Asianet Suvarna News Asianet Suvarna News

4 ಕೋಟಿ ರೂ ಲ್ಯಾಂಬೋರ್ಗಿನಿ ಕಾರಿನ ಮೇಲೆ ಜೈ ಶ್ರೀರಾಮ್ ಪ್ರಿಂಟ್ , ಇದು ವಿಶ್ವದಲ್ಲೇ ಮೊದಲು!

ಕಾರಿನ ಮೇಲೆ ತಮಿಗಿಷ್ಟವಾದ ಚಿತ್ರಗಳನ್ನು, ಹೆಸರುಗಳನ್ನು ವಾಕ್ಯಗಳನ್ನು ಮುದ್ರಿಸುವುದು ಹೊಸದಲ್ಲ. ಜೈಶ್ರೀರಾಮ್, ಜೈ ಹನುಮಾನ್, ಭಜರಂಗಿ ಫೋಟೋಗಳು ವಾಹನಗಳಲ್ಲಿ ರಾರಾಜಿಸುತ್ತಿದೆ. ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ 4 ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಮೇಲೆ ಜೈಶ್ರೀರಾಮ್ ಎಂದು ಮುದ್ರಿಸಲಾಗಿದೆ. ಈ ಕುರಿತು ಕುತೂಹಲ ಮಾಹಿತಿ ಇಲ್ಲಿದೆ.
 

Youtuber mridul Printed Jai shri Ram on his lamborghini huracan car first in the world ckm
Author
First Published Aug 15, 2023, 1:52 PM IST

ಮುಂಬೈ(ಆ.15) ಭಾರತದಲ್ಲಿ ಕಾರು, ಬೈಕ್ ಸೇರಿದಂತೆ ವಾಹನಗಳಲ್ಲಿ ಸ್ಟಿಕ್ಕರ್, ಹೆಸರು, ಭಜರಂಗಿ ಸೇರಿದಂತೆ ಹಲವು ಚಿತ್ರಗಳು ಸಾಮಾನ್ಯ. ಆದರೆ ದುಬಾರಿ ಕಾರುು, ಸೂಪರ್ ಕಾರುಗಳಲ್ಲಿ ಈ ರೀತಿಯ ಬರಹ, ಚಿತ್ರಗಳನ್ನು ಕಾಣುವುದು ವಿರಳ. ಇದೀಗ ಬರೋಬ್ಬರಿ 4 ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಹುರಕನ್ ಕಾರಿನ ಮೇಲೆ ಜೈ ಶ್ರೀರಾಮ್ ಎಂದು ಮುದ್ರಿಸಲಾಗಿದೆ. ದುಬಾರಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನ ಮೇಲೆ ಜೈಶ್ರೀರಾಮ್ ಎಂದು ಇದೇ ಮೊದಲ ಬಾರಿಗೆ ಮುದ್ರಿಸಲಾಗಿದೆ. ಭಾರತದಲ್ಲಿ ಹಲವು ಲ್ಯಾಂಬೋರ್ಗಿನಿ ಕಾರುಗಳಿವೆ. ಹೆಚ್ಚಿನ ಕಾರುಗಳ ಮೇಲೆ ಒಂದಕ್ಷರವೂ ಮುದ್ರಿಸಿಲ್ಲ. ಆದರೆ ಇದೀಗ ಅತೀ ದೊಡ್ಡ ಅಕ್ಷಗಳಲ್ಲಿ ಕಾರಿನ ಬಾನೆಟ್ ಮೇಲೆ ಜೈ ಶ್ರೀರಾಮ್ ಮುದ್ರಿಸಿದ ಹೆಗ್ಗಳಿಗೆಗೆ ಯೂಟ್ಯೂಬರ್ ಮೃದುಲ್ ಪಾತ್ರರಾಗಿದ್ದಾರೆ.

ಯೂಟ್ಯೂಬರ್ ಮೃದುಲ್ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇತ್ತೀಚೆಗ ಮೃದೂಲ್ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಹುರಕನ್ ಕಾರು ಖರೀದಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಬೆಲೆಯ ಈ ಕಾರು ಭಾರತದಲ್ಲಿ ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳು ಸೇರಿದಂತೆ ಕಲವರ ಬಳಿ ಇದೆ. ಇದೀಗ ಮೃದೂಲ್ ಈ ಸಾಲಿಗೆ ಸೇರಿಕೊಂಡಿದ್ದಾರೆ. 

 

ಹಳೇ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿಯಾಗಿ ಪರಿವರ್ತಿಸಿದ ಯುವಕ, ಸಿಎಂ ಹಿಮಂತ ಶರ್ಮಾಗೆ ಗಿಫ್ಟ್!

