ಜನಪ್ರಿಯ ಎಸ್‌ಯುವಿ ಟಾಟಾ ನೆಕ್ಸಾನ್ ಕಾರು ಇದೀಗ ಹೊಸ ಹೆಸರಿನಡಿಯಲ್ಲಿ ರಿಬ್ರ್ಯಾಂಡ್ ಮಾಡಲಾಗಿದೆ. ಟಾಟಾ ನೆಕ್ಸಾನ್ ಇದೀಗ ಆಸ್ಪ್ರೆ ಹೆಸರಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಏನಿದು ಘಟನೆ?
ನವದೆಹಲಿ (ಜು.20) ಭಾರತದಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಪೈಕಿ ಟಾಟಾ ನೆಕ್ಸಾನ್ ಹಲವು ದಾಖಲೆ ಬರೆದಿದೆ. ಗರಿಷ್ಠ ಸುರಕ್ಷತೆ, ಅತ್ಯಂಕ ಆಕರ್ಷಕ ಕಾರು, ಮಾರಾಟದಲ್ಲೂ ದಾಖಲೆ ಸೇರಿದಂತೆ ಹಲವು ಇತಿಹಾಸ ನಿರ್ಮಿಸಿದೆ. ಟಾಟಾ ನೆಕ್ಸಾನ್ ಬಹುತೇಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ನೆಕ್ಸಾನ್ ಅನ್ನೋ ಹೆಸರಿನಲ್ಲಿ ಭಾರತೀಯರ ಮನ ಗೆದ್ದಿರುವ ಟಾಟಾದ ಎಸ್‌ಯುವಿ ಕಾರು ಇದೀಗ ಅಸ್ಪ್ರೆ (Osprey) ಹೆಸರಿನಡಿ ರಿಬ್ರ್ಯಾಂಡ್ ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹೊಸ ಹೆಸರಿನ ಆಸ್ಪ್ರೆ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.
ದಕ್ಷಿಣಾ ಆಫ್ರಿಕಾಗೆ ಟಾಟಾ ನೆಕ್ಸಾನ್
ಭಾರತದ ಟಾಟಾ ನೆಕ್ಸಾನ್ ದಕ್ಷಿಣಾ ಆಫ್ರಿಕಾ ಕಾರು ಮಾರುಕಟ್ಟೆಗೆ ರಫ್ತಾಗುತ್ತಿದೆ. ಟಾಟಾ ನೆಕ್ಸಾನ್ ಇದೀಗ ದಕ್ಷಿಣಾ ಆಫ್ರಿಕಾದಲ್ಲಿ ಲಭ್ಯವಾಗುತ್ತಿದೆ. ವಿಶೇಷ ಅಂದರೆ ದಕ್ಷಿಣಾ ಆಫ್ರಿಕಾದಲ್ಲಿ ಟಾಟಾ ನೆಕ್ಸಾನ್ ಅಲ್ಲ, ಇದು ಟಾಟಾ ಆಸ್ಪ್ರೆಯಾಗಿ ಗುರುತಿಸಿಕೊಳ್ಳಲಿದೆ.
ಯಾಕೆ ಆಸ್ಪ್ರೆ ಹೆಸರು?
