Asianet Suvarna News Asianet Suvarna News

2024ಕ್ಕೆ ಭಾರತದ ರಸ್ತೆಗಿಳಿಯಲಿದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಾರು ಕಂಪನಿ!

2024 ರ ವೇಳೆಗೆ ಭಾರತದ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಪ್ರವೇಶ ಮಾಡ್ಬೋದು ಎಂದು ಹೇಳಲಾಗ್ತಿದ್ದು, ಈ ಬಗ್ಗೆ ವರದಿಯಾಗಿದೆ. 

world s richest man elon musk may bring 687 billion dollar tesla brand to India next year new report suggests ash
Author
First Published Nov 7, 2023, 4:06 PM IST

ನವದೆಹಲಿ (ನವೆಂಬರ್ 7, 2023): ಎಲಾನ್‌ ಮಸ್ಕ್‌ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಬೃಹತ್ ಸಂಪತ್ತಿಗೆ ಪ್ರಮುಖ ಕಾರಣವೆಂದರೆ ಟೆಸ್ಲಾ. ಇದು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕಾರಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ ಮತ್ತು ಇದು ಹೆಚ್ಚಿನ ದೊಡ್ಡ ಕಾರು ಮಾರುಕಟ್ಟೆ ದೇಶಗಳಲ್ಲಿ ಲಭ್ಯವಿದೆ.

ಆದರೆ, ಈ ಕಂಪನಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವನ್ನು ಈಗಲೂ ಸಹ ಭಾರತವನ್ನು ಪ್ರವೇಶಿಸಿಲ್ಲ. ಈ ಹಿನ್ನೆಲೆ ಟೆಸ್ಲಾ ಭಾರತಕ್ಕೆ ದೊಡ್ಡ ಮಾರುಕಟ್ಟೆಯಾಗಬಹುದು. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಎಲಾನ್‌ ಮಸ್ಕ್ ಟೆಸ್ಲಾ ಕಾರುಗಳನ್ನು ಭಾರತಕ್ಕೆ ಸಾಧ್ಯವಾದಷ್ಟು ಬೇಗ ತರುವುದಾಗಿ ಭರವಸೆ ನೀಡಿದ್ದರು.

ಇದೇ ರೀತಿ 2024 ರ ವೇಳೆಗೆ ಭಾರತದ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಪ್ರವೇಶ ಮಾಡ್ಬೋದು ಎಂದು ಹೇಳಲಾಗ್ತಿದೆ. ಈ ಬಗ್ಗೆ ಐಎಎನ್‌ಎಸ್‌ ವರದಿ ಮಾಡಿದೆ. ಜನವರಿ 2024 ರೊಳಗೆ ಟೆಸ್ಲಾ ದೇಶಕ್ಕೆ ಪ್ರವೇಶಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಂದ ಎಲ್ಲಾ ಅಗತ್ಯ ಅನುಮೋದನೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಕ್ರಿಯೆಯನ್ನು ಹೆಚ್ಚಿಸುತ್ತಿದೆ ಎಂದೂ ಈ ವರದಿ ಹೇಳುತ್ತದೆ.

ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸರ್ಕಾರದಿಂದ ಸವಾಲುಗಳನ್ನು ಎದುರಿಸಿದ್ದೇನೆ ಎಂದು ಎಲಾನ್‌ ಮಸ್ಕ್ ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ಸರ್ಕಾರದೊಂದಿಗಿನ ಸವಾಲುಗಳಿಂದ ಟೆಸ್ಲಾ ಇನ್ನೂ ಭಾರತದಲ್ಲಿಲ್ಲ ಎಂದು ಎಲಾನ್‌ ಮಸ್ಕ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ, ಭಾರತದಲ್ಲಿ ಕಾರುಗಳನ್ನು ಪ್ರಾರಂಭಿಸಲು ಬಯಸುಸುವುದಾಗಿಯೂ ಎಲಾನ್ ಮಸ್ಕ್‌ ಹೇಳಿದ್ದಾರೆ. ಆದರೆ ಎಲೆಕ್ಟ್ರಿಕ್‌ ವಾಹನ (EV) ಗಳ ಮೇಲಿನ ದೇಶದ ಆಮದು ಸುಂಕಗಳು ಇಲ್ಲಿಯವರೆಗೆ ವಿಶ್ವದಲ್ಲೇ ಅತಿ ಹೆಚ್ಚು ಎಂದೂ ತಿಳಿಸಿದ್ದರು.

ಈಗ, ಟೆಸ್ಲಾದ ಹೂಡಿಕೆ ಪ್ರಸ್ತಾವನೆ ಸೇರಿದಂತೆ ದೇಶದಲ್ಲಿ ಮುಂಬರುವ ಹಂತದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕೆಯನ್ನು ಪರಿಶೀಲಿಸಲು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಉನ್ನತ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದೆ ಎಂದು ಐಎಎನ್‌ಎಸ್‌ ವರದಿಯು ಬಹಿರಂಗಪಡಿಸಿದೆ.

ವಿಮೆ ಮತ್ತು ಶಿಪ್ಪಿಂಗ್ ವೆಚ್ಚಗಳನ್ನು ಒಳಗೊಂಡಂತೆ 30 ಲಕ್ಷ ರೂ. ($40,000) ಗಿಂತ ಹೆಚ್ಚಿನ ಬೆಲೆಯ ಆಮದು ಮಾಡಿದ ಕಾರುಗಳ ಮೇಲೆ ಭಾರತವು 100% ತೆರಿಗೆ ವಿಧಿಸುತ್ತದೆ. ಇನ್ನು, 30 ಲಕ್ಷ ರೂ. ಗಿಂತ ಕಡಿಮೆ ಬೆಲೆಯ ಕಾರುಗಳು 60% ಆಮದು ತೆರಿಗೆಗೆ ಒಳಪಟ್ಟಿರುತ್ತವೆ. ಇದನ್ನು ಎದುರಿಸಲು, ಮತ್ತು ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ನೀಡಲು ಟೆಸ್ಲಾ ಪ್ಲ್ಯಾನ್‌ ಮಾಡ್ತಿದೆ. 

Follow Us:
Download App:
  • android
  • ios