ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ನಾಲ್ಕು ಅತ್ಯಂತ ಶಕ್ತಿಶಾಲಿ ಲ್ಯಾಡರ್-ಫ್ರೇಮ್ ಎಸ್‌ಯುವಿಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್, ಸ್ಕಾರ್ಪಿಯೋ ಕ್ಲಾಸಿಕ್ ಅಪ್‌ಡೇಟ್, ಮತ್ತು ನೆಕ್ಸ್ಟ್-ಜೆನ್ ಟೊಯೋಟಾ ಫಾರ್ಚೂನರ್ ಸೇರಿವೆ.

ನವದೆಹಲಿ (ಜೂ.26): ಕಳೆದ 10 ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಸ್‌ಯುವಿ (SUV) ಸೆಗ್ಮೆಂಟ್ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ಇಂದು ಬಹುತೇಕ ಕಾರು ಕಂಪನಿಗಳು ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಕಾರುಗಳಿಗಿಂತ ಎಸ್‌ಯುವಿಗಳ ತಯಾರಿಕೆಯತ್ತಲೇ ಹೆಚ್ಚು ಗಮನ ಹರಿಸುತ್ತಿವೆ. ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಮುಖ್ಯ ಕಾರಣ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಾವು ಎಸ್‌ಯುವಿ ಎಂದು ಕರೆಯುವ ಹಲವು ಕಾರುಗಳು ಮೂಲತಃ 'ಕ್ರಾಸ್‌ಓವರ್'ಗಳಾಗಿದ್ದು, ಮೊನೊಕಾಕ್ (Monocoque) ಪ್ಲಾಟ್‌ಫಾರ್ಮ್‌ನಲ್ಲಿ ತಯಾರಾಗುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಕಠಿಣವಾದ ರಸ್ತೆಗಳಲ್ಲಿ ಅಪ್ಪಟ ಆಫ್-ರೋಡಿಂಗ್ ಸಾಹಸಗಳಿಗಾಗಿಯೇ ಕೆಲವು ವಿಶೇಷ ಎಸ್‌ಯುವಿಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇವುಗಳನ್ನು ಅತ್ಯಂತ ಬಲಿಷ್ಠವಾದ 'ಲ್ಯಾಡರ್-ಫ್ರೇಮ್ ಚಾಸಿಸ್' (Ladder-Frame Chassis) ಬಳಸಿ ಸಿದ್ಧಪಡಿಸಲಾಗುತ್ತದೆ. ಇವು ಕಠಿಣ ಮತ್ತು ಹಳ್ಳಕೊಳ್ಳದ ರಸ್ತೆಗಳಲ್ಲಿ ಸಾಗಲು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಂತಹದ್ದೇ ನಾಲ್ಕು ಅತ್ಯಂತ ಶಕ್ತಿಶಾಲಿ ಲ್ಯಾಡರ್-ಫ್ರೇಮ್ ಎಸ್‌ಯುವಿಗಳು ಬಿಡುಗಡೆಯಾಗಲಿದ್ದು, ಆಫ್-ರೋಡಿಂಗ್ ಪ್ರಿಯರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್ (Mahindra Scorpio N Facelift)

ಆರಾಮದಾಯಕ ಇಂಟೀರಿಯರ್, ಹೈಟೆಕ್ ಫೀಚರ್ಸ್ ಮತ್ತು ಬಲಿಷ್ಠ ಲುಕ್ ಬಯಸುವ ಗ್ರಾಹಕರ ನಡುವೆ ಮಹೀಂದ್ರಾ ಸ್ಕಾರ್ಪಿಯೋ ಎನ್ ಅತ್ಯಂತ ಜನಪ್ರಿಯ ಕಾರಾಗಿದೆ. ಮಹೀಂದ್ರಾ ಸಂಸ್ಥೆ ಈಗ ಈ ಎಸ್‌ಯುವಿಯ 'ಫೇಸ್‌ಲಿಫ್ಟ್' (Facelift) ಆವೃತ್ತಿಯ ಕೆಲಸದಲ್ಲಿ ಬ್ಯುಸಿಯಾಗಿದ್ದು, ಇದರ ಟೆಸ್ಟಿಂಗ್ ಮಾಡೆಲ್‌ಗಳು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಕಾಣಿಸಿಕೊಂಡಿವೆ.

ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಇದರಲ್ಲಿ ಹೊಸ ವಿನ್ಯಾಸದ ವೀಲ್ಸ್, ಮರುರೂಪಿಸಲಾದ ಬಂಪರ್ ಮತ್ತು ಗ್ರಿಲ್ ಹಾಗೂ ಅಪ್‌ಡೇಟೆಡ್ ಹೆಡ್‌ಲೈಟ್‌ಗಳು ಇರಲಿವೆ. ಕಾರಿನ ಒಳಗಡೆ 'ಥಾರ್ ರಾಕ್ಸ್' (Thar Roxx) ನಲ್ಲಿರುವಂತಹ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೆಚ್ಚಿನ ವೇರಿಯೆಂಟ್‌ಗಳಲ್ಲಿ 'ಲೆವೆಲ್ 2 ADAS' (Advanced Driver Assistance Systems) ಸುರಕ್ಷತಾ ಫೀಚರ್ ಸಿಗುವ ಸಾಧ್ಯತೆಯಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಅಪ್‌ಡೇಟ್ (Mahindra Scorpio Classic)

