ಒಂದೇ ದಿನ 150 ವರ್ಟಸ್‌ ಸೆಡಾನ್‌ ವಿತರಿಸಿ ದಾಖಲೆ ನಿರ್ಮಿಸಿದ ವೋಕ್ಸ್‌ವ್ಯಾಗನ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಫೋಕ್ಸ್‌ವ್ಯಾಗನ್ (Volkswagen)ನ ವಿತರಕರಲ್ಲಿ ಒಬ್ಬರು ಇತ್ತೀಚೆಗೆ ಬಿಡುಗಡೆ ಮಾಡಿದ 5-ಸೀಟರ್ ವರ್ಟಸ್ ಸೆಡಾನ್‌ನ 150 ವಾಹನಗಳನ್ನು ಒಂದೇ ದಿನದಲ್ಲಿ ವಿತರಿಸಿದ್ದಾರೆ. ಇದು ಕಾರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಿದೆ.

Volkswagen enters national record by delivering 150 vehicles in single day

ಜರ್ಮನಿಯ ಐಷಾರಾಮಿ ಕಾರು ತಯಾರಕ ಫೋಕ್ಸ್‌ವ್ಯಾಗನ್ (Volkswagen)ನ ವಿತರಕರಲ್ಲಿ ಒಬ್ಬರು ಇತ್ತೀಚೆಗೆ ಬಿಡುಗಡೆ ಮಾಡಿದ 5-ಸೀಟರ್ ವರ್ಟಸ್ ಸೆಡಾನ್ನ 150 ವಾಹನಗಳನ್ನು ಒಂದೇ ದಿನದಲ್ಲಿ ವಿತರಿಸಿದ್ದಾರೆ. ಇದು ಕಾರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಿದೆ. ಎಲ್ಲಾ ಹೊಸ Virtus ಅನ್ನು ಜೂನ್ 9 ರಂದು 11.21 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಬೆಲೆಯಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಯಿತು.  

ಕೇರಳದ ಕಂಪನಿಯ ಡೀಲರ್ ಪಾಲುದಾರ ಇವಿಎಂ ಮೋಟಾರ್ಸ್ ಮತ್ತು ವೆಹಿಕಲ್ಸ್ ಇಂಡಿಯಾ (EVM Motors and Vehicles India) ತನ್ನ ಅತ್ಯುತ್ತಮ  ಸಾಧನೆಗೆ ಹೊಸ ದಾಖಲೆಯ ಗೌರವ ಪಡೆದಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕೇರಳವೊಂದರಲ್ಲೇ, ವರ್ಟಸ್, ವೋಕ್ಸ್‌ವ್ಯಾಗನ್‌ಗಾಗಿ ಮೆಗಾ ಡೆಲಿವರಿ ಕಾರ್ಯಕ್ರಮದ ಅಡಿಯಲ್ಲಿ EVM ಮೋಟಾರ್ಸ್ ಮತ್ತು ವೆಹಿಕಲ್ಸ್ ಮತ್ತು ಫೀನಿಕ್ಸ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ 200 ಕ್ಕೂ ಹೆಚ್ಚು ಕಾರುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ.

"ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus) ಒಂದೇ ಡೀಲರ್‌ಶಿಪ್‌ನಿಂದ ಒಂದು ದಿನದಲ್ಲಿ ವಿತರಿಸಲಾಗುವ ಒಂದೇ ಮಾದರಿಯ ಸೆಡಾನ್ ಆಗಿರುವ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿರುವುದಕ್ಕೆ ಸಂತಸವಾಗಿದೆ ವೋಕ್ಸ್‌ವ್ಯಾಗನ್ ಇಂಡಿಯಾ ಪ್ಯಾಸೆಂಜರ್ ವಿಭಾಗದ ಬ್ರ್ಯಾಂಡ್ ನಿರ್ದೇಶಕ ಆಶಿಶ್ ಗುಪ್ತಾ ಹೇಳಿದ್ದಾರೆ. 
Virtus ಸೆಡಾನ್ ದೇಶದಲ್ಲಿ ಸದ್ಯ 152 ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.

