3 ಲಕ್ಷ ಮಾರಾಟ ಕಂಡ ಮಾರುತಿಯ ಸೆಡಾನ್ ಸಿಯಾಜ್!

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಸೆಡಾನ್ ಸಿಯಾಜ್ ದಾಖಲೆಯನ್ನು ಬರೆದಿದೆ. 2014ರಲ್ಲಿ ಲಾಂಚ್ ಆದ ಈ ಕಾರ್ ಇದೀಗ 3 ಲಕ್ಷ ಮಾರಾಟ ಕಂಡಿದೆ. ಭಾರತದಲ್ಲೀಗ ಸೆಡಾನ್ ಕಾರುಗಳ ಮಾರಾಟ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಸಿಯಾಜ್‌ನ ಈ ದಾಖಲೆಯ ಮಾರಾಟವು ವಿಶೇಷವಾಗಿದೆ.

Maruti Suzuki Ciaz sold more than 3 lakh units

ದೇಶದ ಅತಿದೊಡ್ಡ ಕಾರ್ ಉತ್ಪಾದಕಾ ಕಂಪನಿಯಾಗಿರುವ  ಮಾರುತಿ ಸುಜುಕಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಕಂಪನಿಯ ಪ್ರೀಮಿಯಂ ಮಿಡ್ ಸೈಜ್ ಸೆಡಾನ್ ಸಿಯಾಜ್ ಒಟ್ಟು 3 ಲಕ್ಷ ಮಾರಾಟ ಕಂಡಿದ್ದು, ಆ ಮೂಲಕ ಹೊಸ ದಾಖಲೆಯನ್ನು ಬರೆದಿದೆ. 

1,81,754 ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಜಾ, ಎಸ್ ಕ್ರಾಸ್, ಎಕ್ಸ್ಎಲ್6 ಕಾರ್ ರಿಕಾಲ್ ಮಾಡಿದ ಮಾರುತಿ ಸುಜುಕಿ!

ಭಾರತೀಯ ಆಟೋ ವಲಯದಲ್ಲಿ ತೀವ್ರ ಸ್ಪರ್ಧೆಯಿದ್ದು ಹಲವು ವರ್ಷಗಳಿಂದಲೂ ದೇಶದ ಅತಿದೊಡ್ಡ ಕಾರ್ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆಗೆ ಮಾರುತಿ ಸುಜುಕಿ ಪಾತ್ರವಾಗಿದೆ. ಭಾರತೀಯ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರ್‌ಗಳನ್ನು ಕಾಣಬಹುದು.

ಭಾರತದಲ್ಲಿ ಸೆಡಾನ್ ವಿಭಾಗದಲ್ಲಿ ಕಾರುಗಳ ಮಾರಾಟವು ಅಷ್ಟೇನೂ ಆಶಾದಾಯಕವಾಗಿಲ್ಲ. ಹೀಗಿದ್ದೂ, ಮಿಡ್‌ಸೈಜ್ ಸೆಡಾನ್ ವಿಭಾಗದಲ್ಲಿ ಸಿಯಾಜ್ ಮೂರು ಲಕ್ಷ ಯುನಿಟ್ ಮಾರಾಟ ಕಾಣುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಈ ಸೆಗ್ಮೆಂಟ್‌ನಲ್ಲಿ ಇತರೆ ಕಂಪನಿಯ ಸೆಡಾನ್‌ಗಳಿಗೆ ಹೋಲಿಸಿದರೆ ಸಿಯಾಜ್ ಹೆಚ್ಚು ಸ್ಥಿರ  ಪ್ರದರ್ಶನವನ್ನು ತೋರಿಸಿದೆ ಎಂದು ಹೇಳಬಹುದು. 

ಮಾರುತಿ ಸುಜುಕಿ ಕಂಪನಿಯು 2014ರಲ್ಲಿ ಮಿಡ್ ಸೈಜ್ ಸೆಡಾನ್ ಸಿಯಾಜ್ ಅನ್ನು ಮೊದಲಿಗೆ ಪರಿಚಯಿಸಿತು. ಈ ಸೆಡಾನ್ ಕಾರ್ ಬೆಲೆ 8.60 ಲಕ್ಷ ರೂಪಾಯಿಂದ 11.59 ಲಕ್ಷ ರೂಪಾಯಿವರೆಗೆ ಇದೆ. ಸಿಯಾಜ್ ಅಲ್ಪಾ 1.5 ಲೀಟರ್ ಎಂಜಿನ್ ಆಟೋಮೆಟಿಕ್ ವೆರಿಯೆಂಟ್ ಗರಿಷ್ಠ ಬೆಲೆಯನ್ನು ಹೊಂದಿದೆ.  ಹೋಂಡಾ ಕಂಪನಿಯ ಹೋಂಡಾ ಸಿಟಿ ಮತ್ತು ಹುಂಡೈ ವೆರ್ನಾ ಸೆಡಾನ್‌ಗಳಿಗೆ ಈ ಮಾರುತಿಯ ಸಿಯಾಜ್ ತೀವ್ರ ಪೈಪೋಟಿಯನ್ನು ನೀಡುತ್ತದೆ.

