Asianet Suvarna News Asianet Suvarna News

ತಾಂತ್ರಿಕ ದೋಷ: ಹೈರೈಡರ್ ಹಿಂಪಡೆಯಲಿದೆ ಟೊಯೋಟಾ: ಗ್ರಾಂಡ್ ವಿಟಾರಾ ಮೇಲೂ ಪ್ರಭಾವ

ಇತ್ತೀಚೆಗಷ್ಟೇ ಬಿಡುಗಡೆಯಾದ ಟೊಯೋಟಾ ಹೈರೈಡರ್ (Toyoto Hyryder) ಮಧ್ಯಮ ಗಾತ್ರದ ಎಸ್ ಯುವಿ (SUV) ಅನ್ನು ಹಿಂಪಡೆಯುವುದಾಗಿ ಘೋಷಿಸಿದೆ

Toyota to recall hyryder: Grand vitara also to b e affected
Author
First Published Dec 8, 2022, 5:32 PM IST

ಇತ್ತೀಚೆಗಷ್ಟೇ ಬಿಡುಗಡೆಯಾದ ಟೊಯೋಟಾ ಹೈರೈಡರ್ (Toyoto Hyryder) ಮಧ್ಯಮ ಗಾತ್ರದ ಎಸ್ ಯುವಿ (SUV) ಅನ್ನು ಹಿಂಪಡೆಯುವುದಾಗಿ ಘೋಷಿಸಿದೆ ಟೋಯೋಟೋ. ಮುಂಭಾಗದ ಸೀಟ್ ಬೆಲ್ಟ್‌ಗಳ ಭುಜದ ಎತ್ತರ ಜೋಡಣೆಯಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಎಸ್‌ಯುವಿಯನ್ನು  ಹಿಂಪಡೆಯಲಾಗುತ್ತಿದೆ. ಹೈರೈಡರ್ (HyRyder) ತಂತ್ರಜ್ಞಾನವನ್ನು ಮಾರುತಿ ಸುಜುಕಿಯ (Maruti Suzuki) ಗ್ರ್ಯಾಂಡ್ ವಿಟಾರಾ (Grand Vitara) ಕಾರಿಗೆ ಕೂಡ ಬಳಸಿರುವುದರಿಂದ, ಅದನ್ನೂ ಕೂಡ ಹಿಂಪಡೆಯಲಾಗುತ್ತದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಈಗಾಗಲೇ  ಮಾರುತಿ ಸುಜುಕಿ ಈ ಮಧ್ಯಮ ಗಾತ್ರದ ಎಸ್‌ಯುವಿಯನ್ನು  ಪ್ರತ್ಯೇಕವಾಗಿ ಹಿಂಪಡೆಯುವ ಸೂಚನೆ ನೀಡಿದೆ.

ಮಾರುತಿ ಹಿಂಪಡೆಯಲಿರುವ ಇತರ ನಾಲ್ಕು ಇತರ ಮಾರುತಿ ಸುಜುಕಿ ಕಾರುಗಳೆಂದರೆ – ಎಕ್ಸ್ ಎಲ್ ಆರ್ (XL6) ಕ್ರಾಸ್ಒವರ್ (Crossover), ಎರ್ಟಿಗಾ ಎಂಪಿವಿ ( Ertiga MPV), ಬ್ರೀಝಾ ಕಾಂಪ್ಯಾಕ್ಟ್ ಎಸ್ ಯುವಿ (Breeza Compact SUV) ಮತ್ತು ಸಿಯಾಜ್ ಸೆಡಾನ್ (Ciaz Sedan). ಮುಂದಿನ ಸೀಟ್ ಬೆಲ್ಟ್‌ಗಳ ಭುಜದ ಎತ್ತರ ಹೊಂದಾಣಿಕೆಯ ಜೋಡಣೆ ಭಾಗಗಳಲ್ಲಿ ಸಂಭವನೀಯ ದೋಷವಿರುವುದನ್ನು ಮಾರುತಿ ಸುಜುಕಿ ಗಮನಿಸಿದೆ. ಇದು ಸೀಟ್ ಬೆಲ್ಟ್ ಅನ್ನು ನಿಷ್ಕ್ರಿಯಗೊಳಿಸಬಹುದು. ಆದ್ದರಿಂದ ಈ ಭಾಗವನ್ನು ಪರಿಶೀಲಿಸಿ, ಬದಲಾಯಿಸಲು ಕಾರು ತಯಾರಕರು ನಿರ್ಧರಿಸಿದ್ದಾರೆ. ಆದ್ದರಿಂದ ಗ್ರ್ಯಾಂಡ್ ವಿಟಾರಾ, ಎಕ್ಸ್ಎಲ್ 6 ಮತ್ತು ಎರ್ಟಿಗಾ ಸೇರಿದಂತೆ 9,000ಕ್ಕೂ ಹೆಚ್ಚು ಮಾರುತಿ ಸುಜುಕಿ ಕಾರುಗಳನ್ನು ಹಿಂಪಡೆದು ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಬದಲಾಯಿಸುವ ಗುರಿಯನ್ನು ಹೊಂದಿದೆ. ಟೊಯೋಟಾ ಹೈರೈಡರ್ ಅಲ್ಲಿ ಈಗಾಗಲೇ ಈ ಸಮಸ್ಯೆ ಕಂಡು ಬಂದಿರುವುದರಿಂದ ಜಪಾನಿನ ವಾಹನ ತಯಾರಕ ಕಂಪನಿ ಈಗಾಗಲೇ 994 ವಾಹನಗಳನ್ನು ಹಿಂಪಡೆದಿದೆ.