ಮಾರುತಿ ಬ್ರೀಜಾ ಬುಕ್ಕಿಂಗ್ ಆರಂಭ

ವೇರಿಯಂಟ್ಗಳು: 
ಫೋಕ್ಸ್ವ್ಯಾಗನ್ ವರ್ಟಸ್ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ - ಕಂಫರ್ಟ್ಲೈನ್ (Comfort line), ಹೈಲೈನ್, (Highline)ಟಾಪ್ಲೈನ್ (Topline) ಮತ್ತು ಜಿಟಿ ಪ್ಲಸ್ (GT plus).
ಫೋಕ್ಸ್ವ್ಯಾಗನ್ ವರ್ಟಸ್ ಅನ್ನು ಎರಡು ಪೆಟ್ರೋಲ್ ಎಂಜಿನ್ಗಳಲ್ಲಿ ಬರುತ್ತದೆ - 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್. ಮೊದಲನೆಯದು 114ಬಿಎಚ್ಪಿ (BHP) ಮತ್ತು 178ಎನ್ಎಂ (NM) ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫೋಕ್ಸ್ವ್ಯಾಗನ್ ವರ್ಟಸ್ನ ಮುಂಭಾದಲ್ಲಿನ ಕ್ರೋಮ್ ಸ್ಲ್ಯಾಟ್ ಎಲ್ಇಡಿ ಹೆಡ್ಲ್ಯಾಂಪ್ಗಳವರೆಗೆ ವಿಸ್ತರಿಸುತ್ತದೆ. ಕೆಳಗೆ ಫಾಗ್ ಲೈಟ್ ಹೊಸ ವಿನ್ಯಾಸದಲ್ಲಿ ಬಂದಿದ್ದು, ಬಂಪರ್ನಲ್ಲಿನ ಕ್ರೋಮ್ ಇನ್ಸರ್ಟ್ ವರ್ಟಸ್ಗೆ ಆಕರ್ಷಕ ನೋಟವನ್ನು ನೀಡುತ್ತದೆ. 

ಇದರ  ಟಾಪ್-ಸ್ಪೆಕ್ ಜಿಟಿ ಟ್ರಿಮ್ ಗ್ಲಾಸ್ ಕಪ್ಪು ಮಿಶ್ರಲೋಹದ ಚಕ್ರಗಳು ಮತ್ತು ಮುಂಭಾಗದ ಫೆಂಡರ್ನಲ್ಲಿ 'ಜಿಟಿ' ಬ್ಯಾಡ್ಜ್ ಕಾರಿಗೆ ಹೊಸ ರೂಪ ನೀಡಿವೆ.  ಸ್ಪ್ಲಿಟ್ ಟೈಲ್ ಲ್ಯಾಂಪ್ಗಳು ಫಾಗ್ ಲ್ಯಾಂಪ್ ಆಗಿ ಕೆಲಸ ಮಾಡುತ್ತದೆ. ಬೂಟ್ನ ಮಧ್ಯಭಾಗದಲ್ಲಿ 'ವರ್ಟಸ್' ಎಂಬ ಬ್ರ್ಯಾಂಡ್ ನೇಮ್ ಹೈಲೈಟ್ ಆಗುತ್ತದೆ. Volkswagen Virtus ನ ಕ್ಯಾಬಿನ್ ವೈರ್ಲೆಸ್ ಆ್ಯಪಲ್ ಕಾರ್ ಪ್ಲೇ (Apple CarPlay) ಮತ್ತು ಆ್ಯಂಡ್ರಾಯ್ಡ್ ಆಟೋ (Android Auto) ಸಂಪರ್ಕ ಹಾಗೂ 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ಗಳನ್ನು ಹೊಂದಿದೆ.

ಮೇನಲ್ಲಿ ಟಾಟಾ ನೆಕ್ಸಾನ್ ಮಾರಾಟ

ಫೋಕ್ಸ್ವ್ಯಾಗನ್ ವರ್ಟಸ್ ಅನ್ನು ರಿಫ್ಲೆಕ್ಸ್ ಸಿಲ್ವರ್, ಕಾರ್ಬನ್ ಸ್ಟೀಲ್ ಗ್ರೇ, ಕರ್ಕುಮಾ ಹಳದಿ, ವೈಲ್ಡ್ ಚೆರ್ರಿ ರೆಡ್, ರೈಸಿಂಗ್ ಬ್ಲೂ ಮತ್ತು ಕ್ಯಾಂಡಿ ವೈಟ್ ಸೇರಿದಂತೆ ಆರು ಬಣ್ಣಗಳಲ್ಲಿ ನೀಡಲಾಗುತ್ತದೆ.
ಫೋಕ್ಸ್ವ್ಯಾಗನ್ ವರ್ಟಸ್ ಹೋಂಡಾ ಸಿಟಿ (Honda City), ಮಾರುತಿ ಸುಜುಕಿ ಸಿಯಾಜ್ (maruti Suzuki Ciaz), ಹ್ಯುಂಡೈ ವೆರ್ನಾ (Hyundai Verna) ಮತ್ತು ಸ್ಕೋಡಾ ಸ್ಲಾವಿಯಾಗಳ (Skoda Slavia) ವಿರುದ್ಧ ಸ್ಪರ್ಧಿಸುತ್ತದೆ. 

Latest Videos
Follow Us:
Download App:
  • android
  • ios