ಸಿಯಾಜ್ ಮೂರು ಲಕ್ಷ ಮಾರಾಟವು ಗ್ರಾಹಕರು ಕಂಪನಿ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ತೋರಿಸುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಹಿರಿಯ ಕಾರ್ಯ ನಿರ್ವಾಹಕ ನಿರ್ದೇಶಕ(ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರಿವಾಸ್ತವ್ ಅವರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್

ಮಾರುತಿ ಸುಜುಕಿಯು ಕಂಪನಿಯು 2018ರಲ್ಲಿ ಸಿಯಾಜ್ ಫೇಸ್‌ಲಿಫ್ಟ್ ವರ್ಷನ್ ಲಾಂಚ ಮಾಡಿತು. ಈ ವೇಳೆ ಸಿಯಾಜ್ ಸೆಡಾನ್ ಕಾರಿಗೆ ಫ್ರಂಟ್ ಗ್ರಿಲ್, ಸ್ಲೀಕ್ ಬಂಪರ್ ಮತ್ತು ಡಿಆರ್‌ಎಲ್‌ಗಳ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್ಸ್ ಒದಗಿಸಿತು. ಜೊತೆಗೆ ಹಲವಾರು ಕ್ರೋಮ್ ಅಲಂಕರಣಗಳು ಇವೆ, ಮತ್ತು ಸ್ಟೀರಿಂಗ್ ವೀಲ್, ಒಳಗಿನ ಡೋರ್ ಹ್ಯಾಂಡಲ್‌ಗಳು, ಎಸಿ ಲೌವ್ರೆಸ್ ನಾಬ್ ಮತ್ತು ಪಾರ್ಕಿಂಗ್ ಬ್ರೇಕ್ ಲಿವರ್‌ನಂತಹ ಆಕರ್ಷಗಳನ್ನು ಸುತ್ತಲೂ ಕಾಣಬಹುದು.

ಸಿಯಾಜ್ ಒಳಾಂಗಣವನ್ನು ನವೀಕರಿಸಲಾಗಿತ್ತು. ಫೇಸ್‌ಲಿಫ್ಟ್ ಸಿಯಾಜ್‌ನಲ್ಲಿ ಕಂಪನಿಯು 4.2 ಟಿಎಫ್‌ಟಿ ಮಲ್ಟಿ ಇನ್ಫಾರ್ಮೇಷನ್ ಡಿಸ್‌ಪ್ಲೇ(ಎಂಐಡಿ), ರಿಯರ್ ಎಸಿ ವೆಂಟ್ಸ್‌ಗಳನ್ನು ನೀಡಲಾಯಿತು. ಕಾರಿನ ಮುಂಭಾಗ ಹಾಗೂ ಹಿಂಭಾಗದ ಸೀಟುಗಳ ಮಧ್ಯೆ ಆರ್ಮ್‌ರೆಸ್ಟ್‌ಗಳನ್ನು ಪರಿಚಯಿಸಲಾಯಿತು. ಇದೇ ವೇಳೆ, ಫ್ರಂಟ್ ಸೀಟ್ ಆರ್ಮ್‌ರೆಸ್ಟ್ ಒಳಗೆ ಸ್ಟೋರೇಜ್ ಸ್ಪೇಸ್ ಇದ್ದರೆ, ರಿಯರ್ ಸೀಟ್ ಆರ್ಮ್‌ರೆಸ್ಟ್‌ನಲ್ಲಿ ಕಪ್‌ ಹೋಲ್ಡರ್‌ಗಳನ್ನು ನೀಡಲಾಯಿತು.  ಹೀಗೆ, ಅನೇಕ ವಿಶೇಷತೆಗಳನ್ನು ಸಿಯಾಜ್ ಒಳಗೆ ಕಾಣಬಹುದಾಗಿದೆ.

ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕಲೀ ಹೊಂದಾಣಿಕೆ ಮಾಡಬಲ್ಲ ಒಆರ್‌ವಿಎಂಗಳು ಮತ್ತು ಇನ್ನಿತರ ಫೀಚರ್‌ಗಳೊಂದಿಗೆ ಈ ಸಿಯಾಜ್ ಬರುತ್ತದೆ. ಇನ್ನು ಸುರಕ್ಷತೆಯ ಸಂಬಂಧಿಸಿದಂತೆ ಹೇಳುವುದಾದರೆ, ಸಿಯಾಜ್‌ ಕಾರಿನ ಮುಂಭಾಗದ ಪ್ರಯಾಣಿಕರಿಗೆ ಎರಡು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಅದೇ ರೀತಿ ಎಬಿಡಿಯೊಂದಿಗೆ ಎಬಿಎಸ್, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ನೀಡಲಾಗಿದೆ.

ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!

ಸ್ಮಾರ್ಟ್‌ಹೈಬ್ರಿಡ್ ಟೆಕ್ನಾಲಜಿಯೊಂದಿಗೆ 1.5 ಲೀಟರ್ ಎಂಜಿನ್ ಅನ್ನು ನೀವು ಸಿಯಾಜ್ ಸೆಡಾನ್‌ನಲ್ಲಿ ಕಾಣಬಹುದು. ಈ ಎಂಜಿನ್ 103 ಬಿಎಚ್‌ಪಿ ಮತ್ತು 138 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಎರಡು ಮಾದರಿಯಲ್ಲಿ ಬರುತ್ತದೆ. 5 ಸ್ಪೀಡ್ ಗಿಯರ್ ಎಂಜಿನ್ ಮತ್ತು 4 ಸ್ಪೀಡ್ ಆಟೋಮೆಟಿಕ್ ಎಂಜಿನ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. 

Latest Videos
Follow Us:
Download App:
  • android
  • ios