ಟಾಟಾ ಟಿಯಾಗೋ ಈಗ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯ!
ದೇಶದಲ್ಲಿ ಎಂಟ್ರಿ ಲೇವಲ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್‌ನ ಟಿಯಾಗೋ ಕಾರು ವಿಶೇಷ ಮನ್ನಣೆಯನ್ನು ಪಡೆದುಕೊಂಡಿದೆ. ಗ್ರಾಹಕ ಸ್ನೇಹಿಯಾಗಿರುವ ಈ ಕಾರಿನ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಹಲವು ವೈಶಿಷ್ಟ್ಯಗಳನ್ನು ಈ ಕಾರಿಗೆ ಅಳವಡಿಸುತ್ತಿದೆ. ಇದೀಗ ಟಿಯಾಗೋ ನಿಮಗೆ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯವಿರಲಿದೆ.
ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಯಾಗೋ ದಿನದಿಂದ ದಿನಕ್ಕೆ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್, ಟಾಟಾ ಟಿಯಾಗೋದಲ್ಲಿ ಕೆಲವೊಂದಿಷ್ಟು ಅಪ್‌ಡೇಟ್‌ಗಳನ್ನು ಮಾಡುವ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ.
ಟಾಟಾ ಮೋಟಾರ್ಸ್ ಇದೀಗ ಟಾಟಾ ಟಿಯಾಗೋ ಕಾರಿಗೆ ಮತ್ತೊಂದು ಅಪ್‌ಡೇಟ್ ಮಾಡಿದೆ. ಏನೆಂದರೆ, ಹೊಸ ಬಣ್ಣದ ಆಯ್ಕೆಯೊಂದನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇನ್ನು ಮುಂದೆ ಗ್ರಾಹಕರಿಗೆ ಟಾಟಾ ಟಿಯಾಗೋ ಅರಿಝೋನಾ ಬ್ಲೂ(ನೀಲಿ) ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ. ಈ ಅರಿಝೋನಾ ಬಣ್ಣವು ಟಾಟಾ ಟಿಯಾಗೋ ಕಾರಿಗೆ ಪ್ರೀಮಿಯಂ ಲುಕ್ ನೀಡಿದೆ.
ಹುಂಡೈ ಭರ್ಜರಿ ಆಫರ್: ಆಯ್ದ ಕಾರುಗಳ ಮೇಲೆ 1.5 ಲಕ್ಷ ರೂ.ವರೆಗೂ ಡಿಸ್ಕೌಂಟ್
ಈಗ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಟಿಯಾಗೋ ಕಾರನ್ನು ಆರು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಗ್ರಾಹಕರಿಗೆ ಟಾಟಾ ಟಿಯಾಗೋ ಫ್ಲೇಮ್ ರೆಡ್, ಪೀಯರ್‌ಸ್ಕೆಂಟ್ ವೈಟ್, ವಿಕ್ಟರಿ ಯೆಲ್ಲೋ, ಪ್ಯೂರ್ ಸಿಲ್ವರ್, ಡಟ್ಯೂನಾ ಗ್ರೇ ಮತ್ತು ಅರಿಝೋನಾ ಬ್ಲೂಗಳಲ್ಲಿ ದೊರೆಯಲಿದೆ.
ಈ ತಿಂಗಳ ಆದಿಯಲ್ಲಿ ಟಾಟಾ ಮೋಟಾರ್ಸ್, ಟಿಯಾಗೋ ಎಕ್ಸ್‌ಟಿಎ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದಕ್ಕೂ ಮೊದಲು 2021ರ ಜನವರಿಯಲ್ಲಿ ಟಿಯಾಗೋ ಲಿಮಿಟೆಟ್ ಎಡಿಷನ್ ಕಾರನ್ನು ರಸ್ತೆಗಿಳಿಸಿತ್ತು. ಈ ಮೊದಲೇ ಹೇಳಿದಂತೆ ಟಿಯಾಗೋ ಭಾರತೀಯ ಗ್ರಾಹಕರ ಪ್ರೀತಿಯನ್ನು ಗಳಿಸುತ್ತಾ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಟಿಯಾಗೋ ಕಾರನ್ನು ಎಷ್ಟು ಸಾಧ್ಯವೋ ಅಷ್ಟು ಗ್ರಾಹಕಸ್ನೇಹಿಯಾಗಿ ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಅಪ್‌ಡೇಟ್ ಮಾಡುತ್ತಲೇ ಇದೆ. ಕಂಪನಿ ಈಗ ಟಿಯಾಗೋ ಕಾರಿಗೆ ಅರಿಝೋನಾ ಬ್ಲೂ ಆಯ್ಕೆಯನ್ನು ನೀಡುತ್ತಿರವುದು ಇದರ ಭಾಗವೇ ಆಗಿದೆ ಎಂದು ಭಾವಿಸಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರು.
ಟಾಟಾ ಟಿಯಾಗೋ ಅನೇಕ ಫೀಚರ್‌ಗಳನ್ನು ಒಳಗೊಂಡಿದ್ದು, ಒಟ್ಟಾರೆ ಡ್ರೈವಿಂಗ್‌ನ ಅತ್ಯದ್ಭುತ ಅನುಭವವನ್ನು ನೀಡುತ್ತದೆ. ಈ ಕಾರು ಫ್ರಂಟ್‌ನಲ್ಲಿ ಟ್ರೈಯಾರೋ ಪ್ಯಾಟರ್ನ್ ಹೊಂದಿಂರುವ ಪಿಯಾನೋ ಬ್ಲ್ಯಾಕ್ ಫ್ರಂಟ್ ಗ್ರಿಲ್ ಒಳಗೊಂಡಿದೆ.
