ಕರ್ನಾಟಕ ಅರಣ್ಯ ಸಂಪತ್ತಿಗೆ ಟಾಟಾ ಗೌರವ, ಹೊಸ ಬಂಡೀಪುರ ಎಡಿಶನ್ ಕಾರು ಅನಾವರಣ
ಕರ್ನಾಟಕದ ಅರಣ್ಯ ಸಂಪತ್ತು, ಪ್ರಾಣಿ ಸಂಕುಲಕ್ಕೆ ಟಾಟಾ ಮೋಟಾರ್ಸ್ ಗೌರವ ನೀಡಿದೆ. ಇದೀಗ ಟಾಟಾ ಮೋಟಾರ್ಸ್ ಬಂಡೀಪುರ ಎಡಿಶನ್ ಕಾರು ಅನಾವರಣ ಮಾಡಿದೆ. ಟಾಟಾ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ಇವಿ ಕಾರುಗಳನ್ನು ಬಂಡೀಪುರ ಆನೆ ಲೋಗೋ ಅಡಿಯಲ್ಲಿ ಅನಾವರಣ ಮಾಡಿದೆ.

ನವದೆಹಲಿ(ಜ.20) ಟಾಟಾ ಮೋಟಾರ್ಸ್ ದೇಶದ ಹೆಮ್ಮೆಯ ಆಟೋಮೊಬೈಲ್ ಕಂಪನಿ. ಭಾರತೀಯರಿಗೆ ಕೈಗೆಟುಕುವ ದರದಲ್ಲಿ 5 ಸ್ಟಾರ್ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸದ ಕಾರುಗಳನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಕರ್ನಾಟಕ ಅರಣ್ಯ ಹಾಗೂ ಪ್ರಾಣಿ ಸಂಪತ್ತಿಗೆ ವಿಶೇಷ ಗೌರವ ನೀಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಅಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಪ್ರಮುಖ ಮೂರು ಕಾರುಗಳನ್ನು ಅನಾವರಣ ಮಾಡಿದೆ. ವಿಶೇಷ ಅಂದರೆ ಇದು ಬಂಡಿಪುರ ಎಡಿಶನ್ ಕಾರು. ಈ ಕಾರಿನಲ್ಲಿ ಬಂಡಿಪುರ ಕಾಡಾನೆ ಲೋಗೋ ಬಳಸಲಾಗಿದೆ. ಇಷ್ಟೇ ಅಲ್ಲ ಕೆಲ ವಿಶೇಷತೆಗಳು ಈ ಕಾರಿನಲ್ಲಿದೆ.
ದೆಹಲಿ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ವಿಶ್ವದ ಗಮನಸೆಳೆಯುತ್ತಿದೆ. ಈಗಾಲೇ ಟಾಟಾ ಹ್ಯಾರಿಯರ್ ಇವಿ, ಟಾಟಾ ಸಿಯೆರಾ ಪ್ರೊಡಕ್ಷನ್ ವರ್ಶನ್ ಕಾರುಗಳನ್ನು ಪರಿಚಯಿಸಿದೆ. ಇದರ ಜೊತೆಗೆ ಬಂಡಿಪುರ ಎಡಿಶನ್ ಕಾರುಗಳನ್ನು ಅನಾವರಣ ಮಾಡಿದೆ. ಬಂಡಿಪುರ ಎಡಿಶನ್ ಅಡಿಯಲ್ಲಿ ಟಾಟಾ ಹ್ಯಾರಿಯರ್, ಟಾಟಾ ಸಫಾರಿ ಹಾಗೂ ಟಾಟಾ ನೆಕ್ಸಾನ್ ಇವಿ ಕಾರುಗಳು ಲಭ್ಯವಿದೆ.
