Asianet Suvarna News Asianet Suvarna News

ಕ್ರೆಟಾಗೆ ಪೈಪೋಟಿ ನೀಡಲು ಬಂತು ‘ವೋಕ್ಸ್‌‌ವ್ಯಾಗನ್ ಟೈಗುನ್’

ಬಹಳ ದಿನಗಳಿಂದಲೂ ವೋಕ್ಸ್‌ವ್ಯಾಗನ್ ಟೈಗುನ್ ಬಿಡುಗಡೆ ಬಗ್ಗೆ ಸುದ್ದಿ ಇತ್ತು. ಹಾಗಾಗಿ, ಸಹಜವಾಗಿಯೇ ಗ್ರಾಹಕರಲ್ಲಿ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದ್ದು, ಕಂಪನಿಯು ಅಧಿಕೃತವಾಗಿ ಟೈಗುನ್  ಮಿಡ್ ಸೈಜ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬಹಳಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಎಸ್‌ಯುವಿ ಗ್ರಾಹಕರನ್ನು ಸೆಳೆಯುತ್ತಿದೆ. 

Volkswagen Taigun Released to Indian market and know more about this car
Author
Bengaluru, First Published Sep 24, 2021, 10:37 AM IST

ಹಬ್ಬದ ಸೀಸನ್ (Festive Season) ಹಿನ್ನೆಲೆಯಲ್ಲಿ ಬಹಳಷ್ಟು ಕಂಪನಿಗಳು ತಮ್ಮ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದೇ ರೀತಿ, ವೋಕ್ಸ್‌ವ್ಯಾಗನ್ ಕೂಡ ಇದೀಗ ಎಸ್‌ಯುವಿ ಟೈಗುನ್ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಮಾಡಿದೆ. ವೋಕ್ಸ್‌ವ್ಯಾಗನ್ ಟೈಗುನ್ (Volkswagen Taigun) ಬಗ್ಗೆ ತುಂಬ ದಿನಗಳಿಂದ ಸುದ್ದಿ ಇತ್ತು, ಹಾಗಾಗಿ, ಬಳಕೆದಾರರಲ್ಲಿ ಈ ಎಸ್‌ಯುವಿ (SUV) ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. 

ಭಾರತದ ಮಾರುಕಟ್ಟೆ (Indian Market(ಗೆ ಬಿಡುಗಡೆಯಾಗಿರುವ ವೋಕ್ಸ್‌ವ್ಯಾಗನ್ ಟೈಗುನ್, ಹುಂಡೈನ ಕ್ರೆಟಾ (Hyundai Creta), ಕಿಯಾ ಸೆಲ್ತೋಸ್ (Hyundai Creta), ಟಾಟಾ ಹ್ಯಾರಿಯರ್  (TATA Harrier), ಎಂಜಿ ಹೆಕ್ಟರ್ (MG Hector), ಸ್ಕೋಡಾ ಕುಶಕ್ (Skoda Kodiaq), ಎಂಜಿ ಆಸ್ಟರ್‌ ಎಸ್‌ಯುವಿ (MG Astor SUV)ಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಎಸ್‌ಯುವಿ ಕೆಟಗರಿಯಲ್ಲಿ ಸಾಕಷ್ಟು ವಾಹನಗಳು ಗ್ರಾಹಕರನ್ನು ಸೆಳೆಯುತ್ತಿವೆ. ವೋಕ್ಸ್ ವ್ಯಾಗನ್ ಟೈಗುನ್ ಯಾವ ರೀತಿಯಯಾಗಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ನೋಡಬೇಕಿದೆ. 

ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!

ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿರುವ ವೋಕ್ಸ್ ವ್ಯಾಗನ್ ಟೈಗುನ್ ಬೆಲೆ 10.49 ಲಕ್ಷ ರೂಪಾಯಿಂದ ಆರಂಭವಾಗಿ ಗರಿಷ್ಠ 17.49 ಲಕ್ಷ ರೂ.ವರೆಗೂ ತಲುಪಲಿದೆ. ನಾವಿಲ್ಲಿ ನೀಡಿರುವುದು ದಿಲ್ಲಿ ಶೋರೂಮ್ ಬೆಲೆ, ಹಾಗಾಗಿ ಬೇರೆ ಬೇರೆ ನಗರಗಳಲ್ಲಿ ಈ ಬೆಲೆಯಲ್ಲಿ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. 

ಭಾರತೀಯ ಮಾರುಕಟ್ಟೆಯಲ್ಲಿ ತುಂಬ ಸ್ಪರ್ಧಾತ್ಮಕವಾಗಿರುವ ಈ ಮಿಡ್ ಸೈಜ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಜರ್ಮನ್ ಮೂಲದ ಈ ವೋಕ್ಸ್ ವ್ಯಾಗನ್ ತನ್ನ ಟೈಗುನ್ ಮೂಲಕ ಪ್ರವೇಶ ಮಾಡಿದೆ. ಈ ಸೆಗ್ಮೆಂಟ್‌ನಲ್ಲಿ ಈ ಕಂಪನಿ ಯಾವು ರೀತಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ ನೋಡಬೇಕು. 