ಅರ್ಬನ್‌ ಕ್ರೂಸರ್‌ SUV ಮಾರುಕಟ್ಟೆಯಿಂದ ಹಿಂಪಡೆಯಲಿದೆ ಟೊಯೋಟಾ ಕಿರ್ಲೋಸ್ಕರ್

ಟೊಯೊಟಾ, ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾವನ್ನು ಬೆಂಗಳೂರಿನ ಬಳಿಯ ಬಿಡದಿ ಕಾರ್ಖಾನೆಯಲ್ಲಿ ತಯಾರಿಸುತ್ತದೆ ಮತ್ತು ದೇಶದಾದ್ಯಂತ ನೆಕ್ಸಾ (NEXA) ಡೀಲರ್ಶಿಪ್‌ಗಳ ಮೂಲಕ ಮಾರುತಿ ಸುಜುಕಿಗೆ ವಿಟಾರಾ ಎಸ್ ಯುವಿ (SUV) ಗಳನ್ನು ರವಾನಿಸುತ್ತದೆ. ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾ ಬ್ಯಾಡ್ಜ್ ಇಂಜಿನಿಯರಿಂಗ್ ತಂತ್ರಜ್ಞಾನ ಹೊಂದಿದೆ.  ಎರಡೂ ಎಸ್ ಯುವಿಗಳಲ್ಲಿ ಇಂಟೀರಿಯರ್ ಗಳು ಸಮನಾಗಿವೆ. ಬಾಹ್ಯ ವಿನ್ಯಾಸದಲ್ಲಿ ಮಾತ್ರ ವ್ಯತ್ಯಾಸಗಳಿವೆ. 

ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್. ಸ್ಟ್ರಾಂಗ್ ಹೈಬ್ರಿಡ್ 1.5-ಲೀಟರ್ 4-ಸಿಲಿಂಡರ್ TNGA ಪೆಟ್ರೋಲ್ ಎಂಜಿನ್ ಹೊಂದಿದ್ದು, 91 ಬಿಎಚ್ ಪಿ (Bhp) ಮತ್ತು 122 ಎನ್ ಎಂ (Nm) ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಅದು 78 ಬಿಎಚ್ ಪಿ (Bhp) ಹಾಗೂ 141 ಎನ್ ಎಂ (Nm) ಮಾಡುವ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದೆ.  ಗ್ರ್ಯಾಂಡ್ ವಿಟಾರಾ ಸಿವಿಟಿ (CVT) ಆಟೊಮೆಟೀವ್ ಗೇರ್ಬಾಕ್ಸ್ ಮತ್ತು ಆಲ್-ಎಲೆಕ್ಟ್ರಿಕ್ ಮೋಡ್ ಅನ್ನು ಸಹ ಪಡೆಯುತ್ತವೆ, ಇದರಲ್ಲಿ ವಾಹನವನ್ನು ಸಂಪೂರ್ಣವಾಗಿ ಬ್ಯಾಟರಿ ಶಕ್ತಿಯಲ್ಲಿ 25 ಕಿಲೋಮೀಟರ್ಗಳವರೆಗೆ ಚಲಾಯಿಸಬಹುದು.

ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ

ಈ ಮೋಟಾರ್ ಅನ್ನು ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಮ್ (SHVS) ಸೌಮ್ಯ ಹೈಬ್ರಿಡ್ ಸಿಸ್ಟಮ್ನೊಂದಿಗೆ ಜೋಡಿಸಲಾಗಿದೆ. ಸೌಮ್ಯ ಹೈಬ್ರಿಡ್ ಪವರ್ಟ್ರೇನ್ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟೇಬಲ್ ಆಟೊಮೇಷನ್ ಎರಡು ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.  ಮ್ಯಾನ್ಯುಯಲ್ ಗೇರ್ಬಾಕ್ಸ್ ಹೊಂದಿದ ಮೈಲ್ಡ್  ಹೈಬ್ರಿಡ್ ಪವರ್ ಟ್ರೇಲರ್‌ನೊಂದಿಗೆ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತದೆ. 

Follow Us:
Download App:
  • android
  • ios