವಾಸ ಮೂಡಲು ಸಾಧ್ಯವಾಗಲಿಲ್ಲ. ಹಾಗಾಗಿ ನೆಕ್ಸಾನ್‌ನಷ್ಟು ಟಿಗೋರ್ ಇವಿ ಜನಪ್ರಿಯವಾಗಲಿಲ್ಲ. ಇದೀಗ ಝಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ಬರಲಿರುವ ಈ ಟಿಗೋರ್ ಜನರನ್ನು ಸೆಳೆಯುವ ವಿಶ್ವಾಸವನ್ನು ಕಂಪನಿ ಹೊಂದಿದೆ.

ಭಾರತದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ತೆರಿಗೆ ವಿನಾಯ್ತಿ ಸೇರಿದಂತೆ ಅನೇಕ ಉತ್ತೇಜನಾಕಾರಿ ಕ್ರಮಗಳನ್ನ ಜಾರಿಗೆ ತರಲಾಗುತ್ತಿದೆ.

ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ

Follow Us:
Download App:
  • android
  • ios