ಹೊಚ್ಚ ಹೊಸ XPRES-T ಎಲೆಕ್ಟ್ರಿಕ್ ಕಾರು ಪರಿಚಯಿಸಲಿದೆ ಟಾಟಾ ಮೋಟಾರ್ಸ್!

  • ಫ್ಲೀಟ್ ಗ್ರಾಹಕರಿಗಾಗಿಯೇ ಎಲೆಕ್ಟ್ರಿಕ್ ಕಾರು XPRES-T ಪರಿಚಯಿಸಲಿದೆ  ಟಾಟಾ
  • ಶೀಘ್ರ ಚಾರ್ಜಿಂಗ್, ಗರಿಷ್ಠ ಮೈಲೇಜ್ ಹಾಗೂ ಕಡಿಮೆ ಬೆಲೆಯ ಕಾರು
  • ಒಂದು ಬಾರಿ ಚಾರ್ಜ್ ಮಾಡಿದರೆ -213 ಕಿ.ಮೀ ಮೈಲೇಜ್
Tata Motors launches the XPRES elctric car brand for fleet customers ckm

ಬೆಂಗಳೂರು(ಜು.14) : ಭಾರತದ ಮುಂಚೂಣಿ ಆಟೋಮೊಬೈಲ್ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾದ ಟಾಟಾ ಮೋಟರ್ಸ್, ಇದೀಗ ಹೊಚ್ಚ ಹೊಸ   XPRES-T ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 213 ಕಿ.ಮೀ ಮೈಲೇಜ್ ನೀಡಬಲ್ಲ, ಶೀಘ್ರದಲ್ಲಿ ಚಾರ್ಜಿಂಗ್ ವ್ಯವಸ್ಥೆ ಇರುವ ಕಾರಾಗಿದೆ. 

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

‘XPRES’ಬ್ರ್ಯಾಂಡ್ ಅಡಿ ಬರುವ ಮೊದಲ ವಾಹನವು, ‘XPRES-T’ EV ಕರೆಯಲ್ಪಡುವ  ಎಲೆಕ್ಟ್ರಿಕ್ ಸೆಡಾನ್‍ಆಗಿರಲಿದೆ. ‘XPRES-T’ EV, ಗರಿಷ್ಟ ಬ್ಯಾಟರಿ,  ಶೀಘ್ರ ಚಾರ್ಜಿಂಗ್ ಪರಿಹಾರದೊಂದಿಗೆ ಸಜ್ಜಾಗಿರಲಿದ್ದು, ಸುರಕ್ಷತೆ ಹಾಗು ಪ್ರಯಾಣಿಕ ಆರಾಮದ ಜೊತೆಗೆ ಕಡಿಮೆ ವೆಚ್ಚವನ್ನು ಖಾತರಿಪಡಿಸುತ್ತದೆ. 

ಹೊಚ್ಚ ಹೊಸ ‘XPRES-T’ ವಿದ್ಯುತ್ ಸೆಡಾನ್, ಬುಕಿಂಗ್‍ಗಳಿಗಾಗಿ ಭಾರತದಲ್ಲಿರುವ ಆಯ್ದ ಡೀಲರ್‍ಶಿಪ್‍ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ. ಇದು, 2 ರೇಂಜ್ ಆಯ್ಕೆಗಳೊಂದಿಗೆ-213 ಕಿ.ಮೀ ಹಾಗು 165 ಕಿ.ಮೀ (ARAI) ಪ್ರಮಾಣೀಕರಿಸಿರುವ ಶ್ರೇಣಿ ಯಲ್ಲಿ ಲಭ್ಯವಿದೆ.  21.5kWh ಹಾಗು 16.5 kWhನ ಅಧಿಕ ಸಾಂದ್ರತೆಯ ಬ್ಯಾಟರಿಯನ್ನು ಹೊಂದಿದೆ ಮತ್ತು ಕ್ರಮವಾಗಿ 90 ನಿಮಿಷ ಹಾಗೂ 110 ನಿಮಿಷಗಳಲ್ಲಿ . ಈ 0-80%ವರೆಗೆ ಚಾರ್ಜ್ ಮಾಡಬಹುದು ಅಥವಾ ಸುಲಭವಾಗಿ ಲಭ್ಯವಿರುವ ಹಾಗು ಸರಳವಾದ ಯಾವುದೇ 15 A ಪ್ಲಗ್ ಪಾಯಿಂಟ್‍ನಿಂದ ಸಾಮಾನ್ಯವಾಗಿಯೂಚಾರ್ಜ್ ಮಾಡಬಹುದು.

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!

ಶೂನ್ಯಟೇಲ್‍ಪೈಪ್ ಹೊಗೆಯುಗುಳುವಿಕೆ, ಒಂದೇ ವೇಗದ ಸ್ವಯಂಚಾಲಿತ ಪ್ರಸರಣ, ಡ್ಯುಯಲ್ ಏರ್‍ಬ್ಯಾಗ್ಸ್, ಇಬಿಡಿ ಇರುವ ಎಬಿಎಸ್ ಮುಂತಾದ ಅಂಶಗಳು  ಎಲ್ಲಾ ವೈವಿಧ್ಯದ ‘XPRES-T’ EVನಲ್ಲಿ ಸಾಮಾನ್ಯ ಅಳವಡಿಕೆಗಳಾಗಿರುತ್ತವೆ. ತನ್ನ ಒಳಾಂಗಣ ಹಾಗು ಹೊರಾಂಗಣಗಳಾದ್ಯಂತ, ಸಾಮಾನ್ಯ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಹಾಗು ಎಲೆಕ್ಟ್ರಿಕ್ ಬ್ಲೂ ಆ್ಯಕ್ಸೆಂಟ್‍ಗಳಿರುವ ಪ್ರೀಮಿಯಮ್ ಕಪ್ಪು ಥೀಮ್‍ನ ಒಳಾಂಗಣವು ಅದಕ್ಕೆ, ಇತರ ಟಾಟಾ ಕಾರುಗಳಿಗಿಂತ ವಿಭಿನ್ನವಾದ, ವಿಶಿಷ್ಟವಾದ ನೋಟವನ್ನು ಒದಗಿಸುತ್ತದೆ.

Latest Videos
Follow Us:
Download App:
  • android
  • ios