Asianet Suvarna News Asianet Suvarna News

Sanand Unit ಫೋರ್ಡ್ ಘಟಕ ಸ್ವಾಧೀನಕ್ಕೆ ಟಾಟಾ ಮೋಟಾರ್ಸ್‌ಗೆ ಗ್ರೀನ್ ಸಿಗ್ನಿಲ್!

  • ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಫೋರ್ಡ್
  • ಫೋರ್ಡ್ ಘಟಕ ಸ್ವಾಧೀನಕ್ಕೆ ಗುಜರಾತ್ ಒಪ್ಪಿಗೆ
  • ಟಾಟಾ ತೆಕ್ಕೆಗೆ ಗುಜರಾತ್‌ನ ಸನಂದ್ ಉತ್ಪಾದನಾ ಘಟಕ 
Tata Motors to take over Ford India passenger car manufacture unit after Gujarat Cabinet nod ckm
Author
Bengaluru, First Published May 30, 2022, 3:45 PM IST | Last Updated May 30, 2022, 3:46 PM IST

ಅಹಮ್ಮದಾಬಾದ್(ಮೇ.30): ಟಾಟಾ ಮೋಟಾರ್ಸ್ ವಾಹನ ಉತ್ಪಾದನೆಗೆ ಮತ್ತಷ್ಟು ವೇಗ ಸಿಕ್ಕಿದೆ. ಭಾರತದಲ್ಲಿ ಸ್ಥಗಿತಗೊಂಡಿರುವ ಫೋರ್ಡ್ ಉತ್ಪಾದನಾ ಘಟಕವನ್ನು ಟಾಟಾ ಮೋಟಾರ್ಸ್ ಸ್ವಾಧೀನ ಪಡಿಸಿಕೊಳ್ಳಲು ಗುಜರಾತ್ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇನ್ನಮುಂದೆ ಗುಜರಾತ್‌ನ ಸನಂದ್ ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಆಡಳಿತದಲ್ಲಿ ಕಾರ್ಯನಿರ್ವಹಸಲಿದೆ.

ಫೋರ್ಡ್ ಹಾಗೂ ಟಾಟಾ ಮೋಟಾರ್ಸ್ ಎರಡೂ ಕಂಪನಿಗಳು ಗುಜರಾತ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಫೋರ್ಡ್ ಘಟಕವನ್ನು ಸ್ವಾಧೀನಕ್ಕೆ ಪಡೆಯಲು ಕ್ಯಾಬಿನೆಟ್ ಸಮಿತಿ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಕಳೆದವಾರ ಗುಜರಾತ್ ಸಂಪುಟ ಸಮಿತಿ ಘಟಕ ಹಸ್ತಾಂತರಕ್ಕೆ ಅನುಮೋದನೆ ನೀಡಿತ್ತು.

ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್!

ಗುಜರಾತ್ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಫೋರ್ಡ್ ಹಾಗೂ ಟಾಟಾ ಮೋಟಾರ್ಸ್ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ.  ಕಳೆದ ವರ್ಷ ಫೋರ್ಡ್ ಇಂಡಿಯಾ ಭಾರತದಲ್ಲಿ ಕಾರು ಉತ್ಪಾದನೆ ಸ್ಥಗಿತಗೊಳಿಸಿತ್ತು. ಫೋರ್ಡ್ ಕಾರುಗಳ ಮಾರಟ ಕುಸಿತ, ಕಚ್ಚಾವಸ್ತುಗಳ ಆಮದು ವೆಚ್ಚ ಹೆಚ್ಚಳದಿಂದ ಫೋರ್ಡ್ ಉತ್ಪಾದನೆ ಸ್ಥಗಿತಗೊಳಿಸಿತ್ತು. 

ಭಾರತದಲ್ಲಿ ಫೋರ್ಡ್‌ ಕಾರು ಉತ್ಪಾದನೆ ಸ್ಥಗಿತ
ಅಮೆರಿಕದ ಜನಪ್ರಿಯ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದಾದ ಫೋರ್ಡ್‌ ಮೋಟ​ರ್‍ಸ್ ಭಾರತದಲ್ಲಿರುವ ತನ್ನ ಎರಡೂ ಘಟಕಗಳನ್ನು ಸ್ಥಗಿತಗೊಳಿಸಿದೆ. ಕಾರು ಉತ್ಪಾದನಾ ಘಟಕ ನಷ್ಟದಲ್ಲಿ ಇರುವ ಕಾರಣ ಅದನ್ನು ಮುಚ್ಚುವ ತೀರ್ಮಾನ ಕೈಗೊಂಡಿತ್ತು. ಸುಮಾರು ಒಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಫೋರ್ಡ್‌ ಕಂಪನಿ ತಿಳಿಸಿತ್ತು, ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿತ್ತು.