ಮೇಡ್ ಇನ್ ಇಂಡಿಯಾ ಮತ್ತು ಮೇಡ್ ಫಾರ್ ಇಂಡಿಯಾ ನೀತಿಯ ಭಾಗವಾಗಿ ಟೈಗನ್ ಮಿಡ್ ಸೈಜ್ ಎಸ್‌ಯುವಿಯನ್ನು ಕಂಪನಿ ರೂಪಿಸಿದೆ. ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ವಾಹನವನ್ನು ರೂಪಿಸಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಹುಂಡೈನ ಆಯ್ದ ಕಾರು ಖರೀದಿ ಮೇಲೆ ಗರಿಷ್ಟ 50000 ರೂ.ವರೆಗೆ ಲಾಭ

ವೋಕ್ಸ್ ವ್ಯಾಗನ್ ಟೈಗುನ್ ಮಿಡ್ ಸೈಜ್ ಎಸ್‌ಯುವಿಯನ್ನು ಕಂಪನಿಯು ಎಂಕ್ಯೂಬಿ ಎ0 ಐಎನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ವೋಕ್ಸ್ ವ್ಯಾಗನ್ ಪ್ರಿಯರನ್ನು ಮಾತ್ರ ಸೆಳೆಯುವುದಲ್ಲದೇ, ಇತರ ಹೊಸ ಗ್ರಾಹಕರನ್ನು ಕೂಡ ಸೆಳೆಯುವುದು ಈ ಟೈಗುನ್ ಮೂಲಕ ತಂತ್ರಕ್ಕೆ ವೋಕ್ಸ್ ವ್ಯಾಗನ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರನ್ನು ಕಂಪನಿಯು ಮೊದಲಿಗೆ 2019ರ ಆಟೋ ಎಕ್ಸ್‌ ಪೋದಲ್ಲಿ ಪ್ರದರ್ಶಿಸಿತ್ತು. 
 

Volkswagen Taigun Released to Indian market and know more about this car

ವೋಕ್ಸ್ ವ್ಯಾಗನ್ ಟೈಗುನ್ ಮಿಡ್ ಸೈಜ್ ಎಸ್‌ಯುವಿ, ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0 ಲೀಟರ್ ಮತ್ತು 1.5 ಎಂಜಿನ್ ಮೋಟಾರ್‌ಗಳ ಆಯ್ಕೆಯನ್ನು ಕಂಪನಿಯು ಒದಗಿಸಿದೆ. ಸಿಕ್ಸ್ ಸ್ಪೀಡ್ ಮ್ಯಾನುವಲ್ ಗಿಯರ್ ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್‌ಗಳಲ್ಲಿ ಈ ಮಿಡ್ ಸೈಜ್ ಎಸ್‌ಯುವಿ ಮಾರಾಟಕ್ಕೆ ಸಿಗಲಿದೆ. 

ವೋಕ್ಸ್ ವ್ಯಾಗನ್ ಟೈಗುನ್ ಗ್ರಾಕರಿಗೆ ಹಳದಿ, ಬಿಳಿ, ನೀಲಿ, ರೆಡ್, ಬೂದು ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.  ಟೈಗನ್ ಅದರ ಹೊರಭಾಗದ ಮೇಲೆ ಸ್ಮಾರ್ಟ್ ಕ್ರೋಮ್ ಸೇರ್ಪಡೆಗಳೊಂದಿಗೆ ಇನ್ನಷ್ಟು ಅಂದವಾಗಿದೆ. ಮುಂಭಾಗದಲ್ಲಿ ಗ್ರಿಲ್‌ನಲ್ಲಿರುವ ಸಮತಲವಾದ ರೇಖೆಗಳು ಪರಿಚಿತ ದೃಶ್ಯವಾಗಿದ್ದರೂ, ಎಲ್‌ಇಡಿ ಹೆಡ್ ಲೈಟ್ ಮತ್ತು ಡಿಆರ್‌ಎಲ್ ಘಟಕಗಳಿಂದಾಗಿ ಕಾರಿಗೆ ಇನ್ನಷ್ಟು ಮೆರುಗು ಬಂದಿದೆ. 17 ಮತ್ತು 16-ಇಂಚಿನ ಅಲಾಯ್ ವೀಲ್‌ಗಳಿದ್ದು, ವೇರಿಯೆಂಟ್‌ಗೆ ಅನುಗುಣವಾಗಿ ಮತ್ತು ಎಲ್‌ಇಡಿ ಟೈಲ್ ಲೈಟ್ ವಿನ್ಯಾಸವೂ ಬದಲಾಗುತ್ತದೆ. ಸೆಗ್ಮೆಂಟ್‌ನಲ್ಲೇ ಟೈಗುನ್ ಅತಿ ಹೆಚ್ಚು ವೀಲ್ ಬೇಸ್ ಅನ್ನು ಹೊಂದಿದೆ.

3 ಲಕ್ಷ ಮಾರಾಟ ಕಂಡ ಮಾರುತಿಯ ಸೆಡಾನ್ ಸಿಯಾಜ್!

ಟೈಗುನ್ ಒಳಾಂಗಣ (interior)ವೂ ಆಕರ್ಷಿತವಾಗಿದೆ. 10.1 ಇಂಚ್ ವಿಡಬ್ಲ್ಯೂ ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. ಈ ಸೆಗ್ಮೆಂಟ್‌ನಲ್ಲೇ ದೊಡ್ಡದಾಗಿರುವ 8 ಇಂಚಿನ ಡಿಜಿಟಲ್ ಕಾಕ್‌ಪಿಟ್ (Digital Cockpit)  ಕೊಡಲಾಗಿದೆ. ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಮೂಲಕ ವೈರ್‌ಲೆಸ್ ಆ್ಯಪ್ ಕನೆಕ್ಟ್‌ವಿದೆ. ಸನ್‌ರೂಫ್, ವೈರ್‌ಲೆಸ್ ಮೊಬೈಲ್ ಚಾರ್ಜರ್ (Wireless Mobile Charge), ವಾಯ್ಸ್ ಕಮಾಂಡ್ ರೆಕಗ್ನೇಷನ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಕಾಣಬಹುದಾಗಿದೆ.

Follow Us:
Download App:
  • android
  • ios