ಭಾರತದಲ್ಲಿ ಟಾಟಾ ನೆಕ್ಸಾನ್ ಕಾರು ಅತೀ ಹೆಚ್ಚು ಜನಪ್ರಿಯತೆ ಹೊಂದಿದೆ. ಮಾರಾಟದಲ್ಲೂ ಇತರ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ಸೆಡ್ಡು ಹೊಡೆದಿದೆ. ದಕ್ಷಿಣಾ ಆಫ್ರಿಕಾದಲ್ಲಿನ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಆಸ್ಪ್ರೆ ಹೆಸರಿಡಲಾಗಿದೆ. ಆಸ್ಪ್ರೆ ದಕ್ಷಿಣಾ ಆಫ್ರಿಕಾದಲ್ಲಿ ಕಾಣಸಿಗುವ ಹಕ್ಕಿ. ಇದು ಬೇಟೆ ಹಕ್ಕಿಯಾಗಿದ್ದು, ತೀವ್ರ ದೃಷ್ಟಿ ಹಾಗೂ ಚುರುಕಾದ ಬೇಟೆ ಹಕ್ಕಿ ಎಂದು ಗುರುತಿಸಿಕೊಂಡಿದೆ. ವಿಶೇಷ ಅಂದರೆ ಟಾಟಾ ನೆಕ್ಸಾನ್ ಕಾರು ಉತ್ಪಾದನೆ, ನಿರ್ಮಾಣ ಹಂತದಲ್ಲಿ ಆಸ್ಪ್ರೆ ಎಂದೇ ಕೋಡ್‌ನೇಮ್ ಇಡಲಾಗಿತ್ತು. ಬಿಡುಗಡೆ ವೇಳೆ ನೆಕ್ಸಾನ್ ಎಂದು ಹೆಸರಿಡಲಾಗಿದೆ. ದಕ್ಷಿಣಾ ಆಫ್ರಿಕಾದ ಒರಟಾದ ರಸ್ತೆಯಲ್ಲೂ ನೆಕ್ಸಾನ್ ಸರಾಗವಾಗಿ ಸಾಗಲಿದೆ.
10 ಲಕ್ಷ ಕಾರು ಮಾರಾಟ
ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ನೆಕ್ಸಾನ್ ಲಭ್ಯವಿದೆ. ಒಟ್ಟು 10 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿದೆ. 2026ರ ಅಂತಿಮ ಹಂತದಲ್ಲಿ ನೆಕ್ಸಾನ್ ಕಾರು ದಕ್ಷಿಣಾ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ. ದಕ್ಷಿಣಾ ಆಫ್ರಿಕಾ ಗ್ರಾಹಕರಿಗೆ ಅತ್ಯುತ್ತಮ, ಆಕರ್ಷಕ ಹಾಗೂ ಅತ್ಯಾಧುನಿಕ ಕಾರು ಮಾತ್ರವಲ್ಲ, ಅತ್ಯಂತ ಸುರಕ್ಷತೆ ಕಾರಿನ ಅವಶ್ಯಕತೆ ಇದೆ. ಇದು ಕೂಡ ಕೈಗೆಟುಕುವ ಬೆಲೆಯಲ್ಲಿ ದಕ್ಷಿಣಾ ಆಫ್ರಿಕಾ ಗ್ರಾಹಕರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಮಗೆ ಟಾಟಾ ಆಸ್ಪ್ರೆ ಮೊದಲ ಆಯ್ಕೆಯಾಗಿದೆ ಎಂದು ಟಾಟಾ ಮೋಟಾರ್ಸ್ ದಕ್ಷಿಣಾ ಆಫ್ರಿಕಾ ಮ್ಯಾನೇಜರ್ ಜೆಫ್ ಅಲಿಸನ್ ಹೇಳಿದ್ದಾರೆ.
5 ಸ್ಟಾರ್ ಸುರಕ್ಷತೆ
ಟಾಟಾ ನೆಕ್ಸಾನ್ ವಿಶ್ವದ ಗಮನ ಸೆಳೆದ ಕಾರು. ಪ್ರಮುಖವಾಗಿ ಕೈಗೆಟುಕುವ ದರದಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದ ಕಾರು. ಲಕ್ಷುರಿ ಹಾಗೂ ದುಬಾರಿ ಕಾರುಗಳಲ್ಲಿ ಮಾತ್ರ 5 ಸ್ಟಾರ್ ಸೇಫ್ಟಿ ಸುರಕ್ಷತೆ ನೀಡಲಾಗುತ್ತಿತ್ತು. ಭಾರತದಲ್ಲಿ ಕಾರಿನ ಸುರಕ್ಷತಾ ಮಾನದಂಡ ಹಾಗೂ ಗ್ರಾಹಕರ ಯೋಚನೆ ಬದಲಿಸಿದ ಕಾರು ಟಾಟಾ ನೆಕ್ಸಾನ್. ಗಟ್ಟಿಮುಟ್ಟಾದ ಕಾರು ಭಾರತದಲ್ಲಿ ಟಾಪ್ ಎಸ್‌ಯುವಿ ಕಾರು ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.


