Nexon EV 400 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ
- 2022ರ ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು
- ಒಂದು ಬಾರಿ ಚಾರ್ಜ್ ಮಾಡಿದರೆ 400 ಕಿ.ಮೀ ಮೈಲೇಜ್ ರೇಂಜ್
- ಹ್ಯುಂಡೈ ಕೋನಾ,ಎಂಜಿ ZS ಕಾರಿಗೆ ಪ್ರತಿಸ್ಪರ್ಧಿ
ಮುಂಬೈ(ಮಾ.23): ಭಾರತದ ಎಲೆಕ್ಟ್ರಿಕ್ ಕಾರು(Electric Car Market) ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಟಾಟಾ ಮೋಟಾರ್ಸ್(Tata Motors) ಇದೀಗ ಪ್ರತಿಸ್ಪರ್ಧಿಗಳಿಗೆ ಟಕ್ಕರ್ ನೀಡಲು ರೆಡಿಯಾಗಿದೆ. ಹ್ಯುಂಡೈ ಕೋನಾ, ಎಂಜಿ ZS ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ 2022ರ ಹೊಸ ನೆಕ್ಸಾನ್ ಇವಿ(Nexon EV) ಕಾರು ಬಿಡುಗಡೆ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರು 312 ಕಿ.ಮೀ ಮೈಲೇಜ್ ಹೊಂದಿದ್ದರೆ, ನೂತನ ನೆಕ್ಸಾನ್ ಇವಿ ಕಾರು 400 ಪ್ಲಸ್ ಮೈಲೇಜ್ ನೀಡಲಿದೆ.
ಶೀಘ್ರದಲ್ಲೇ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರು 40kWh ಬ್ಯಾಟರಿ ಹೊಂದಿದೆ. ಹೀಗಾಗಿ ಕಾರಿನ ವಿನ್ಯಾಸದಲ್ಲೂ ಬದಲಾವಣೆಯಾಗಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 400ಕ್ಕಿಂತ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ವರದಿಯಾಗಿದೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!
ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನಲ್ಲಿ 30.2kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದೀಗ 40kWh ಬ್ಯಾಟರಿ ಬ್ಯಾಕ್ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಗಾತ್ರ ಹಾಗೂ ತೂಕದಲ್ಲೂ ಹೆಚ್ಚಾಗಿದೆ. ಈ ದೊಡ್ಡ ಗಾತ್ರದ ಬ್ಯಾಟರಿ ಅಳವಡಿಕೆಗೆ ಕಾರಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಗ್ರಾಹಕರ ಸ್ಥಳವಕಾಶಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕಾರಣ ಹೊಸ ಬ್ಯಾಟರಿ ಸದ್ಯ ಮಾರುಕಟ್ಟೆಯಲ್ಲಿರುವ 30.2kW ಬ್ಯಾಟರಿಗಿಂತ 100 ಕೆಜಿ ಹೆಚ್ಚಿನ ತೂಕ ಹೊಂದಿದೆ.
ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನ ಬೆಲೆ 14.224 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಹೊಸ ಕಾರಿನಲ್ಲಿ ದೊಡ್ಡ ಬ್ಯಾಟರಿ ಬಳಕೆ ಮಾಡುತ್ತಿರುವುದರಿಂದ 3 ರಿಂದ 4 ಲಕ್ಷ ರೂಪಾಯಿ ಹೆಚ್ಚಾಗಲಿದೆ. ಹೀಗಾಗಿ ನೂತನ ನೆಕ್ಸಾನ್ ಇವಿ ಕಾರಿನ ಬೆಲೆ 18 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ!
ಇತ್ತೀಚೆಗೆ ಟಾಟಾ ಮೋಟಾರ್ಸ್ ಟಿಗೋರ್ ಇವಿ ಕಾರನ್ನು ಜಿಪ್‌ಟ್ರಾನ್ ಟೆಕ್ನಾಲಜಿ ಮೂಲಕ ಅಭಿವೃದ್ಧಿಪಡಿಸಿದೆ. ನೂತನ ಟಿಗೋರ್ ಎಲೆಕ್ಟ್ರಿಕ್ ಕಾರು 306 ಕಿಲೋಮೀಟರ್ ಮೈಲೇಜ್ ನೀಡಲಿದೆ. 2026ರ ವೇಳೆಗೆ ಟಾಟಾ ಮೋಟಾರ್ಸ್ ಭಾರತದಲ್ಲಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇದೀಗ ಒಂದರ ಮೇಲೊಂದರಂತೆ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
ಹೊಸ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆಯಾಗುತ್ತಿದೆ. ಆದರೆ ಈಗಾಗಲೇ ಬಿಡುಗಡೆಯಾಗಿರುವ ನೆಕ್ಸಾನ್ ಇವಿ ಕಾರು ಕೂಡ ಖರೀದಿಗೆ ಲಭ್ಯವಿರಲಿದೆ. ಮೈಲೇಜ್ ರೇಂಜ್ ಹಾಗೂ ಬೆಲೆಕ್ಕೆ ಅನುಗುಣುವಾಗಿ ಗ್ರಾಹಕರು ಕಾರು ಖರೀದಿಸುವ ಅವಕಾಶವನ್ನು ಟಾಟಾ ಮೋಟಾರ್ಸ್ ನೀಡಿದೆ.
ತಿಂಗಳ ಬಾಡಿಗೆಗೆ ಟಾಟಾ ನೆಕ್ಸಾನ್ ಕಾರುಗಳು
ಟಾಟಾ ನೆಕ್ಸಾನ್ ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಸಬ್‌ಸ್ಕಿ್ರಪ್ಶನ್‌ಅನ್ನು ಘೋಷಿಸಿದೆ. ಕನಿಷ್ಠ 41,900 ರು.ನಂತೆ ಪ್ರತೀ ತಿಂಗಳಿಗೆ ಬಾಡಿಗೆ ಪಾವತಿಸಿ ಈ ಕಾರುಗಳ ಬಳಕೆ ಮಾಡಬಹುದು. ಕನಿಷ್ಠ 18 ತಿಂಗಳಿಂದ 34 ತಿಂಗಳವರೆಗೂ ಈ ಸಬ್‌ಸ್ಕಿ್ರಪ್ಶನ್‌ಗೆ ಅವಕಾಶವಿದೆ. 18 ತಿಂಗಳಿಗೆ ಸಬ್‌ಸ್ಕೆ್ರೖಬ್ ಆಗೋದಾದ್ರೆ ತಿಂಗಳ ಬಾಡಿಗೆ ಮೊತ್ತ 47,900 ರು.ಗಳಷ್ಟಾಗುತ್ತದೆ. 32 ತಿಂಗಳಿಗೆ 41,900 ರು. ಮೊತ್ತವಿದೆ. ವೆಹಿಕಲ್ ರಿಜಿಸ್ಪ್ರೇಶನ್, ರೋಡ್ ಟ್ಯಾಕ್ಸ್‌ಗಳ ಹೊರೆ ಇರುವುದಿಲ್ಲ. ಇನ್‌ಶ್ಯೂರೆನ್ಸ್ ಜೊತೆಗೆ ಫ್ರೀ ಮೈಂಟೇನೆನ್ಸ್ ವ್ಯವಸ್ಥೆಯೂ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.