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಅದೃಷ್ಟವನ್ನೇ ಬದಲಾಯಿಸಿದ್ದು ಇದೇ ಸ್ಕಾರ್ಪಿಯೋ ಬ್ರ್ಯಾಂಡ್. ಇದೇ ಕಾರಣಕ್ಕೆ ಕಂಪನಿಯು ಸ್ಕಾರ್ಪಿಯೋ ಎನ್ ಜೊತೆಗೆ ಹಳೆಯ ಮಾಡೆಲ್‌ನ 'ಸ್ಕಾರ್ಪಿಯೋ ಕ್ಲಾಸಿಕ್' ಮಾರಾಟವನ್ನೂ ಮುಂದುವರಿಸಿದೆ. ಈ ಮೂಲ ಸ್ಕಾರ್ಪಿಯೋ ಕ್ಲಾಸಿಕ್‌ಗೆ ಮುಂಬರುವ ದಿನಗಳಲ್ಲಿ ಪ್ರಮುಖ ಅಪ್‌ಡೇಟ್ ಸಿಗುವ ನಿರೀಕ್ಷೆಯಿದೆ.

ಇದರ ರಗಡ್ ಹಾಗೂ ಮಾಸ್ ಲುಕ್‌ಗೆ ಗ್ರಾಹಕರು ಈಗಾಗಲೇ ಫಿದಾ ಆಗಿರುವುದರಿಂದ, ಇದರ ಜನಪ್ರಿಯತೆಗೆ ಧಕ್ಕೆ ಬಾರದಂತೆ ಮಹೀಂದ್ರಾ ಯಾವುದೇ ದೊಡ್ಡ ಬದಲಾವಣೆ ಮಾಡುವುದಿಲ್ಲ. ಆದರೆ, ಹೊರಭಾಗದಲ್ಲಿ ಸಣ್ಣಪುಟ್ಟ ಕಾಸ್ಮೆಟಿಕ್ ಬದಲಾವಣೆಗಳು ಹಾಗೂ ಕ್ಯಾಬಿನ್‌ ಒಳಗಡೆ ಉತ್ತಮ ರೆಸಲ್ಯೂಶನ್ ಹೊಂದಿರುವ ಹೊಸ ಟಚ್‌ಸ್ಕ್ರೀನ್, ಪರಿಷ್ಕೃತ ಇಂಟೀರಿಯರ್ ಕಲರ್ ಥೀಮ್ ಸೇರಿದಂತೆ ಕೆಲವು ಪ್ರಮುಖ ಫೀಚರ್‌ಗಳನ್ನು ಅಳವಡಿಸಲಾಗುತ್ತಿದೆ.

ನೆಕ್ಸ್ಟ್ ಜನರೇಷನ್ ಟೊಯೋಟಾ ಫಾರ್ಚೂನರ್ (Next-Gen Toyota Fortuner)

ಟೊಯೋಟಾ ಕಂಪನಿಯ ನೆಕ್ಸ್ಟ್ ಜನರೇಷನ್ ಫಾರ್ಚೂನರ್ ಭಾರತದಲ್ಲಿ ಸದ್ಯಕ್ಕೆ ಅತ್ಯಂತ ಹೆಚ್ಚು ಕಾಯುತ್ತಿರುವ ದೈತ್ಯ ಕಾರುಗಳಲ್ಲಿ ಒಂದಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಅಥವಾ 2027 ರ ಆರಂಭದಲ್ಲಿ ಇದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಈ ಹೊಸ ಫಾರ್ಚೂನರ್ ಅನ್ನು ಅಪ್‌ಡೇಟೆಡ್ 'IMV ಲ್ಯಾಡರ್-ಫ್ರೇಮ್ ಪ್ಲಾಟ್‌ಫಾರ್ಮ್' ಅಡಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಈ ಎಸ್‌ಯುವಿಯಲ್ಲಿ ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳು, ಹೊಸ ಶೈಲಿಯ ಗ್ರಿಲ್ ಮತ್ತು ಬಂಪರ್‌ನೊಂದಿಗೆ ಅತ್ಯಂತ ಆಕರ್ಷಕ ಫ್ರಂಟ್ ಲುಕ್ ನೀಡಲಾಗುತ್ತಿದೆ. ಹಾಗೆಯೇ ಇದರ ಕ್ಯಾಬಿನ್‌ಅನ್ನು ಪ್ರೀಮಿಯಂ ಲೇಔಟ್ ಮತ್ತು ಅತ್ಯಾಧುನಿಕ ಐಷಾರಾಮಿ ಫೀಚರ್‌ಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ವಾಹನದಲ್ಲಿ ಹಳೆಯ ಮಾಡೆಲ್‌ನಂತೆಯೇ ಭರವಸೆಯ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ 'ಮೈಲ್ಡ್-ಹೈಬ್ರಿಡ್' (Mild-Hybrid) ಇಂಜಿನ್ ಆಯ್ಕೆಗಳು ಲಭ್ಯವಿರಲಿವೆ.