ಕಾರು ಖರೀದಿಸಿದ ಯ್ಯೂಟೂಬರ್ ನಂಬರ್ ಪ್ಲೇಟ್‌ಗೂ ಹಾಕಿಸುವ ಮೊದಲೇ ಸ್ಟಿಕ್ಕರಿಂಗ್ ಶಾಪ್‌ಗೆ ತೆರಳಿ ಅತೀ ದೊಡ್ಡ ಅಕ್ಷರಗಳಲ್ಲಿ ಜೈ ಶ್ರೀರಾಮ್ ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಹುರಕನ್ ಕಾರಿನ ಬಾನೆಟ್ ಮೇಲೆ ಬಿಳಿ ಬಣ್ಣದ ಅಕ್ಷರಗಳಲ್ಲಿ ಜೈಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.  ಇದೀಗ ಈ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಲ್ಯಾಂಬೋರ್ಗಿನಿ ಕಾರಿನ ಮೇಲೆ ದೊಡ್ಡ ಅಕ್ಷಗಳಲ್ಲಿ ಜೈ ಶ್ರೀರಾಮ್ ಬರೆದಿದ್ದು ಇದೇ ಮೊದಲು. 

ಫೆರಾರಿ ಇಟಾಲಿಯನ್ ಸೂಪರ್ ಕಾರು ತಯಾರಕರು ಕಾರಿನ ಯಾವುದೇ ಮಾಡಿಫಿಕೇಶನ್ ಒಪ್ಪುವುದಿಲ್ಲ. ಕಾರು ಮಾರಾಟವಾದ ಬಳಿಕ ಮಾಲೀಕರು ಯಾವುದೇ ರೀತಿಯ ಮಾಡಿಫಿಕೇಶನ್ ಮಾಡಿದರೆ ಕಾರಿನ ವಾರೆಂಟಿ ನಷ್ಟವಾಗಲಿದೆ. ಆದರೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಮಾಡಿಫಿಕೇಶನ್‌ಗೆ ಅವಕಾಶವಿದೆ. ಭಾರತದ ಮೋಟಾರು ವಾಹನ ಕಾಯ್ದೆಯಡಿ ಕೂಡ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘನೆಯಾಗಿದೆ. ಆದರೆ ಸ್ಟಿಕ್ಕರ್ ಅಂಟಿಸುವುದು ಮಾಡಿಫಿಕೇಶನ್ ಅಡಿಯಲ್ಲಿ ಬರುವುದಿಲ್ಲ. ಸಿಕ್ಕರಿಂಗ್ ವೇಳೆ ವಾಹನದ ನಂಬರ್ ಪ್ಲೇಟ್, ಕಾರಿನ ಮುಂಭಾಗದ ಹಾಗೂ ಹಿಂಭಾಗದ ಗಾಜಿನ ಮೇಲೆ ಅಂಟಿಸುವಂತಿಲ್ಲ. ಯಾವುದೇ ಸ್ಟಿಕ್ಕರ್ ವಾಹನ ಚಾಲನೆ ವೇಳೆ ಅಡ್ಡಿಯಾಗಬಾರದು ಹಾಗೂ ಚಾಲಕನ ನೋಟಕ್ಕೆ ಅಡತೆಡೆಯಾಗಬಾರದು. ಇಲ್ಲಿ ಯೂಟ್ಯೂಬರ್ ಮೃದೂಲ್ ಕಾರಿನ ಬಾನೆಟ್ ಮೇಲೆ ಜೈಶ್ರೀರಾಮ್ ಸ್ಟಿಕ್ಕರ್ ಅಂಟಿಸಿದ್ದಾರೆ. 

ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!

ಲ್ಯಾಂಬೋರ್ಗಿನಿ ಹುರಕನ್ ಕಾರು ಪೆಟ್ರೋಲ್ ಎಂಜಿನ್ ಹೊಂದಿದೆ. 10 ಸಿಲಿಂಡರ್, 5204 ಸಿಸಿ ಎಂಜಿನ್ ಹೊಂದಿದ್ದು, 630.28bhp ಪವರ್ ಹಾಗೂ 565Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಟೋಮ್ಯಾಟಿಕ್ ಕಾರು ಇದಾಗಿದೆ. ಇದರಲ್ಲೂ ಮೂರು ಡ್ರೈವಿಂಗ್ ಮೂಡ್‌ಗಳಿವೆ. ಇದು 2 ಸೀಟರ್ ಕಾರು. ಒಂದು ಲೀಟರ್ ಪೆಟ್ರೋಲ್‌ಗೆ 7.25 ಕಿ.ಮೀ ಮೈಲೇಜ್ ನೀಡಲಿದೆ. 

Follow Us:
Download App:
  • android
  • ios