ಕೇವಲ 5.99 ಲಕ್ಷ ರೂಗೆ ಕಾರು ಕನಸು ನನಸಾಗಿಸಿ, ಹೊಸ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಬಿಡುಗಡೆ
ಬಂಡಿಪುರ ಅರಣ್ಯ ಹಾಗೂ ಪ್ರಾಣಿ ಸಂಪತ್ತಿಗೆ ವಿಶೇಷ ಗೌರವ ನೀಡುವ ನಿಟ್ಟಿನಲ್ಲಿ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಇದೀಗ ಬಂಡಿಪುರ ಎಡಿಶನ್ ಕಾರು ಅನಾವರಣ ಮಾಡಿದೆ. ಬಂಡಿಪುರ ಭಾರತದ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಿತ ತಾಣವಾಗಿದೆ. ಇಷ್ಟೇ ಅಲ್ಲ ದಕ್ಷಿಣ ಏಷ್ಯಾದಲ್ಲಿ ಅತೀ ಹೆಚ್ಚು ಆನೆ ಸಂಖ್ಯೆ ಹೊಂದಿರುವ ಸಂರಕ್ಷಿತ ತಾಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಟಾ ಮೋಟಾರ್ಸ್ ಕೆಲ ವರ್ಷಗಳ ಹಿಂದೆ ಅಸ್ಸಾಂನಲ್ಲಿರುವ ಕಾಝಿರಂಗ ರಾಷ್ಟ್ರೀಯ ಸಂರಕ್ಷಿತ ತಾಣದಲ್ಲಿ ಘೇಂಡಾಮೃಗಗಳ ಕುರಿತು ಜಾಗೃತಿ ಹಾಗೂ ಉಳಿವಿಗಾಗಿ ಟಾಟಾ ಕಾಝಿರಂಗ ಎಡಿಶನ್ ಕಾರು ಬಿಡುಗಡೆ ಮಾಡಿತ್ತು. ಬಳಿಕ ಈ ಕಾಝಿರಂಗ ಎಡಿಶನ್ ಕಾರುಗಳ ಮಾರಾಟದಿಂದ ಬಂದ ಹಣದಲ್ಲಿ ಒಂದು ಪಾಲನ್ನು ರಾಷ್ಟ್ರೀಯ ಸಂರಕ್ಷಿತಣ ತಾಣಕ್ಕೆ ನೀಡಿತ್ತು. ಇದೀಗ ಕಾಝಿರಂಗ ಎಡಿಶನ್ ಕಾರುಗಳನ್ನು ಸ್ಥಗಿತಗೊಳಿಸಿರುವ ಟಾಟಾ ಮೋಟಾರ್ಸ್ ಈ ಬಾರಿ ಬಂಡಿಪುರ ಎಡಿಶನ್ ಕಾರುಗಳನ್ನು ಅನಾವರಣ ಮಾಡಿದೆ.
ಬಂಡಿಪುರ ಎಡಿಶನ್ ಕಾರಿನ ವಿಶೇಷತೆ ಏನು?
ಪ್ರಮುಖವಾಗಿ ಅಲೋಯ್ ವ್ಹೀಲ್ಸ್ ಡಿಸೈನ್ ಬದಲಾಗಿದೆ. ರಿವೈಟ್ ಡಿಸೈನ್‌ನಲ್ಲಿ ಅಲೋಯ್ ವ್ಹೀಲ್ ಹೊರತಂದಿದೆ. ಇನ್ನು ರೂಫ್ ಕ್ಯಾರಿಯರ್‌ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ರೂಫ್ ಬಾಕ್ಸ್ ನೀಡಲಾಗಿದೆ. ಈ ಮೂಲಕ ರಗಡ್ ಲುಕ್ ನೀಡಲಾಗಿದೆ. ಆಕ್ಸಿಲರಿ ಎಲ್ಇಡಿ ಲೈಟ್ಸ್ ಸೇರಿದಂತೆ ಒಂದಷ್ಟು ಬದಲಾವಣೆಗಳು ಈ ಕಾರಿನಲ್ಲಿದೆ.
40 ವರ್ಷಗಳ ಮಾರುತಿ ಸುಜುಕಿ ಅಧಿಪತ್ಯ ಅಂತ್ಯ, ಟಾಟಾದ ಈ ಕಾರು ಮಾರಾಟದಲ್ಲಿ ನಂ.1