ಗುಜರಾತಿನ ಸಾನಂದ್‌ ಮತ್ತು ತಮಿಳುನಾಡಿನ ಮರೈಮಲಾಯ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿದೆ. ಉತ್ಪಾದನೆ ಸ್ಥಗಿತವಾಗಿದ್ದರೂ ಆಮದಿನ ಮೂಲಕ ಭಾರತದಲ್ಲಿ ಕಾರುಗಳ ಮಾರಾಟವನ್ನು ಫೋರ್ಡ್‌ ಮುಂದುವರಿಸಲಿದೆ. ಜೊತೆಗೆ ಹಾಲಿ ಗ್ರಾಹಕರಿಗೆ ಕಾರುಗಳ ಸವೀರ್‍ಸ್‌ ನೀಡಲು ಡೀಲರ್‌ಗಳನ್ನು ಬೆಂಬಲಿಸುವುದಾಗಿಯೂ ತಿಳಿಸಿದೆ. ಜನರಲ್‌ ಮೋಟ​ರ್‍ಸ್ ಬಳಿಕ ಭಾರತದಲ್ಲಿ ಘಟಕವನ್ನು ಸ್ಥಗಿತಗೊಳಿಸುತ್ತಿರುವ ಅಮೆರಿಕ ಮೂಲದ ಎರಡನೇ ಕಂಪನಿ ಇದಾಗಿದೆ.

Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

ಕಾರ್ಮಿಕರ ಹಿತರಕ್ಷಣೆಗೆ ಬದ್ಧ: ಟಾಟಾ ಮೋಟಾರ್ಸ್‌
ಟಾಟಾ ಮಾರ್ಕೊಪೋಲೋ ತನ್ನ ಉದ್ಯೋಗಿಗಳಿಗೆ ಸಮಗ್ರ ವೇತನ ಮತ್ತು ಪ್ರಯೋಜನಗಳ ಪ್ಯಾಕೇಜ್‌ನ್ನು ನೀಡುತ್ತಿದೆ. ಇದು ಈ ಭಾಗದ ಮತ್ತು ಉದ್ಯಮದಲ್ಲಿಯೇ ನೀಡಲಾಗುತ್ತಿರುವ ಉತ್ತಮ ಸೌಲಭ್ಯ ಎಂದು ಕಂಪನಿಯು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಕಂಪನಿಯ ನೂರಾರು ಕಾರ್ಮಿಕರು ಪ್ರತಿಭಟನೆ ಮಾಡಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಂಪನಿಯು ತನ್ನ ನೌಕರರಿಗೆ ಮತ್ತು ಅವರ ಕುಟುಂಬಗಳ ಹಿತರಕ್ಷಣೆಗೆ ಪ್ರಗತಿದಾಯಕ ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕ ಸಂಘಟನೆಯ ಬೇಡಿಕೆಗಳನ್ನು ಪಡೆದ ನಂತರ ಹಲವಾರು ಸುತ್ತಿನ ಮಾತುಕತೆ ನಡೆಸಲಾಯಿತು. ಆದರೆ, ಉತ್ತಮ ಪ್ರಯತ್ನಗಳ ಹೊರತಾಗಿಯೂ ಒಪ್ಪಿಗೆಯ ವೇತನ ಇತ್ಯರ್ಥ ಸಾಧ್ಯವಾಗಿಲ್ಲ. ಆದ್ದರಿಂದ, ಸೂಕ್ತ ಸರ್ಕಾರಿ ಅಧಿಕಾರಿಗಳು ರಾಜಿ ಸಂಧಾನ ಆರಂಭಿಸಿದ್ದಾರೆ. ಕಂಪನಿಯು ಈ ಪ್ರಯತ್ನದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos
Follow Us:
Download App:
  • android
  • ios