ಮೆಸಾಚೂಸೆಟ್ಸ್(ಫೆ.13): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ, ಅತ್ಯಂತ ಜನಪ್ರಿಯ ಕಾರಾಗಿದೆ. ಈ ವರ್ಷ ಟೆಸ್ಲಾ ಭಾರತಕ್ಕೆ ಕಾಲಿಡುತ್ತಿದೆ. ಮುಕೇಶ್ ಅಂಬಾನಿ ಸೇರಿದಂತೆ ಭಾರತದ ಕೆಲವೇ ಕೆಲವರ ಬಳಿ ಟೆಸ್ಲಾ ಕಾರಿದೆ. ಟೆಸ್ಲಾ ಕಾರಿನ ಬೆಲೆ 50 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಆದರೆ ಯೂಟ್ಯೂಬರ್ ಕೇವಲ 4 ಲಕ್ಷ ರೂಪಾಯಿಗೆ ಟೆಸ್ಲಾ ಕಾರು ಖರೀದಿಸಿದ್ದಾನೆ.

0 to 60 ಕಿ.ಮೀ ವೇಗ ಕೇವಲ 2 ಸೆಕೆಂಡ್‌ನಲ್ಲಿ; ಇದು ಟೆಸ್ಲಾ ಕಾರಿನ ಚಮತ್ಕಾರ!.

ಇದು ಸುಳ್ಳಲ್ಲ, ಕೇವಲ 4 ಲಕ್ಷ ರೂಪಾಯಿಗೆ ಟೆಸ್ಲಾ ಕಾರು ಖರೀದಿಸಲಾಗಿದೆ. ಈ ರೀತಿ ಟೆಸ್ಲಾ ಕಾರು ಖರೀದಿಸಿದ್ದು ಇಂಗ್ಲೆಂಡ್‌ನ  ಮೆಸಾಚೂಸೆಟ್ಸ್ ನಿವಾಸಿ ರಿಚ್.  ಈತನ ಕೈಗೆ 4 ಲಕ್ಷ ರೂಪಾಯಿಗೆ ಅತ್ಯುತ್ತಮ ಟೆಸ್ಲಾ ಕಾರು ಲಭ್ಯವಾಗಿದೆ. ಇದರ ಹಿಂದೆ ರೋಚಕ ಕತೆ ಇದೆ. ಹಾಳಾದ, ಗುಜುರಿಗೆ ಹಾಕಿದ್ದ ಟೆಸ್ಲಾ ಕಾರಿನಿಂದಲೇ ಅತ್ಯುತ್ತಮ ಟೆಸ್ಲಾ ಕಾರು ಮನೆ ಮುಂದೆ ನಿಂತಿದೆ.

ಬೆಂಗಳೂರಿನ ಪ್ರವೈಗ್ ನೋಡಿ ಬೆಚ್ಚಿದ ಟೆಸ್ಲಾ, ಭಾರತದಲ್ಲಿ ಮಾಡೆಲ್ 3 ಬಿಡುಗಡೆ ದಿನಾಂಕ ಫಿಕ್ಸ್!

ರಿಚ್ ತನ್ನ ಬಳಿ ಇದ್ದ ಟೆಸ್ಲಾ ಕಾರಿನ ಕಾರಿನ ವೀಲ್ ಕವರ್‌ಗಾಗಿ ಎಲ್ಲಾ ಕಡೆ ಅಲೆದಾಡಿದ್ದಾರೆ. ಟೆಸ್ಲಾ ಯಾವುದೇ ಬಿಡಿ ಭಾಗಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಟೆಸ್ಲಾ ಶೋರೂಂ ಬಳಿ ಮಾತ್ರ ಲಭ್ಯ ಎಂದು ಟೆಸ್ಲಾ ಹೇಳಿದೆ. ಹೀಗಾಗಿ ರಿಚ್ ಹೊಸ ಐಡಿಯಾ ಮಾಡಿದ್ದಾನೆ. ಹಾಳಾದ, ಗುಜುರಿಗೆ ಹಾಕಿರುವ ಟೆಸ್ಲಾ ಕಾರು ಖರೀದಿಸಲು ಮುಂದಾಗಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿ ಹೋದ ಟೆಸ್ಲಾ ಕಾರು, ಅಪಘಾತಕ್ಕೀಡಾದ ಕಾರುಗಳನ್ನು ಖರೀದಿಸಿದ್ದಾನೆ. ಬಳಿಕ ಕಾರನ್ನು ಕ್ಲೀನ್ ಮಾಡಿ ಕಾರಿನ ಬಿಡಿ ಭಾಗಗಳನ್ನು ಮಾರಾಟ ಮಾಡಿದ್ದಾನೆ. ಬ್ಯಾಟರಿ ಸೇರಿದಂತೆ ಹಲವು ಬಿಡಿ ಭಾಗ ಮಾರಟದಿಂದ ಈತ ಸೆಕೆಂಡ್ ಹ್ಯಾಂಡ್ ಕಾರಿಗೆ ನೀಡಿದ ಹಣಕ್ಕಿಂತ ಹಣ ಸಂಪಾದಿಸಿದ್ದಾನೆ.

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!

ವಿಶೇಷ ಅಂದರೆ ರಿಚ್ ಯಾವುದೇ ಎಂಜಿನಿಯರಿಂಗ್ ಡಿಗ್ರಿ ಪಡೆದಿಲ್ಲ. ಆದರೆ ಒಂದೆರೆಡು ಟೆಸ್ಲಾ ಕಾರಿನ ಬಿಡಿ ಭಾಗಗಳನ್ನು ಜೋಡಿಸಿ ಹೊಸ ಟೆಸ್ಲಾ ಕಾರು ನಿರ್ಮಿಸಿದ್ದಾನೆ. ಈತನ ಸೆಕೆಂಡ್ ಹ್ಯಾಂಡ್ ಕಾರು ಖರೀದಿ, ಬಿಡಿ ಭಾಗ ಮಾರಾಟ, ಬಿಡಿ ಭಾಗದಿಂದ ತನಗೆ ಅತ್ಯುತ್ತಮ ಟೆಸ್ಲಾ ಕಾರು  ನಿರ್ಮಾಣಕ್ಕೆ ಎಲ್ಲವನ್ನೂ ಕೂಡಿ ಕಳೆದರೆ ರಿಚ್‌ಗೆ 4 ಲಕ್ಷ ರೂಪಾಯಿಲ್ಲಿ ಟೆಸ್ಲಾ ಕಾರು ಬಂದಿದೆ.

ಕಪ್ಪು ಬಣ್ಣವಿದ್ದ ಕಾರಿನ ಬಣ್ಣವನ್ನೂ ಬದಲಾಯಿಸಿದ್ದಾನೆ. ಇನ್ನು ಹೊಸ ಟೆಸ್ಲಾ ಕಾರಿನ ಎಲ್ಲಾ ಫೀಚರ್ಸ್ ವರ್ಕಿಂಗ್ ಕಂಡೀಷನ್ ಮಾಡಿದ್ದಾನೆ. ವಾಯ್ಸ್ ರೆಕಗ್ನೀಶನ್ ಕೂಡ ಕಾರ್ಯನಿರ್ವಹಿಸುವಂತೆ ಮಾಡಿದ್ದಾನೆ.