ಓಲಾ ಕ್ಯಾಬ್ ಗೊತ್ತಲ್ಲ, ಅದೇ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ!
ಹಾಲೋಜಿನ್ ಹೆಡ್‌ಲ್ಯಾಂಪ್ಸ್, ಬ್ಯೂಮ್‌ರ್ಯಾಂಗ್ ಆಕೃತಿಯ ಟೇಲ್ ಲ್ಯಾಂಪ್ಸ್, ಸ್ಪಾಯರ್ಲ್ಸ್, 15 ಇಂಚ್ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಯೋಗೆ ಸಪೋರ್ಟ್ ಮಾಡುವ 7 ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, 8 ಸ್ಪೀಕರ್‌ಗಳ ಮ್ಯೂಸಿಕ್ ಸಿಸ್ಟಮ್, ಆಟೋಮೆಟಿಕ್ ಟೆಂಪರೇಚರ್ ಕಂಟ್ರೋಲ್, ಡಿಜಿಟಲ್ ಇನ್ಸುಟ್ರುಮೆಂಟೆಲ್ ಪ್ಯಾನೆಲ್, ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಹೈಟ್ ಹೊಂದಾಣಿಕೆ ಮಾಡಬಲ್ಲ ಚಾಲಕನ ಸೀಟು, ತಂಪಾದ ಗ್ಲೋವ್ ಬಾಕ್ಸ್ ಸೇರಿದಂತೆ ಅನೇಕ ಫೀಚರ್‌ಗಳನ್ನು ಈ ಟಾಟಾ ಟಿಯಾಗೋ ಕಾರ್ ಹೊಂದಿದೆ.
ಟಾಟಾ ಟಿಯಾಗೋ ಕಾರು 1.2 ಲೀ. ಮತ್ತು ಮೂರು ಸಿಲೆಂಡರ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ ಗರಿಷ್ಠ 86 ಬಿಎಚ್‌ಪಿ ಪವರ್ ಮತ್ತು ಗರಿಷ್ಠ 113ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 5 ಸ್ಪೀಡ್ ಮ್ಯಾನುಯೆಲ್ ಗಿಯರ್‌ಗಳಿವೆ. ಜೂತೆಗೆ ನಿಮಗೆ ಆಟೋಮೆಟಿಕ್ 5 ಸ್ಪೀಡ್ ಗಿಯರ್ ಎಂಜಿನ್ ಆಯ್ಕೆಯೂ ಇರಲಿದೆ.
ನಿಮಗೆ ಈಗಾಗಲೇ ಗೊತ್ತಿರವಂತೆ ಟಾಟಿ ಟಿಯಾಗೋ 5 ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗುತ್ತದೆ. ಎಕ್ಸ್ಇ, ಎಕ್ಸ್‌ಟಿ, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಡಿಟಿ ಮಾದರಿಗಳಲ್ಲಿ ಈ ಕಾರು ಮಾರಾಟಕ್ಕೆ ದೊರೆಯತ್ತದೆ. ಅದೇ ರೀತಿ ಬೆಲೆಯಲ್ಲೂ ವ್ಯತ್ಯಾಸವನ್ನು ನೀವು ಕಾಣಬಹುದು. ಕನಿಷ್ಠ 4.85 ಲಕ್ಷ ರೂಪಾಯಿಯಿಂದ ಗರಿಷ್ಠ 6.84 ಲಕ್ಷ ರೂಪಾಯಿವರೆಗೂ ಇದೆ. ಇದು ದಿಲ್ಲಿ ಎಕ್ಸ್ ಶೋರೂಮ್ ಬೆಲೆಯಾಗಿದೆ.
ಗುಜರಿ ನೀತಿಯಡಿ ಹಳೆಯ ವಾಹನ ತ್ಯಜಿಸಿ ಹೊಸ ವಾಹನ ಖರೀದಿಸಿದ್ರೆ ಶೇ.5ರಷ್ಟು ರಿಯಾಯ್ತಿ!
ಟಿಯಾಗೋ XTA ಕಾರ್ ಬಿಡುಗಡೆ
ಇತ್ತೀಚೆಗೆಷ್ಟೇ ಟಾಟಾ ಮೋಟಾರ್ಸ್ ತನ್ನ ಯಶಸ್ವಿ ಹ್ಯಾಚ್‍ಬ್ಯಾಕ್ ಟಿಯಾಗೋವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 5.99 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಟಾಟಾ ಟಿಯಾಗೊದ XTA ಟ್ರಿಮ್‍ಗೆ AMT ರೂಪಾಂತರವನ್ನು ಸೇರಿಸುವ ಮುಖಾಂತರ ಕಂಪನಿಯು ತನ್ನ ಸ್ವಯಂಚಾಲಿತ ಶ್ರೇಣಿಯನ್ನು 4 AMT ಆಯ್ಕೆಗಳೊಂದಿಗೆ ಬಲಪಡಿಸುತ್ತದೆ. ಈಗ ಟಿಯಾಗೊ ಶ್ರೇಣಿಯಲ್ಲಿ ಆಯ್ಕೆ ಮಾಡಲು ಗ್ರಾಹಕರು ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ. 4-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿರುವ ಟಿಯಾಗೋ ಸಣ್ಣ ಕಾರಿನಲ್ಲಿ ಗರಿಷ್ಠ ಸೇಫ್ಟಿ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿವಿಧ ರೋಮಾಂಚಕಾರಿ ವೈಶಿಷ್ಟ್ಯಗಳೊಂದಿಗೆ ಬರುವುದರಿಂದ ಇದು 3.25 ಲಕ್ಷ ಸಂತೃಪ್ತ ಗ್ರಾಹಕರ ಸೂಕ್ತ ಆಯ್ಕೆಯಾಗಿದೆ.